ಆನ್ ಲೈನ್ ಗೇಮ್ ಚಟ ಹೊಂದಿದ್ದ ಯುವಕನೋರ್ವ ಲಕ್ಷಾಂತರ ರೂ. ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಉತ್ತರಕನ್ನಡ (ಜು.1): ಆನ್ ಲೈನ್ ಗೇಮ್ ಚಟ ಹೊಂದಿದ್ದ ಯುವಕನೋರ್ವ ಲಕ್ಷಾಂತರ ರೂ. ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಸಿ ತಾಲೂಕಿನ ಕುಳವೆ ಬಳಿ ನಡೆದಿದೆ. ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ದುರ್ದೈವಿಯನ್ನು ವಿಜೇತ್ ಶಾಂತಾರಾಮ ಹೆಗಡೆ (37) ಎಂದು ಗುರುತಿಸಲಾಗಿದೆ. ಜೂನ್ 30 ರಂದು ಮನೆಯಿಂದ ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದ ಯುವಕ ಡೆತ್ ನೋಟ್ ಬರೆದು ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕ ಸುಮಾರು 65 ಲಕ್ಷ ರೂ. ಗೂ ಹೆಚ್ಚಿನ ಹಣವನ್ನು ಆನ್ ಲೈನ್ ಗೇಮ್‌ನಲ್ಲಿ ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Uttara Kannada: ದೇಹದಿಂದ ಬೇರ್ಪಟ್ಟ ಗೋವಿನ ತಲೆ ನಡು ರಸ್ತೆಯಲ್ಲಿ ಪತ್ತೆ!
ಮದುವೆಯಾಗಿ ಪತಿ ಪರಾರಿ, ಪತ್ನಿ ಆತ್ಮಹತ್ಯೆ ಯತ್ನ
ದಾಬಸ್‌ಪೇಟೆ: ಎಂಟು ವರ್ಷಗಳಿಂದ ಪ್ರೀತಿಸಿ ಮನೆಯವರ ವಿರೋಧದಿಂದ ಮದುವೆಯಾಗಲು ನಿರಾಕರಿಸಿದ್ದ ಯುವಕನ ಜೊತೆ ರಾಜಿ ಸಂಧಾನದಿಂದ ಸೋಮೇಶ್ವರ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ಯುವಕ ನಾಪತ್ತೆಯಾಗಿದ್ದು, ಇದರಿಂದ ಕಂಗಾಲಾದ ಯುವತಿ ಯುವಕನ ಮನೆ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ರಾಯರಪಾಳ್ಯದ ಯುವಕ ಯಶಸ್(25) ಹೊಸ ನಿಜಗಲ್ ಗ್ರಾಮದ ಯುವತಿಯನ್ನು ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಕೆ 3 ವರ್ಷಗಳಿಂದ ದೈಹಿಕ ಸಂಪರ್ಕ ಬೆಳೆಸಿದ್ದ. ಯುವತಿಯಿಂದ 1.5 ಲಕ್ಷ ರು. ಹಣವನ್ನೂ ಪಡೆದುಕೊಂಡಿದ್ದ. ಈ ವಿಷಯ ಇಬ್ಬರ ಮನೆಯಲ್ಲೂ ತಿಳಿದು ಯುವಕನ ಮನೆಯವರು ಮದುವೆಗೆ ವಿರೋಧಿಸಿದ ಹಿನ್ನೆಲೆಯಲ್ಲಿ ಯುವತಿ ಹಾಗೂ ಕುಟುಂಬಸ್ಥರು ದಾಬಸ್‌ಪೇಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಶಂಕಿತ ಉಗ್ರರ ವಿಚಾರಣೆಯಲ್ಲಿ ಕರಾಳ ಸತ್ಯ, ರಾಜ್ಯದಲ್ಲಿ ರೋಬೋಟ್ ಮೂಲಕ ವಿದ್ವಂ
ಗ್ರಾಮದ ಮುಖಂಡರು ಹಾಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ಸೋಂಪುರದ ಸೋಮೇಶ್ವರ ದೇವಾಲಯದಲ್ಲಿ ಮದುವೆ ಮಾಡಿಸಿ, ವಿವಾಹ ನೋಂದಣಿ ಮಾಡಿಸಿದ್ದರು. ಆದರೆ ಯುವತಿಯನ್ನು ಬಿಟ್ಟು ಯಶಸ್ ಪರಾರಿಯಾಗಿದ್ದನು. ಯುವತಿ ಪತಿಯನ್ನು ಹುಡುಕಿಕೊಂಡು ಆತನ ಮನೆ ಬಳಿ ಹೋದಾಗ ಯುವಕನ ಮನೆಯವರು ಮನೆಗೆ ಸೇರಿಸಿಲ್ಲ. ಮನನೊಂದ ಆಕೆ ವಿಷಸೇವಿಸಿದ್ದಾಳೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಚೇತರಿಸಿಕೊಂಡಿದ್ದಾಳೆ. ಯುವತಿ ನೀಡಿದ ದೂರಿನನ್ವಯ ದಾಬಸ್‌ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.