ಬಾಡಿಗೆ ಪಡೆದು ಲೀಸ್‌ಗೆ ಕೊಡುವ ಐನಾತಿ ದಂಪತಿ.. ವಂಚಕರನ್ನು ಲಾಕ್ ಡೌನ್ ಬಿಟ್ಟಿಲ್ಲ!

By Suvarna NewsFirst Published Nov 30, 2020, 3:36 PM IST
Highlights

ಕೊನೆಗೂ ಬಲೆಗೆ ಬಿದ್ದ ವಂಚಕ ದಂಪತಿ/ ಮನೆಗಳನ್ನು ಬಾಡಿಗೆ ಪಡೆದು  ಲೀಸ್ ಕೊಡ್ತಿದ್ದ ದಂಪತಿ/ ಲಾಖ್ ಡೌನ್ ವೇಳೆ ಬಣ್ಣ ಬಟಾಬಯಲು/ ಅಸಲಿ ಮಾಲೀಕರಿಂದ ದೂರು ದಾಖಲು

ಬೆಂಗಳೂರು(ನ. 30) 42 ಜನರಿಗೆ  8 ಕೋಟಿ ಪಂಗನಾಮ ಹಾಕಿದ ಐನಾತಿ ದಂಪತಿಯು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಬಾಡಿಗೆಗೆ ಮನೆ ಪಡೆದು ಇತರರಿಗೆ ಭೋಗ್ಯಕ್ಕೆ‌ ನೀಡಿ ವಂಚನೆ ಮಾಡುತ್ತಿದ್ದ  ದಂಪತಿಯ ಕತೆಯೇ ರೋಚಕ

ವಂಚಕ ದಂಪತಿಯನ್ನ  ಬಾಣಸವಾಡಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೋಹರ್ ನಾನಾವತ್ ಹಾಗೂ ಶೀತಲ್ ನಾನಾವತ್ ಪೊಲೀಸರ ಆರೋಪಿ ದಂಪತಿ. 

ಬಾಣಸವಾಡಿ ವ್ಯಾಪ್ತಿಯಲ್ಲಿ ಮನೆಗಳನ್ನ ಬಾಡಿಗೆಗೆ ಪಡೆಯುತ್ತಿದ್ದ ಆರೋಪಿಗಳು ನಂತರ ಅದೇ ಮನೆಗಳನ್ನ ಲಕ್ಷ ಲಕ್ಷ ರೂಪಾಯಿಗೆ ಇತರರಿಗೆ ಭೋಗ್ಯಕ್ಕೆ ನೀಡುತ್ತಿದ್ದರು ಭೋಗ್ಯಕ್ಕೆ ಪಡೆದ ಹಣದಲ್ಲಿ ಮನೆಗಳ ಮೂಲ ಮಾಲೀಕರಿಗೆ ಬಾಡಿಗೆಗೆ ನೀಡುತ್ತಿದ್ದರು. ಉಳಿದ ಹಣವನ್ನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿ ಕೈಸುಟ್ಟುಕೊಂಡಿದ್ದರು.

ಮ್ಯಾಟ್ರಿಮೋನಿ ಸೈಟ್ ಗೆ ಲಾಗ್ ಇನ್ ಆಗುವ ಮುನ್ನ ಎಚ್ಚರ

ಲಾಕ್ ಡೌನ್ ಸಂದರ್ಭದಲ್ಲಿ ಮನೆ ಮಾಲಿಕರಿಗೆ ಬಾಡಿಗೆ ನೀಡುವುದನ್ನು ಆರೋಪಿಗಳು ನಿಲ್ಲಿಸಿದಾಗ ಭೋಗ್ಯಕ್ಕೆ ಪಡೆದವರ ಬಳಿ ಬಾಡಿಗೆ ಕೇಳಲಾರಂಭಿಸಿದ್ದ   ಮನೆ ಮಾಲೀಕರು ಬಾಡಿಗೆ ಕೇಳಿದ್ದಾರೆ. ಆ ಈ ವೇಳೆ ನವರಂಗಿ ದಂಪತಿಯ ಬಟಾಬಯಲಾಗಿದೆ.

ವಂಚನೆಗೆ ಒಳಗಾದವರು ಬಾಣಸವಾಡಿ ಠಾಣೆಗೆ ದೂರು ನೀಡಿದ್ದಾರೆ ಆರೋಪಿಗಳಿಂದ ಬರೋಬ್ಬರಿ 8  ಕೋಟಿಗೂ ಹೆಚ್ಚು ಹಣ ವಂಚನೆಯಾದ ಮಾಹಿತಿ ಇದ್ದು ವಿವರ ಕಲೆಹಾಕಲಾಗುತ್ತಿದೆ. 

 

click me!