ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ| ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಬಲಿಯ ಲಕ್ಷ್ಮಾಸಾಗರ ಗ್ರಾಮದಲ್ಲಿ ನಡೆದ ಘಟನೆ| ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು|
ಕಲಬುರಗಿ(ಜ.28): ಹನ್ನೆರಡು ವರುಷದ ಬಾಲಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಂಚೋಳಿ ತಾಲೂಕಿನ ಕುಂಚಾವರಂ ಬಲಿಯ ಲಕ್ಷ್ಮಾಸಾಗರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಸಾವನ್ನಪ್ಪಿರುವ ಬಾಲಕನನ್ನು ಮಧುಕರ ಲಕ್ಷ್ಮಪ್ಪ ಎಂದು ಗುರುತಿಸಲಾಗಿದೆ. ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಎಂದಿನಂತೆ ದನ ಮೇಯಿಸಲು ಅಡವಿಗೆ ಹೋಗಿದ್ದ ಬಾಲಕ ಮಧುಕರ ದನಗಳನ್ನು ತಮ್ಮ ಪಾಡಿಗೆ ಮೇಯಲು ಬಿಟ್ಟು ಪಕ್ಕದ ಹಳ್ಳಿಯಲ್ಲಿನ ಜಾತ್ರೆಗೆ ಸಂಗಡಿಗರೊಂದಿಗೆ ಹೋಗಿದ್ದ. ಮನೆಗೆ ಮರಳಿದಾಗ ಆಕಳೊಂದು ಮನೆಗೆ ಬಾರದ ಸಂಗತಿ ಗೊತ್ತಾಯ್ತು.
ಹೊಸದಾಗಿ ಮದುವೆಯಾಗಿದ್ದ ಸೊಸೆ ನಿಗೂಢ ಸಾವಿನ ನಂತರ ಅತ್ತೆಯ ಶವವೂ ಪತ್ತೆ!
ಪೋಷಕರು ಬೈಯುತ್ತಾರೆಂದು ಹೆದರಿ ಮಧುಕರ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪ್ರಾಥಮಿಕ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಕುಂಚಾವರಂ ಠಾಣೆಯ ಪೊಲೀಸರು ತಿಳಿಸಿದ್ದಾರೆ.