ಮಂಗಳೂರು; ಮೊದಲ ರಾತ್ರಿಯಲ್ಲೇ ಹೃದಯಾಘಾತದಿಂದ ನವವಧು ನಿಧನ

Published : Mar 01, 2021, 04:03 PM ISTUpdated : Mar 01, 2021, 04:10 PM IST
ಮಂಗಳೂರು; ಮೊದಲ ರಾತ್ರಿಯಲ್ಲೇ ಹೃದಯಾಘಾತದಿಂದ ನವವಧು ನಿಧನ

ಸಾರಾಂಶ

ಮೊದಲ ರಾತ್ರಿಯೇ ನವ ವಧು ಹೃದಯಾಘಾತದಿಂದ ಸಾವು/  ಮಂಗಳೂರಿನ ಹೊರವಲಯದಲ್ಲಿ ಪ್ರಕರಣ/ ಎರಡು ಕುಟುಂಬದಲ್ಲಿ ಶೋಕ/ ಔತಣಕೂಟದಲ್ಲಿ ಸಂಭ್ರಮದಲ್ಲಿಯೇ ಇದ್ದ ವಧು

ಮಂಗಳೂರು(ಮಾ. 01)  ವಿವಾಹವಾದ ಮೊದಲ ರಾತ್ರಿಯೇ ನವವಧು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಸೋಮವಾರ ನಸುಕಿನಲ್ಲಿ ಘಟನೆ ಸಂಭವಿಸಿದೆ.

ಅಡ್ಯಾಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆ.ಎಚ್.ಕೆ. ಅಬ್ದುಲ್ ಕರೀಂ ಹಾಜಿ ಅವರ ಪುತ್ರಿ ಲೈಲಾ ಆಫಿಯಾ (23) ಮೃತ ನವವಧು. ಭಾನುವಾರಷ್ಟೆ ಕಣ್ಣೂರಿನ ಮುಬಾರಕ್ ಎಂಬವರೊಂದಿಗೆ ಲೈಲಾ ಮದುವೆ ಅಲ್ಲಿನ ಜುಮಾ ಮಸೀದಿಯಲ್ಲಿ ನೆರವೇರಿತ್ತು.

ಪ್ಯಾನಿಕ್ ಅಟ್ಯಾಕ್ ಮತ್ತು ಹಾರ್ಟ್ ಅಟ್ಯಾಕ್ ನಡುವಿನ ವ್ಯತ್ಯಾಸ ತಿಳಿಯಿರಿ

ಅಡ್ಯಾರ್ ಗಾರ್ಡನ್‌ನಲ್ಲಿ ಔತಣಕೂಟವನ್ನೂ ಏರ್ಪಡಿಸಲಾಗಿತ್ತು. ಬಳಿಕ ರಾತ್ರಿ ಸಂಪ್ರದಾಯದಂತೆ ನವ ವಧು-ವರರು ವಧುವಿನ ಮನೆಗೆ ತೆರಳಿದ್ದರು.

ವಿವಾಹ, ಔತಣಕೂಟದುದ್ದಕ್ಕೂ ವಧು ಸಂಭ್ರಮದಲ್ಲೇ ಇದ್ದರು. ಆದರೆ ಮೊದಲ ರಾತ್ರಿ ಕಳೆದು ಸೋಮವಾರ ಮುಂಜಾನೆ 3 ಗಂಟೆ ವೇಳೆಗೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾಾರೆ. ಸಂಭ್ರಮ ಆವರಿಸಿದ್ದ ಮನೆಯಲ್ಲಿ ದಿಢೀರನೆ ಜವರಾಯ ಎರಗಿದ್ದು ಎರಡೂ ಕುಟುಂಬಸ್ಥರಿಗೆ ಆಘಾತ ನೀಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!