Belagavi Crime: 50 ಕೆಜಿ ತೂಕದ 900 ಚೀಲ ರಸಗೊಬ್ಬರ ಕಳ್ಳತನ

Published : May 25, 2022, 07:51 AM IST
Belagavi Crime: 50 ಕೆಜಿ ತೂಕದ 900 ಚೀಲ ರಸಗೊಬ್ಬರ ಕಳ್ಳತನ

ಸಾರಾಂಶ

*   ಬೆಳಗಾವಿ ತಾಲೂಕಿನ ದೇಸೂರು ರೈಲ್ವೆ ನಿಲ್ದಾಣ ಬಳಿಯ ಗೋದಾಮಿನಲ್ಲಿ ನಡೆದ ಘಟನೆ *  ಮಾದಕ ವಸ್ತು ಮಾರಾಟ: ನಾಲ್ವರ ಬಂಧನ *  ಹಾಡುಹಗಲೇ ಮನೆ ಬೀಗ ಮುರಿದು ಕಳ್ಳತನ

ಬೆಳಗಾವಿ(ಮೇ.25): ಗೋದಾಮಿನಲ್ಲಿದ್ದ 50 ಕೆಜಿ ತೂಕದ 900 ಚೀಲ ರಸಗೊಬ್ಬರ ಕಳ್ಳತನ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ದೇಸೂರು ರೈಲ್ವೆ ನಿಲ್ದಾಣ ಬಳಿಯ ಗೋದಾಮಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

ತಡರಾತ್ರಿ ಗೋದಾಮಿನ ಬಳಿ ಯಾರೂ ಇಲ್ಲದಿರುವುದನ್ನೇ ಖಚಿತಮಾಡಿಕೊಂಡ ಕಳ್ಳರು .12 ಲಕ್ಷ ಮೌಲ್ಯದ 900 ಚೀಲ ಆರ್‌ಸಿಎಫ್‌, ಡಿಎಪಿ ಗೊಬ್ಬರವನ್ನು ಕಳ್ಳತನ ಮಾಡಿದ್ದಾರೆ. ಯಾರೋ ಗೊತ್ತಿದ್ದವರಿಂದಲೇ ಈ ಕೃತ್ಯ ನಡೆದಿದೆ ಎಂಬ ಅನುಮಾನ ಮೂಡಿದೆ. ಅಲ್ಲದೇ 900 ಚೀಲ ಗೊಬ್ಬರ ತೆಗೆದುಕೊಂಡು ಹೋಗಲು ಕನಿಷ್ಠ ಎರಡು ಲಾರಿಗಳು ಬೇಕಿದೆ. ಗೊಬ್ಬರ ಕಳ್ಳತನ ಆಗಿರುವ ಸಂಬಂಧ ಗೋದಾಮು ಮ್ಯಾನೇಜರ್‌ ಶಿವಾಜಿ ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಭಟ್ಕಳದಲ್ಲಿ ಅಪರಿಚಿತ ಮಹಿಳೆ ಮೃತದೇಹ ಪತ್ತೆ: ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ

ಮಾದಕ ವಸ್ತು ಮಾರಾಟ: ನಾಲ್ವರ ಬಂಧನ

ಬೆಳಗಾವಿ: ನಗರದ ವಿವಿಧ ಕಡೆಗಳಲ್ಲಿ ಪನ್ನಿ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿ ಅವರಿಂದ ಒಟ್ಟು .46,950 ಮೌಲ್ಯದ 35 ಗ್ರಾಂ ಪನ್ನಿ (ಮಾದಕ ವಸ್ತು)ಯನ್ನು ನಗರ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.ನಗರದ ರವಿವಾರ ಪೇಟೆಯ ತನ್ವೀರ್‌ ಮೆಹಬೂಬ ದೇಶನೂರ (40), ಗಾಂಧಿನಗರದ ಸದ್ದಾಮ್‌ ಅಕ್ಬರ್‌ ದೇಶನೂರ (31), ಗಣೇಶಪುರ ಸರಸ್ವತಿ ನಗರದ ಮಯೂರ ಹರಿಭಾವು ಬಾತಖಾಂಡೆ (27) ಬಂಧಿತರು.

