Latest Videos

ಸೀರಿಯಲ್‌ ಕಿಲ್ಲರ್ಸ್‌ ಕಡಿಮೆ ಆಗಿದ್ದಾರೆ, ಕ್ರೈಂ ಕಾದಂಬರಿ ಬರೆಯೋದು ಕಷ್ಟವಂತೆ!

By Roopa HegdeFirst Published Jun 4, 2024, 4:33 PM IST
Highlights

ನೈಜ ಘಟನೆ ಆಧಾರಿತ ಸಿನಿಮಾ, ಕಾದಂಬರಿ ನೋಡುವ, ಓದುವ ಜನ ಹೆಚ್ಚಿದ್ರೂ ಕಾಲ್ಪನಿಕ ಕಥೆ ಕುತೂಹಲದಿಂದ ಕೂಡಿದ್ದರೆ ಜನ ಆಸಕ್ತಿಯಿಂದ ಓದುತ್ತಾರೆ. ಎಲ್ಲ ಕಥೆಗಳು ನೈಜಘಟನೆ ಆಧಾರಿತವಾಗಿರಬೇಕೆಂದೇನೂ ಇಲ್ಲ. ಆದ್ರೆ ಕ್ರೈಂ ಕಾದಂಬರಿಗಾರರೊಬ್ಬರ ಮಾತು ಈಗ ಅಚ್ಚರಿ ಹುಟ್ಟಿಸಿದೆ.  
 

ಒಂದು ಹಣ್ಣಿನ ರುಚಿ ಹೇಗಿದೆ ಎಂಬುದು ಆ ಹಣ್ಣು ತಿಂದವನಿಗೆ ಮಾತ್ರ ಗೊತ್ತು. ಯಾವುದೇ ವಿಷ್ಯದಲ್ಲಿ ನಮಗೆ ಅನುಭವ ಇದ್ದಾಗ ನಾವು ಅದನ್ನು ಮುಂದಿನವರಿಗೆ ಅರ್ಥವಾಗುವಂತೆ ವಿವರಿಸಬಹುದು. ಅದೇ ನಿಮಗೆ ಆ ಹಣ್ಣಿನ ರುಚಿಯೇ ತಿಳಿದಿಲ್ಲ ಎಂದಾಗ ಅದು ಹುಳಿ ಇದ್ರೂ ಮೇಲೆ ಅಂದವಾಗಿ ಕಂಡ್ರೆ ಅದು ಸಿಹಿ ಇದೆ ಅಂತ ಹೇಳಿರ್ತೇವೆ. ಬರಹಗಾರರು ಕೂಡ ಎಂದೂ ನಡೆಯದ ಕಥೆಯನ್ನು ನೈಜ ಘಟನೆಯಂತೆ ನಮ್ಮ ಮುಂದೆ ಇಡ್ತಾರೆ. ಕಲ್ಪನೆಯನ್ನು ವಾಸ್ತವದಂತೆ ಬಿಂಬಿಸೋದು ಸವಾಲಿನ ಕೆಲಸ. ಎಲ್ಲರಿಗೂ ಇದು ಸಾಧ್ಯವಿಲ್ಲ. ಕವಿ, ಬರಹಗಾರನಿಗೆ ಮಾತ್ರ ಮಣ್ಣನ್ನು ಹೊನ್ನಿಗೆ ಹೋಲಿಸುವ ಸಾಮರ್ಥ್ಯವಿರುತ್ತದೆ. ಅನೇಕ ಕಥೆ, ಕಾದಂಬರಿಗಳನ್ನು ಓದಿದಾಗ ನಾವು ಬರಹಗಾರನ ಕಲ್ಪನೆ ಹಾಗೂ ಜ್ಞಾನವನ್ನು ಮೆಚ್ಚುತ್ತೇವೆ. ಹೊಸ ಹೊಸ ಐಡಿಯಾ, ಮಾಹಿತಿಯನ್ನು ಎಲ್ಲಿಂದ ಸಂಗ್ರಹ ಮಾಡುತ್ತಾರೆ ಎನ್ನುವ ಪ್ರಶ್ನೆ ಕೂಡ ಕಾಡುತ್ತದೆ. ಪ್ರೇಮ ಕಥೆಗಳನ್ನು ಹೆಣೆಯೋದು ಕ್ರೈಂ ಕಥೆಗಳನ್ನು ಹೆಣೆದಷ್ಟು ಸುಲಭವಲ್ಲ.  ಕ್ರೈಂ ಕಥೆಗಳು ಮುಂದೇನಿದೆ ಎಂಬ ಕುತೂಹಲ ಹುಟ್ಟಿಸಿದಾಗ ಮಾತ್ರ ಓಡುತ್ತವೆ. 

