
ಚಹಾದಲ್ಲಿ ರಾಸಾಯನಿಕ ಬೆರೆಸಿ ಗಂಡ- ಅತ್ತೆ ಮಾವನಿಗೆ ನೀಡ್ತಿದ್ದಾರೆ ಎಂಬ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್ ಜ್ಯೋತಿ ಗುಪ್ತಾ ಇದ್ರ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ.
ಜ್ಯೋತಿ ಗುಪ್ತಾ, ತಮ್ಮ ಮೇಲೆ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾನು ಚಹಾದಲ್ಲಿ ಯಾವುದೇ ವಿಷಕಾರಿ ರಾಸಾಯನಿಕ ಹಾಕಿಲ್ಲ. ಕೇವಲ ಅರಿಶಿನ ಮತ್ತು ಲವಂಗವನ್ನು ಮಾತ್ರ ಸೇರಿಸಿದ್ದೆ ಎಂದಿದ್ದಾರೆ, ಇದಕ್ಕೆ ಕಾರಣ ಏನು ಎಂಬುದನ್ನೂ ಜ್ಯೋತಿ ಗುಪ್ತಾ ತಿಳಿಸಿದ್ದಾರೆ.
ಅತ್ತೆ ಒಲಿಸಿಕೊಳ್ಳಲು ಲವಂಗ ! ಜ್ಯೋತಿ ಪತಿ ಹಿಮಾಂಶು ಗುಪ್ತಾ, ಪತ್ನಿಗೆ ಅತ್ತೆ ಒಲಿಸಿಕೊಳ್ಳೋದು ಹೇಗೆ ಎನ್ನುವ ವಿಡಿಯೋ ಕಳುಹಿಸಿದ್ದರಂತೆ. ಅದನ್ನು ನೋಡಿಯೇ ಜ್ಯೋತಿ ಟೀಗೆ ಅರಿಶಿನ ಮತ್ತು ಲವಂಗ ಹಾಕ್ತಿದ್ದರಂತೆ. ಅವರ ವಿಡಿಯೋ ನೋಡಿ ನಾನು ಪ್ರತಿ ದಿನ ಟೀಗೆ ಇದನ್ನು ಹಾಕ್ತಿದ್ದೆ ಎಂದು ಜ್ಯೋತಿ ಹೇಳಿದ್ದಾರೆ.
ಇದೀಗ ಅದೇ ವಿಡಿಯೋವನ್ನು ಬಳಸಿಕೊಂಡು ತನ್ನನ್ನು ಸಂಕಷ್ಟಕ್ಕೆ ಸಿಲುಕಿಸಲು ಪತಿ ಯತ್ನಿಸುತ್ತಿದ್ದಾನೆ ಎಂದು ಜ್ಯೋತಿ ಆರೋಪ ಮಾಡಿದ್ದಾರೆ. ಈ ಘಟನೆ ನಡೆದದ್ದು ಸುಮಾರು ಒಂದೂವರೆ ವರ್ಷದ ಹಿಂದೆ. ವಿಡಿಯೋ ಅಷ್ಟು ಮುಖ್ಯವಾಗಿದ್ದರೆ ಆಗಲೇ ಪೊಲೀಸರಿಗೆ ಅಥವಾ ವಿಚ್ಛೇದನ ಪ್ರಕರಣದಲ್ಲಿ ಅವರು ಸಲ್ಲಿಸಬಹುದಿತ್ತು. ಆದ್ರೆ ಅದನ್ನು ಪೊಲೀಸರಿಗೆ ನೀಡಿಲ್ಲ. ಈಗ ವಿಡಿಯೋ ವೈರಲ್ ಮಾಡಿದ್ದಾರೆ ಅನ್ನೋದು ಜ್ಯೋತಿ ಆರೋಪ.
ಜ್ಯೋತಿ, ಪತಿ ಮೇಲೆ ಗಂಭಿರ ಆರೋಪ ಕೂಡ ಮಾಡಿದ್ದಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಬೆಂಗಳೂರಿನ ಯುವತಿಯೊಬ್ಬಳೊಂದಿಗೆ ಪ್ರೇಮ ಸಂಬಂಧವಿತ್ತು ಅಂತ ತಿಳಿಸಿದ್ದರಂತೆ. ಆಕೆಯನ್ನೇ ಮದುವೆಯಾಗಬೇಕೆಂಬ ಆಸೆ ಇತ್ತು ಅಂತ ಹೇಳಿದ್ದನಂತೆ. ಅದಕ್ಕಾಗಿಯೇ ನನ್ನನ್ನು ದೂರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ.
ಇತ್ತ ಹಿಮಾಂಶು ಗುಪ್ತಾ ಮಾತ್ರ, ಪತ್ನಿ ಚಹಾದಲ್ಲಿ ರಾಸಾಯನಿಕ ಬೆರೆಸುತ್ತಿದ್ದಾಳೆ ಎಂಬ ಅನುಮಾನದಿಂದ ಮನೆಯೊಳಗೆ ಹಿಡನ್ ಕ್ಯಾಮೆರಾ ಅಳವಡಿಸಿದ್ದೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಪತ್ನಿ ಚಹಾದಲ್ಲಿ ಏನೋ ಬೆರೆಸುತ್ತಿರುವ ದೃಶ್ಯ ಸೆರೆಯಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಈ ಪ್ರಕರಣದ ಕುರಿತು ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಚಹಾದಲ್ಲಿ ನಿಜವಾಗಿಯೂ ರಾಸಾಯನಿಕ ಇತ್ತೇ? ಅಥವಾ ಕೇವಲ ಅರಿಶಿನ ಮತ್ತು ಲವಂಗವೇ? ಎಂಬುದು ವೈಜ್ಞಾನಿಕ ಪರೀಕ್ಷೆಯ ನಂತರವೇ ಸ್ಪಷ್ಟವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