ಈ ಮೂವರು ಪನ್ನಿ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಸಿಸಿಬಿ ಪೊಲೀಸರು .34000 ಮೌಲ್ಯದ 27 ಗ್ರಾಂನ ಮಾದಕ ವಸ್ತುವಿನ ಒಟ್ಟು 85 ಚೀಟಿಗಳನ್ನು ಹಾಗೂ 3 ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಗರದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನು ನಗರದ ಖಡೇ ಬಜಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪನ್ನಿ ಮಾರಾಟ ಮಾಡುತ್ತಿದ್ದ ಬೆಳಗಾವಿ ನಗರದ ಚವಾಟ ಗಲ್ಲಿಯ ರಿತೇಶ ಪರೀಶರಾಮ ಗುಂಡಕಲ್ಲ (27) ಎಂಬಾತನನ್ನು ಬಂಧಿಸಿ, ಆತನಿಂದ .12500 ಮೌಲ್ಯದ 8 ಗ್ರಾಂ 500ಮಿಲಿ ಪನ್ನಿ ಮಾದಕ, 600 ನಗದು ಹಾಗೂ ಒಂದು ಮೊಬೈಲ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ನಗರದ ಖಡೇಬಜಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hubballi Crime ಗುಟ್ಕಾ ಕೊಡಿಸದ್ದಕ್ಕೆ ಸ್ನೇಹಿತನನ್ನೆ‌ ಮುಗಿಸಿದ ರೌಡಿ ಶೀಟರ್!

ಹಾಡುಹಗಲೇ ಮನೆ ಬೀಗ ಮುರಿದು ಕಳ್ಳತನ

ಸಂಕೇಶ್ವರ: ಹಾಡುಹಗಲೇ ಮನೆಯ ಬೀಗ ಮುರಿದು ಮನೆಯಲಿದ್ದ ಬಂಗಾರ, ಬೆಳ್ಳಿ ಹಾಗೂ ನಗದು ದೋಚಿರುವ ಘಟನೆ ಪಟ್ಟಣದ ಆದರ್ಶ ನಗರದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಪಟ್ಟಣದ ಆದರ್ಶ ನಗರದ ನಿವಾಸಿ ಜಯಪ್ರಕಾಶ ಶಿವಾಜಿ ಸಾವಂತ ಎಂಬುವರ ಮನೆಗೆ ಕನ್ನ ಹಾಕಿ 66 ಗ್ರಾಂ ಚಿನ್ನಾಭರಣ, 700 ಗ್ರಾಂ ಬೆಳ್ಳಿ ಆಭರಣ ಮತ್ತು 50,000 ನಗದು ಕಳ್ಳತನ ಮಾಡಿದ್ದಾರೆ.

ಜಯಪ್ರಕಾಶ ಸಾವಂತ ಕರ್ತವ್ಯಕ್ಕಾಗಿ ಬೆಳಗ್ಗೆ ಮೆಡಿಕಲ್‌ ಸ್ಟೋರ್‌ಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಚಿನ್ನಾಭರಣ ದೋಚಿದ್ದಾರೆ. ಮನೆಯ ಮುಖ್ಯದ್ವಾರದ ಕೀಲಿ ಒಡೆದು ಒಳನುಗ್ಗಿದ ಕಳ್ಳರು ಎರಡನೇ ಮಹಡಿಯಲ್ಲಿನ ಅಲೆಮೆರ್‌ ಮುರಿದು ಒಳಗಿದ್ದ ಚಿನ್ನಾಭರಣ ದೋಚಿದ್ದಾರೆ. ಸಂಜೆ ಹೊತ್ತಿಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವ ವಿಷಯ ತಿಳಿದುಬಂದಿದೆ. ಒಟ್ಟು ಅಂದಾಜು 1.47.000 ಲಕ್ಷ ರು. ಚಿನ್ನಾಭರಣ ದೋಚಿದ ಬಗ್ಗೆ ಜಯಪ್ರಕಾಶ ಸಾವಂತ ಸಂಕೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಗಣಪತಿ ಕೊಂಗನೊಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