ಪತಿಗೆ ವಂಚಿಸಿ ಸರ್ಕಲ್ ಇನ್ಸ್‌ಪೆಕ್ಟರ್ ಜೊತೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸರಸ!

By Suvarna News  |  First Published Jan 4, 2023, 4:45 PM IST

ಮಹಿಳಾ ಸಬ್ ಇನ್ಸ್‌ಪೆಕ್ಟರ್ ಹಾಗೂ ಸಕರ್ಲ್ ಇನ್ಸ್‌ಪೆಕ್ಟರ್ ಡ್ಯೂಟಿ ಅಕ್ಕಪಕ್ಕದ ಪೊಲೀಸ್ ಠಾಣೆಯಲ್ಲೇ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿತ್ತು. ಹೀಗಾಗಿ  ವಾಕಿ ಟಾಕಿ ಸಂದೇಶಕ್ಕಿಂತ ವ್ಯಾಟ್ಸ್ಆ್ಯಪ್ ಸಂದೇಶವೇ ಹೆಚ್ಚಾಯಿತು. ಸಲುಗೆ ಅತಿಯಾಯಿತು, ಸರಸ ಜೋರಾಯಿತು. ಇವರ ಲವ್ವಿ ಡವ್ವಿ ಮನೆಯಲ್ಲಿದ್ದ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಪತಿಗೂ ತಲುಪಿತು. ಇಷ್ಟೇ ನೋಡಿ, ಗಂಡನ ಆಕ್ರೋಶಕ್ಕೆ ಇಬ್ಬರು ಅಮಾನತ್ತಾಗಿದ್ದಾರೆ.


ವಾರಂಗಲ್(ಜ.04):  ರಕ್ಷಣೆ ಕೇಳಿ ಬಂದವರಿಗೆ ರಕ್ಷಣೆ, ಅಕ್ರಮವನ್ನು ತಡೆದು ನ್ಯಾಯದ ದಾರಿಯಲ್ಲಿ ಎಲ್ಲರನ್ನು ನಡೆಸುವ ಮಹತ್ತರ ಜವಾಬ್ದಾರಿ ಪೊಲೀಸರ ಮೇಲಿದೆ. ಆದರೆ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸರಸ ಸಲ್ಲಾಪ ಇದೀಗ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ತಂದಿದೆ. ಮಹಿಳಾ ಸಬ್ ಇನ್ಸ್‌ಪೆಕ್ಟರ್ ಹರಿಪ್ರಿಯಾ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ರಾಯಲ ವೆಂಕಟೇಶ್ವರಲು ನಡುವಿನ ರೋಮ್ಯಾನ್ಸ್ ಇದೀಗ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಹರಿಪ್ರಿಯಾ ಇತ್ತೀಚೆಗೆ ಮದುವೆಯಾಗಿದ್ದಾರೆ. ಆದರೆ ಪತಿಗೆ ವಂಚಿಸಿ ವೆಂಕಟೇಶ್ವರಲು ಜೊತೆಗಿನ ಲವ್ವಿ ಡವ್ವಿ ಮುಂದುವರಿಸಿದ್ದಾರೆ. ಈ ಕುರಿತು ಅನುಮಾನಗೊಂಡ ಪತಿ ವಾರಂಗಲ್ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು. ಇದರ ಪರಿಣಾಮ ಇದೀಗ ಇಬ್ಬರು ಪೊಲೀಸ್ ಅಧಿಕಾರಿಗಳು ಅಮಾನತ್ತಾಗಿದ್ದಾರೆ. ಇದ್ದ ಪತಿ ಮಾತ್ರವಲ್ಲ, ಮನೆಯವರು ಕೂಡ ದೂರವಾಗಿದ್ದಾರೆ.

ಗೆಸಿಗೊಂಡ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ರಾಯಲ ವೆಂಕಟೇಶ್ವರಲು ಹಾಗೂ ದಮೆರಾ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎ ಹರಿಪ್ರಿಯಾ ನುಡುವಿನ ಕುಚ್ ಕುಚ್ ಕೆಲ ವರ್ಷಗಳಿಂದಲೇ ನಡೆಯುತ್ತಿತ್ತು. ಇದು ಎರಡು ಪೊಲೀಸ್ ಠಾಣೆಯಲ್ಲಿದ್ದ ಇತರ ಪೊಲೀಸರಿಗೆ ತಿಳಿದಿತ್ತು. ಆದರೆ ಹಿರಿಯ ಅಧಿಕಾರಿಗಳಾಗಿದ್ದ ಕಾರಣ ಎಲ್ಲರೂ ಸುಮ್ಮನಿದ್ದರು. ಇವರ ಸರಸ ಸಲ್ಲಾಪ, ರೋಮ್ಯಾನ್ಸ್‌ಗೆ ಠಾಣೆಯ ಗೋಡೆಗಳು ಸಾಕ್ಷಿಯಾಗಿತ್ತು. ಇದರ ನಡುವೆ  ಹರಿಪ್ರಿಯಾಗೆ ಮದುವೆ ನಿಶ್ಚಯವಾಗಿದೆ. ಸ್ವತಃ ಹರಿಪ್ರಿಯಾ ಕೂಡ ಮದುಗೆ ಒಪ್ಪಿಕೊಂಡಿದ್ದಾರೆ.

