
ಮುಂಬೈ (ನ. 30) ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶದಲ್ಲಿ ಕಠಿಣ ಕಾನೂನು ಜಾರಿ ಮಾಡಲಾಗಿದೆ. ಆದರೆ ಇದು ಸ್ವಲ್ಪ ವಿಚಿತ್ರ ಪ್ರಕರಣ.
ನನ್ನನ್ನು ಜೈನ ಧರ್ಮಕ್ಕೆ ಮತಾಂತರ ಆಗು ಎಂದು ಅತ್ತೆ-ಮಾವ ಒತ್ತಾಯ ಮಾಡುತ್ತಿದ್ದಾರೆ, ಕಾಪಾಡಿ ಎಂದು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ 28 ವರ್ಷದ ಮಹಿಳೆಯೊಬ್ಬರು ಪೊಲೀಸರ ಮೊರೆ ಹೋಗಿದ್ದಾರೆ.
ಅಹಮದಾಬಾದ್ ನ ಪ್ರಹ್ಲಾದ್ ನಗರದ ಮಹಿಳೆ ದೂರು ನೀಡಿದ್ದಾರೆ. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ನಾನು ಜೈನ ಧರ್ಮೀಯನನ್ನು ಪ್ರೀತಿಸಿ 2017ರಲ್ಲಿ ಮದುವೆಯಾಗಿದ್ದೆ. ನಾವಿಬ್ಬರು ಎಸ್‌ಜಿ ರಸ್ತೆಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆವು.
ಲವ್ ಜಿಹಾದ್ ವಿರುದ್ಧ ತಂದ ಕಾನೂನಿನ ಸಂಪೂರ್ಣ ವಿವರ
ಹಿಂದು ಸಂಪ್ರದಾಯದಂತೆ ನನ್ನ ಮದುವೆ ನಡೆದಿತ್ತು. 2017 ಫೆಬ್ರವರಿಯಲ್ಲಿ ಮದುವೆಯನ್ನು ನೋಂದಣಿ ಮಾಡಿಸಿಕೊಂಡಿದ್ದೇವೆ.
ನನ್ನ ಪತಿಗೆ ಜರ್ಮನಿಯನ್ನು ಹೊಸ ಕೆಲಸ ಸಿಕ್ಕ ಕಾರಣ ಅಲ್ಲಿಗೆ ತೆರಳಿದರು. ನಿನ್ನನ್ನು ಅಲ್ಲಿಗೆ ಕರೆಸಿಕೊಳ್ಳುತ್ತೇನೆ ಎಂದು ಹೇಳಿದ್ದ ಗಂಡ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಇದಾದ ಮೇಲೆ ಕಿರುಕುಳ ಆರಂಭವಾಯಿತು. ಅತ್ತೆ ಮಾವ ನನ್ನ ಮೇಲೆ ನಿರಂತರ ಒತ್ತಡ ಹೇರುತ್ತಿದ್ದು ಜೈನ ಧರ್ಮ ಸ್ವೀಕಾರ ಮಾಡು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