ಇ-ಮೇಲ್‌ ಲಾಗಿನ್‌ ಆಗದಂತೆ ಮಾಡಿದ ಪತಿ ವಿರುದ್ಧ ಪತ್ನಿ ದೂರು!

Published : Jan 29, 2021, 01:32 PM IST
ಇ-ಮೇಲ್‌ ಲಾಗಿನ್‌ ಆಗದಂತೆ ಮಾಡಿದ ಪತಿ ವಿರುದ್ಧ ಪತ್ನಿ ದೂರು!

ಸಾರಾಂಶ

ಅನುಮತಿ ಇಲ್ಲದೆ ಪತ್ನಿಯ ಇ-ಮೇಲ್‌ ಪಾಸ್ವರ್ಡ್‌ ಬದಲಿಸಿದ ಪತಿ|  ಪತಿ ವಿರುದ್ಧ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪತ್ನಿ| ಹೆಂಡತಿ ಪುನಃ ಇ ಮೇಲ್‌ ಲಾಗಿನ್‌ ಆಗದಂತೆ ಮಾಡಿದ ಗಂಡ| 

ಹುಬ್ಬಳ್ಳಿ(ಜ.29):  ಅನುಮತಿ ಇಲ್ಲದೆ ಪತ್ನಿಯ ಇ-ಮೇಲ್‌ ಪಾಸ್ವರ್ಡ್‌ ಬದಲಿಸಿದ್ದೂ ಅಲ್ಲದೆ ಪತ್ನಿ ಮತ್ತೆ ಲಾಗಿನ್‌ ಆಗಲು ಸಾಧ್ಯವಾಗದಂತೆ ಮಾಡಿದ ಪತಿರಾಯನ ಮೇಲೆ ಇಲ್ಲಿನ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ರಾಜಬೀ ಮನಿಯಾರ್‌ ಎಂಬಾಕೆ ತನ್ನ ಪತಿ ದಾನಿಶ್‌ ಮನಿಯಾರ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಪತಿ ದಾನಿಶ್‌ ತನ್ನ ಅನುಮತಿ ಇಲ್ಲದೆ ಇ ಮೇಲ್‌ ಐಡಿಗೆ ನೀಡಿದ್ದ ಗೌಪ್ಯ ಸಂಖ್ಯೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿದ್ದಾನೆ. ಅಲ್ಲದೆ ಇ-ಮೇಲ್‌ ರಿಕವರಿಗೆ ತನ್ನ ಮೊಬೈಲ್‌ ಸಂಖ್ಯೆ ಹಾಗೂ ಇ ಮೇಲ್‌ ನೀಡಿದ್ದಾನೆ. 

ಸಿನಿಮಿಯ ಸ್ಟೈಲ್‌: ಗುಂಡು ಹಾರಿಸಿ ದರೋಡೆಗೆ ಯತ್ನ

ಈ ಮೂಲಕ ಪುನಃ ನಾನು ಇ ಮೇಲ್‌ ಲಾಗಿನ್‌ ಆಗದಂತೆ ಮಾಡಿದ್ದಾನೆ ಎಂದು ರಾಜಬೀ ದೂರು ದಾಖಲಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
Shivamogga: 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬದಲಾಗಲಿಲ್ಲ; ತಂದೆಯನ್ನು ಕೊಲೆಗೈದು ಬಾವಿಗೆ ಎಸೆದ ಮಗ!