ಬಹುತೇಕ ಬರಹಗಾರರು (Writers) ಮೊದಲು ನೈಜ ಘಟನೆಗೆ ಆದ್ಯತೆ ನೀಡ್ತಾರೆ. ಅದಕ್ಕೆ ಒಂದಿಷ್ಟು ಸೇರಿಸಿ ಅದನ್ನು ಕಾದಂಬರಿ (Novel) ಯಾಗಿ ನಮ್ಮ ಮುಂದೆ ಇಡ್ತಾರೆ. ನಿಮ್ಮ ಮುಂದೆ ಹಣ್ಣೇ ಇಲ್ಲದೆ ಅದ್ರ ರುಚಿ ಹೇಳಲು ಹೇಗೆ ಸಾಧ್ಯ ಇಲ್ಲವೋ ಅದೇ ರೀತಿ ಕ್ರೈಂ (Crime) ಘಟನೆಗಳು ನಡೆಯದೆ ಎಲ್ಲವನ್ನೂ ಕಲ್ಪನೆಯಲ್ಲಿ ಹೇಳಿ ಅಂದ್ರೆ ಕಷ್ಟವಾಗುತ್ತದೆ. ಹೀಗಂತ ನಾವು ಹೇಳ್ತಿಲ್ಲ. ಬರಹಗಾರರೊಬ್ಬರು, ಸೀರಿಯಲ್ ಕಿಲ್ಲರ್ ಗಳ ಸಂಖ್ಯೆ ಕಡಿಮೆ ಆಗಿರುವ ಕಾರಣ ಕಾದಂಬರಿ ಬರೆಯೋದು ಕಷ್ಟ ಎಂದಿದ್ದಾರೆ. 

ಮತ್ತೆ ಮತ್ತೆ ಕಾಳಿದಾಸ, ಮೇಘದೂತವೆಂಬ ಎಲ್ಲೆ ಮೀರಿದ ವಿರಹದ ಧ್ಯಾನದಲ್ಲಿ

ಪ್ರಸಿದ್ಧ ಅಪರಾಧ ಬರಹಗಾರರಾದ ಹರ್ಲಾನ್ ಕೋಬೆನ್  ಹೀಗೆ ಹೇಳಿದ್ದಾರೆ. ಹರ್ಲಾನ್ ಕೋಬೆನ್, ಸೀರಿಯಲ್ ಕಿಲ್ಲರ್ಸ್ ಬಗ್ಗೆ ಅನೇಕ ಪುಸ್ತಕ ಬರೆದು ಓದುಗರ ಮನಸ್ಸು ಗೆದ್ದಿದ್ದಾರೆ. ಫೂಲ್ ಮಿ ಒನ್ಸ್ ಮತ್ತು ದಿ ಸ್ಟ್ರೇಂಜರ್ ಸೇರಿದಂತೆ ಕೆಲ ಕಾದಂಬರಿ ಟಿವಿ ನಾಟಕಗಳಾಗಿ ಪರಿವರ್ತನೆಯಾಗಿವೆ. 62 ವರ್ಷದ ಕೋಬೈನ್ ಥಿಂಕ್ ಟ್ವೈಸ್ ಎಂಬ ಹೊಸ ಕಾದಂಬರಿಯನ್ನು ಬರೆದಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಅವರು, ಆಧುನಿಕ ಪೋಲೀಸಿಂಗ್ ನಿಂದಾಗಿ ಕಥೆಗಳನ್ನು ಹಣೆಯಲು ಕಷ್ಟವಾಗ್ತಿದೆ ಎಂದಿದ್ದಾರೆ. 

