ಕೊರಿಯರ್‌ನಲ್ಲಿ ಬಂದಿದ್ದ ಆಯುಧ ಪಡೆಯಲು ಬಂದಾಗ ವಿಚಾರಣೆ| ಐಸಿಎಸ್ ತವರಿನ ಬಗ್ಗೆ ಅನುಕಂಪ| ಫೇಸ್‌ಬುಕ್ ಖಾತೆಯಲ್ಲಿ ‘ಸೇವ್ ಸಿರಿಯಾ’ ಎಂಬ ಶೀರ್ಷಿಕೆಯನ್ನು ಹಾಕಿಕೊಂಡು ಸಹಾನುಭೂತಿ ವ್ಯಕ್ತಪಡಿಸಿರುವ ಅರೋಪಿ|
ಬೆಂಗಳೂರು(ಜ.16): ಡಾರ್ಕ್ ನೆಟ್‌ನಲ್ಲಿ ವಿದೇಶದಿಂದ ನಿಷೇಧಿತ ಆಮ್ಸ್‌ರ್ ಖರೀದಿ ಮಾಡಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ರಾಮನಗರದ ಜಮೀಯಾ ಮಸೀದಿ ಸಮೀಪದ ನಿವಾಸಿ ಮುಜೀಬ್ ಬೇಗ್ ಎಂಬಾತನೇ ವಿವಾದಕ್ಕೆ ಸಿಲುಕಿದ್ದು, ವಿದೇಶದಿಂದ ಬ್ಲಾಂಕ್ ಫೈಯರ್ ಆಮ್ಸ್‌ರ್ ಎಂಬ ಶಸ್ತ್ರವನ್ನು ಬೇಗ್ ಖರೀದಿಸಿದ್ದ. ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಐಎಸ್‌ಡಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದು ಬಂದಿದೆ.
ಮಾಹಿತಿ ಹಂಚಿಕೆಗೆ ನಗರ ನಕ್ಸಲರಿಂದ ಡಾರ್ಕ್’ನೆಟ್..!
ವಿದೇಶದಿಂದ ಕೊರಿಯರ್‌ನಲ್ಲಿ ನಿಷೇಧಿತ ಶಸ್ತ್ರ ಖರೀದಿ ಸಂಬಂಧ ರಾಮನಗರದ ವ್ಯಕ್ತಿಯನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗಿದೆ. ಆತನಿಗೆ ಕೆಲವು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಆದರೆ ಇದುವರೆಗೆ ಯಾರನ್ನು ಬಂಧಿಸಿಲ್ಲ ಎಂದು ಐಎಸ್‌ಡಿ ಎಸ್ಪಿ ಜಿನೇಂದ್ರ ಖಣಗಾವಿ ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದ್ದಾರೆ.
ಡಾರ್ಕ್ನೆಟ್‌ನಲ್ಲಿ ಬ್ಲಾಂಕ್ ಫೈಯರ್ ಆಮ್ಸ್‌ರ್ ಅನ್ನು ಬೇಗ್ ಖರೀದಿಸಿದ್ದ. ಈ ಬಗ್ಗೆ ಮಾಹಿತಿ ಪಡೆದ ಕಸ್ಟಮ್ಸ್ ಅಧಿಕಾರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾರ್ಸಲ್ ಸ್ವೀಕರಿಸಲು ಬಂದ ಬೇಗ್‌ನನ್ನು ವಶಕ್ಕೆ ಪಡೆದರು. ಬಳಿಕ ಆಮ್ಸ್‌ರ್ ಖರೀದಿ ಮತ್ತು ಬಳಕೆಗೆ ಬೇಕಾದ ಪರವಾನಗಿ ತೋರಿಸುವಂತೆ ಸೂಚಿಸಿದ್ದರು. ಯಾವುದೇ ಪರವಾನಗಿ ತೋರಿಸದ ಕಾರಣ ಅನುಮಾನ ಬಂದು ಕಸ್ಟಮ್ಸ್ ಅಧಿಕಾರಿಗಳು, ಹೆಚ್ಚಿನ ತನಿಖೆ ಸಲುವಾಗಿ ಆರೋಪಿ ಮುಜೀಬ್ ಬೇಗ್‌ನನ್ನು ಐಎಸ್‌ಡಿ ಮಾಹಿತಿ ನೀಡಿದ್ದರು.
ಇನ್‌ಸ್ಪೆಕ್ಟರ್ ಆರ್.ಸುಶೀಲಾ ನೇತೃತ್ವದ ತಂಡ ಕಸ್ಟಮ್ಸ್ ಕಚೇರಿಗೆ ತೆರಳಿ ಮುಜೀಬ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಲ್ಲಿಯವರೆಗೂ ಶಸ್ತ್ರ ಖರೀದಿಸಲು ಮತ್ತು ಬಳಕೆಗೆ ಮುಜೀಬ್ ಪರವಾನಗಿ ಅಥವಾ ದಾಖಲೆ ಕೊಟ್ಟಿಲ್ಲ. ಮುಜೀಬ್ ವಿಚಾರಣೆ ಮುಂದುವರೆದಿದೆ ಎಂದು ಐಎಸ್‌ಡಿ ಮೂಲಗಳು ತಿಳಿಸಿವೆ.
ಐಸಿಎಸ್ ತವರಿನ ಬಗ್ಗೆ ಅನುಕಂಪ
ಜಾಗತಿಕ ಮಟ್ಟದ ರಕ್ತಪಿಪಾಸು ಅತ್ಯುಗ್ರ ಸಂಘಟನೆ ಐಸಿಎಸ್‌ನ ತವರೂರು ಸಿರಿಯಾ ಬಗ್ಗೆ ಮುಜೀಬ್ ಅನುಕಂಪ ವ್ಯಕ್ತಪಡಿಸಿರುವುದು ಶಂಕೆ ಕಾರಣವಾಗಿದೆ. ತನ್ನ ಫೇಸ್‌ಬುಕ್ ಖಾತೆಯಲ್ಲಿ ‘ಸೇವ್ ಸಿರಿಯಾ’ ಎಂಬ ಶೀರ್ಷಿಕೆಯನ್ನು ಹಾಕಿಕೊಂಡು ಸಹಾನುಭೂತಿ ವ್ಯಕ್ತಪಡಿಸಿರುವ ಬರಹಗಳು ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.