Tap to resize

Latest Videos

ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ: ಪ್ರದೀಪ್ ಪತ್ನಿ ದಾಖಲಿಸಿದ್ದ ಕೇಸ್‌ಗೆ ಟ್ವಿಸ್ಟ್!

ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಮದುವೆಯಾಗಿದೆ. ಮದುವೆಯಾದ ಬಳಿಕ ಪ್ರತಿ ದಿನ ಡ್ಯೂಟಿ, ಸ್ಪೆಷಲ್ ಡ್ಯೂಟಿ ಹೆಸರಲ್ಲಿ ಹರಿಪ್ರಿಯಾ ಠಾಣೆಗೆ ಹಾಜರಾಗುತ್ತಿದ್ದಳು. ಇದು ಪತಿಗೆ ಅನುಮಾನ ತರಿಸಿತ್ತು. ಇನ್ನು ಫೋನ್ ಕರೆ, ಮಾತುಕತೆ ಮೇಲೆ ಅನುಮಾನಗಳು ಹೆಚ್ಚಾಗಿತ್ತು. ಹರಿಪ್ರಿಯಾ ನಡೆ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಈ ಕುರಿತು ಪತ್ನಿಯನ್ನು ಪಶ್ನಿಸಿದ ವೇಳೆ ದೊಡ್ಡ ರಾದ್ದಾಂತವೇ ನಡೆದು ಹೋಗಿದೆ. ಪತಿ ಸಂಶದಿಂದ ನೋಡುತ್ತಿದ್ದಾರ ಎಂದು ಪೋಷಕರಲ್ಲೂ ಪರಿಪ್ರಿಯಾ ದೂರು ನೀಡಿದ್ದರು. ಇವರ ಜಗಳ ಸಂಧಾನದ ಮೂಲಕ ಅಂತ್ಯವಾಗಿತ್ತು. ಕುಟುಂಬಸ್ಥರು ಸಂಧಾನ ನಡೆಸಿದ್ದರು. 

ಬಳಿಕ ಸುಮ್ಮನಾಗಿದ್ದ ಪತಿಯ ಅನುಮಾನ ಮಾತ್ರ ಬಗೆ ಹರಿದಿರಲಿಲ್ಲ. ಹೀಗಾಗಿ ಪತ್ನಿಯ ಫೋನ್ ಮಾತುಕತೆ ಹಾಗೂ ಸಂದೇಶದ ಕುರಿತು ಮಾಹಿತಿ ಪಡೆದಿದ್ದಾರೆ. ಈ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ಜೊತೆಗಿನ ಅಶ್ಲೀಲ ಸಂದೇಶಗಳು, ಮಾತುಕತೆಗಳು ಪತ್ತೆಯಾಗಿದೆ. ಈ ಸಾಕ್ಷಿ ಜೊತೆಗೆ ಕೆಲ ತಿಂಗಳ ಕಾಲ ಹರಿಪ್ರಿಯಾ ಗಮನಿಸಿದ ಪತಿಗೆ ಇವರ ಖುಲ್ಲಾಂ ಖುಲ್ಲಾ ಅರಿವಾಗಿದೆ.

ಕಾರು ಅಡ್ಡಗಟ್ಟಿ 80 ಲಕ್ಷ ಎಗರಿಸಿದ ನಕಲಿ ಪೊಲೀಸರು!

ಇದರಿಂದ ಆಕ್ರೋಶಗೊಂಡ ಪತಿ ನೇರವಾಗಿ ವಾರಂಗಲ್ ಪೊಲೀಸ್ ಕಮೀಷನರ್ ಎವಿ ರಂಗನಾಥ್‌ಗೆ ದೂರು ನೀಡಿದ್ದಾರೆ. ಇಷ್ಟೇ ಅಲ್ಲ ತಮ್ಮಲ್ಲಿರುವ ಸಾಕ್ಷಿಗಳನ್ನು ನೀಡಿದ್ದಾರೆ. ಪತಿ ದೂರನ್ನು ಗಂಭೀರವಾಗಿ ಪರಿಗಣಿಸಿದ ಎವಿ ರಂಗನಾಥ್ ತನಿಖೆ ನಡೆಸಿದ್ದಾರೆ. ಈ ತನಿಖೆಯಲ್ಲಿ ವೆಂಕಟೇಶ್ವರಲು ಹಾಗೂ ಹರಿಪ್ರಿಯಾ ಸರಸ ಬಹಿರಂಗವಾಗಿದೆ. ಹೀಗಾಗಿ ಇಬ್ಬರನ್ನು ಅಮಾನತು ಮಾಡಲಾಗಿದೆ. ತನಗೆ ವಂಚಿಸಿದ ಪತ್ನಿ ಬೇಡ ಎಂದು ಪತಿ ಹರಿಪ್ರಿಯಾಳಿಂದ ದೂರವಾಗಿದ್ದಾಳೆ. ಇತ್ತ ಹರಿಪ್ರಿಯಾ ಕುಟುಂಬಸ್ಥರು ಇದೀಗ ಅಂತರ ಕಾಯ್ದುಕೊಂಡಿದ್ದಾರೆ.  
 

click me!