ಅಕ್ರಮ ಸಂಬಂಧಕ್ಕೆ ಬೇಸತ್ತು ಪ್ರಿಯಕರನ ತಲೆ ಕಡಿದು ಪತ್ನಿಯ ಮನೆಮುಂದೆ ತಂದು ಬಿಸಾಕಿದ ಪತಿ!
ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಲಾದ ವ್ಯಕ್ತಿಯ ಶಿರಚ್ಛೇದ ಮಾಡಿ, ನಂತರ ಕತ್ತರಿಸಿದ ತಲೆಯೊಂದಿಗೆ ಪತ್ನಿಯ ತವರು ಮನೆ ಮುಂದೆ ಹಾಕಿದ ಭಯಾನಕ ಘಟನೆ ನಡೆದಿದೆ.
ತಮಿಳನಾಡು: ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಲಾದ ವ್ಯಕ್ತಿಯ ಶಿರಚ್ಛೇದ ಮಾಡಿ, ನಂತರ ಕತ್ತರಿಸಿದ ತಲೆಯೊಂದಿಗೆ ಪತ್ನಿಯ ತವರು ಮನೆ ಮುಂದೆ ಹಾಕಿದ ಭಯಾನಕ ಘಟನೆ ನಡೆದಿದೆ.
ವೇಲುಸಾಮಿ, ಪತ್ನಿಯ ಪ್ರಿಯಕರನ ತಲೆ ಕಡಿದ ಆರೋಪಿಯಾಗಿದ್ದಾನೆ. ಮುರುಗನ್ ಎಂಬಾತ ವೇಲುಸಾಮಿಯ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ.
ಆರೋಪಿ ಎಸ್.ವೇಲುಸಾಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕರಣ ಮೃತ ವ್ಯಕ್ತಿ ಮುರುಗನ್ ತೆಂಕಶಿ ಜಿಲ್ಲೆಯ ಕನ್ನಡಿಕುಲಂನಲ್ಲಿರುವ ಆರೋಪಿಯ ನಿವಾಸದ ಬಳಿ ವಾಸವಿದ್ದ. ಆರೋಪಿ ವೇಲುಸಾಮಿ ಪತ್ನಿ ಎಸಕ್ಕಿಯಮ್ಮಾಳ್ ಮದುವೆಯಾಗಿದ್ದರೂ ಮುರುಗನ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಮನೆಯ ಹತ್ತಿರದಲ್ಲಿಯೇ ವಾಸವಿದ್ದುದ್ದರಿಂದ ಅಕ್ರಮ ಸಂಬಂಧ ಬೆಳೆದಿದೆ.
ಉಂಡ ಮನೆಗೆ ಕನ್ನ ಬಗೆದ ಕಿರಾತಕರು..! 30 ಸಾವಿರ ಹಣಕ್ಕಾಗಿ ಧಣಿಯನ್ನೇ ಕೊಂದ ಪಾಪಿಗಳು
ಈ ವಿಚಾರ ಆರೋಪಿ ವೇಲುಸಾಮಿಗೆ ತಿಳಿದಬಳಿಕ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಹಲವಾರು ಬಾರಿ ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳವಾದರೂ ಮುರುಗನ್ ಜೊತೆಗೆ ಅಕ್ರಮ ಸಂಬಂಧ ಬಿಡದ ಪತ್ನಿಯಿಂದ ವೇಲುಸಾಮಿ ಬೇಸತ್ತು ಹೋಗಿದ್ದಾನೆ. ಇತ್ತೀಚೆಗೆ ಮತ್ತೆ ಇದೇ ವಿಚಾರವಾಗಿ ಜಗಳ ಮಾಡಿಕೊಂಡು ರಾಜಪುತುಕುಡಿಯಲ್ಲಿನ ತವರು ಮನೆ ಸೇರಿದ್ದ ಪತ್ನಿ.
ಪತ್ನಿ ದೂರವಾಗಿದ್ದಕ್ಕೆ ಕುಪಿತಗೊಂಡಿದ್ದ ವೇಲುಸಾಮಿ. ಮುರುಗನ್ ಜೊತೆಗೆ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಮುರುಗನ್ ತಲೆ ಕಡಿದಿರುವ ಆರೋಪಿ ವೇಲುಸಾಮಿ ಅಷ್ಟಕ್ಕೆ ಸುಮ್ಮನಾಗದ ಕಡಿದ ತಲೆಯೊಂದಿಗೆ ಪತ್ನಿಯ ಮನೆಗೆ ತೆರಳಿ ಅದನ್ನು ಮನೆಯ ಮುಂದೆ ಎಸೆದು ತಗೋ ನಿನ್ನ ಲವರ್ ತಲೆ ಎಂದು ಬಿಸಾಡಿದ್ದಾನೆ. ಈ ಘಟನೆ ಕಂಡು ಬೆಚ್ಚಿಬಿದ್ದ ತವರು ಮನೆಯವರು ಸುತ್ತಮುತ್ತಲಿನ ಜನರು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಬಡ್ಡಿ ಆಟಗಾರನ ಬರ್ಬರ ಹತ್ಯೆ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆ ಮುಂದೆ ಬೀಸಾಡಿದ ದುಷ್ಕರ್ಮಿಗಳು..!