
ಸೂರತ್ (ನ. 30): ವಜ್ರದ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಕಳ್ಳನಾಗಿ ಬದಲಾದ ಕತೆ ಇದು. ಈತ ಕಳ್ಳಲಾಗಲು ಆತನ ಹೆಂಡತಿಯೇ ಕಾರಣ!
ಹೆಂಡತಿಯ ಐಷಾರಾಮಿ ಬೇಡಿಕೆ ಪೂರೈಸಿಲು ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿದಿದ್ದ. ಕಳ್ಳ ಪೊಲೀಸರಿಗೆ ಸರೆಸಿಕ್ಕಿದ್ದು ಎಲ್ಲ ವಿಚಾರ ಬಾಯಿಬಿಟ್ಟಿದ್ದಾನೆ.
ಆರೋಪಿ ಬಲ್ವಂತ್ ಚೌಹಾನ್ ಉತ್ರಾನ್ ನಿವಾಸಿ. ಈತನ ಹೆಂಡತಿಯ ಅಕ್ಕ ಐಷಾರಾಮಿ ಜೀವನ ನಡೆಸುತ್ತಿದ್ದಳು.. ಗಂಡನಿಗೆ ಪತ್ನಿ ಅದು ತಂದುಕೊಡು.. ಇದು ತಂದು ಕೊಡು ಎಂದು ಪೀಡಿಸುತ್ತಿದ್ದಳು.
ಬಾಡಿಗೆ ಪಡೆದು ಲೀಸ್‌ಗೆ ಕೊಡುವ ಐನಾತಿ ದಂಪತಿ.. ವಂಚಕರನ್ನು ಲಾಕ್ ಡೌನ್ ಬಿಟ್ಟಿಲ್ಲ!
ಲಾಕ್‌ಡೌನ್ ಸಂದರ್ಭ ಆರೋಪಿ ಕೆಲಸ ಕಳೆದುಕೊಂಡಿದ್ದಾನೆ. ಮಾಡುತ್ತಿದ್ದ ಕೆಲಸದಿಂದ ಬರುತ್ತಿದ್ದ 15- 20 ಸಾವಿರ ರೂ. ಸಹ ಕೈಸೇರುವುದು ನಿಂತಿದೆ. ಇನ್ನೊಂದು ಕಡೆ ಹೆಂಡತಿ ಕಾಟ ತಾಳಲಾರದಾಗಿದೆ.
ಹೇಗಾದರೂ ಸರಿ ಹಣ ಗಳಿಸಬೇಕು ಎಂದು ತೀರ್ಮಾನಿಸಿ ಬೈಕ್ ಕಳ್ಳತನಕ್ಕೆ ಇಳಿದಿದ್ದಾನೆ. ಕಪೋದರಾ, ವರಾಚಾ, ಅಮ್ರೋಲಿ ಮತ್ತು ಕತಾರ್ಗಂನಿಂದ ಸುಮಾರು 30 ದ್ವಿಚಕ್ರ ವಾಹನಗಳನ್ನು ಕದ್ದಿದ್ದಾನೆ.
ವಜ್ರದ ಘಟಕಗಳು ಮತ್ತು ಶಾಪಿಂಗ್ ಮಾಲ್ ಗಳ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕಳ್ಳತನ ಮಾಡಿದ್ದಾನೆ. ವಜ್ರದ ಘಟಕದಲ್ಲಿ ಮೊದಲು ಕೆಲಸ ಮಾಡುತ್ತಿದ್ದರಿಂದ ಅಲ್ಲಿನ ಸಿಬ್ಬಂದಿ ತಮ್ಮ ವಾಹನ ಬಿಟ್ಟು ಎಷ್ಟು ಸಮಯ ಒಳಗಡೆ ಇರುತ್ತಾರೆ ಎಂಬ ಐಡಿಯಾ ಇದ್ದ ಕಾರಣ ಚಾಲಾಖಿತನ ಮೆರೆದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