ಸೀರಿಯಲ್ ಕಿಲ್ಲರ್ ಸಂಖ್ಯೆ ಈಗಿನ ದಿನಗಳಲ್ಲಿ ಬಹಳ ಕಡಿಮೆ ಆಗಿದೆ ಎನ್ನುತ್ತಾರೆ ಹರ್ಲಾನ್ ಕೋಬೆನ್. ಈಗ ಸೀರಿಯಲ್ ಕಿಲ್ಲರ್ಸ್ ತಪ್ಪಿಸಿಕೊಳ್ಳೋದು ಸುಲಭವಲ್ಲ. ಎಲ್ಲರ ಕೈನಲ್ಲಿ ಮೊಬೈಲ್ ಇದೆ, ಸಿಸಿಟಿವಿ ಇದೆ. ಎಲ್ಲ ಅಪರಾಧಿ ಮೇಲೆ ನಿಗಾ ಇಡಲಾಗ್ತಿದೆ ಎನ್ನುವ ಕೋರ್ಬೆನ್, ಇದ್ರಿಂದ ಕಿಲ್ಲರ್ ಗಳ ಸಂಖ್ಯೆ ಕಡಿಮೆ ಎನ್ನುತ್ತಾರೆ. ನನ್ನಿಷ್ಟದಂತೆ ಒಬ್ಬ ಸೀರಿಯಲ್ ಕಥೆಯನ್ನು ಹೇಗೆ ಬರೆಯಬೇಕು, ಅಮೆರಿಕಾದಲ್ಲಿ ಸಿರಿಯಲ್ ಕಿಲ್ಲರ್ ಸಂಖ್ಯೆ ಹಿಂದೆ ಬಹಳ ಹೆಚ್ಚಿತ್ತು. 1970ರ ದಶಕದಲ್ಲಿ 300 ಸಿರಿಯಲ್ ಕಿಲ್ಲರ್ಸ್ ಇದ್ರು. 2010ರ ಸಮಯದಲ್ಲಿ ಅವರ ಸಂಖ್ಯೆ 50ಕ್ಕೆ ಇಳಿದಿತ್ತು. ಪೊಲೀಸರು ಬೇಗ ಕಿಲ್ಲರ್ಸ್ ಪತ್ತೆ ಮಾಡ್ತಿದ್ದಾರೆ. ಇದು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ನಾವೆಲ್ಲ ನೆಮ್ಮದಿಯಾಗಿದ್ದೇವೆ. ಆದ್ರೆ ಕಾದಂಬರಿಯಲ್ಲಿ ನೈಜತೆ ತರಲು ಕಷ್ಟವಾಗ್ತಿದೆ ಎಂದು ಹರ್ಲಾನ್ ಕೋಬೆನ್ ಹೇಳಿದ್ದಾರೆ. ಹರ್ಲಾನ್ ಕೋಬೆನ್ ಪ್ರಕಾರ, ಬ್ರಿಟನ್ ನಲ್ಲೂ ಕ್ರೈಂ ಸಂಖ್ಯೆ ಕಡಿಮೆ ಆಗಿದೆ. ಹರ್ಲಾನ್ ಕೋಬೆನ್ ಮಾತು ಕೇಳಿದ ನಂತ್ರ, ನೈಜ ಘಟನೆ ಆಧರಿಸಿದ್ದಾಗ ಮಾತ್ರವೇ ಅಪರಾಧಕ್ಕೆ ಸಂಬಂಧಿಸಿದ ಕಾದಂಬರಿ ಪ್ರಸಿದ್ಧಿ ಪಡೆಯೋದಾ ಎನ್ನುವ ಪ್ರಶ್ನೆ ಹುಟ್ಟಿಕೊಳ್ತಿದೆ. 

ಸಾಹಿತಿಗಳ ಮೌನವನ್ನು ಹಗುರವಾಗಿ ನೋಡಬೇಡಿ-ವೈದೇಹಿ

click me!