ವರ್ಷಗಳ ಹಿಂದೆ ಪತಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಪತ್ನಿ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆಇಂದಿರಾನಗರ ಎಂಬಲ್ಲಿ ನಡೆದಿದೆ. ಶನಿವಾರ ಮಹಿಳೆಯ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪುತ್ತೂರು (ಜು.2): ವರ್ಷಗಳ ಹಿಂದೆ ಪತಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಪತ್ನಿ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆಇಂದಿರಾನಗರ ಎಂಬಲ್ಲಿ ನಡೆದಿದೆ. ಶನಿವಾರ ಮಹಿಳೆಯ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇಲ್ಲಿನ ದಿ.ಪ್ರವೀಣ್ ಎಂಬವರ ಪತ್ನಿ ಕಾವ್ಯಾ(38) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 7 ವರ್ಷಗಳ ಹಿಂದೆ ಅವರ ಪತಿ ಪ್ರವೀಣ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡ ಅದೇ ಸ್ಥಳದಲ್ಲಿ ಕಾವ್ಯಾ ಕೂಡ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೂನ್ 30ರಂದು ಕಾವ್ಯಾ ಅವರ ಪುತ್ರ ಪ್ರತೀಕ್ ಬೆದ್ರಾಳ ಸಮೀಪ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಇದರ ಬೆನ್ನಲ್ಲೇ ಆತನ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಶಾಲೆಯಲ್ಲಿ ಶಿಕ್ಷಕ, ಹೊರಗಡೆ ಶಿಕ್ಷಕರ ಪುತ್ರನಿಂದ ಕಿರುಕುಳ: 16ರ ಹರೆಯದ ಸಾರಾ ಆತ್ಮಹತ್ಯೆಗೆ ಶರಣು
ಪತ್ನಿ ಆತ್ಮಹತ್ಯೆಗೆ ಯತ್ನ: ಪತಿ ಸಾವು
ಬಂಟ್ವಾಳ: ಪತಿ ಮತ್ತು ಪತ್ನಿ ಜೊತೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಮೃತಪಟ್ಟರೆ, ಪತ್ನಿ ಗಂಭೀರವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲ ಕೊಡಾಜೆ ಸಮೀಪದ ಬಾಕಿಲ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಅನಂತಾಡಿ ಬಾಕಿಲ ನಿವಾಸಿ ಬಸ್ ಚಾಲಕ ಪ್ರತಾಪ್ ಹಾಗೂ ಪತ್ನಿ ವೀಣಾ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದವರು. ಮನೆಯಲ್ಲಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ಉದ್ಯಮ ನಷ್ಟದಿಂದ ಹೆಗಲೇರಿದ ಸಾಲ: ಪತ್ನಿ, ಮಗನನ್ನು ನದಿಗೆ ದೂಡಿ ಆತ್ಮಹತ್ಯೆಗೆ ಶರಣಾದ ಉದ್ಯಮಿ
ಇವರಿಗೆ ಐದು ವರ್ಷದ ಅವಳಿ ಜವಳಿ ಮಕ್ಕಳಿದ್ದಾರೆ. ಎದುರು ಮನೆಯಲ್ಲಿದ್ದ ಮಕ್ಕಳು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ನೆರೆಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಇವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಪ್ರತಾಪ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ, ವೀಣಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.