
ರಾಮನಗರ (ಜ.04): ಬೆಂಗಳೂರಿನ ಕಗ್ಗಲಿಪುರದಲ್ಲಿ ಉದ್ಯಮಿ ಪ್ರದೀಪ್ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೌದು! ಪ್ರದೀಪ್ ಪತ್ನಿ ಪ್ರದೀಪ್ ಮೇಲೆ ದಾಖಲಿಸಿದ್ದ ಕೇಸ್‌ಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಕಳೆದ ಮೇ 2022 ರಲ್ಲಿ ಬೆಳ್ಳಂದೂರು ಠಾಣೆಗೆ ಪತಿ ವಿರುದ್ದ ನಮಿತ ದೂರು ನೀಡಿದ್ದರು. ಪ್ರದೀಪ್ ಗನ್ ತೋರಿಸಿ ಸಾಯಿಸುವುದಾಗಿ ಬೆದರಿಸುತ್ತಾನೆಂದು ನಮಿತ ದೂರು ನೀಡಿದ್ದು, ಅಸಲಿಗೆ ಪ್ರದೀಪ್ ಈ ರೀತಿಯ ವರ್ತನೆಗೆ ಸಾಲಗಾರರ ಕಾಟ ಕಾರಣವಾಗಿತ್ತಂತೆ. ಮನೆ ಸೈಟ್ ಜಮೀನು ಮಾರಾಟ ಮಾಡಿ ಓಪೊಸ್ ಪಬ್‌ಗೆ ಇನ್ವೆಸ್ಟ್ ಮಾಡಿದ್ದ ಪ್ರದೀಪ್‌ಗೆ ಆತನ ಪತ್ನಿ ಸಹಾಯ ಮಾಡಿದ್ದರು.
ಸಾಲ ಹೆಚ್ಚಾದಾಗ ಮನೆಯಲ್ಲಿ ಪತ್ನಿಯ ಜೊತೆ ಪ್ರದೀಪ್ ಜಗಳವಾಡುತ್ತಿದ್ದು, ಪತ್ನಿ ಬೆಳ್ಳಂದೂರು ಠಾಣೆಗೆ ದೂರು ನೀಡಿದಾಗ್ಲೂ ಶಾಸಕ ಅರವಿಂದ ಲಿಂಬಾವಳಿಯ ಸಹಾಯವನ್ನು ಪ್ರದೀಪ್ ಕೋರಿದ್ದರು. ಈ ವಿಚಾರವು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇನ್ನು ಅರವಿಂದ್ ಲಿಂಬಾವಳಿ ಶಾಸಕ ಅನ್ನೊದನ್ನ ಕಗ್ಗಲಿಪುರ ಪೊಲೀಸರು ತಿಳಿಯದೇ ಹೋದ್ರಾ? ಜೊತೆಗೆ ಎಫ್.ಐ.ಆರ್‌ನಲ್ಲಿ ಅರವಿಂದ್ ಲಿಂಬಾವಳಿ A3 ಆರೋಪಿ ಆದ್ರೆ ಕಾಮನ್ ಮ್ಯಾನ್ ಅಂತ ಉಲ್ಲೇಖ ಮಾಡಲಾಗಿದೆ. ರಾಜಕಾರಣಿಗಳ ಮೇಲೆ ಎಫ್.ಐ.ಆರ್ ಆದ್ರೆ ಪೊಲಿಟಿಷಿಯನ್ ಅಂತ ಉಲ್ಲೇಖಿಸಲಾಗುತ್ತೆ. ಆದ್ರೆ ಈ ಪ್ರಕರಣದಲ್ಲಿ ಅರವಿಂದ ಲಿಂಬಾವಳಿ ಶಾಸಕ ಅನ್ನೊ ಬದಲು ಸಾಮಾನ್ಯ ವ್ಯಕ್ತಿಯೆಂದು ಉಲ್ಲೇಖ ಮಾಡಲಾಗಿದ್ದು, ಪ್ರಕರಣದಲ್ಲಿ ಶಾಸಕರ ಹೆಸರನ್ನ ಉಲ್ಲೇಖಿಸದಂತೆ ಹಲವರ ಒತ್ತಡ ಕೇಳಿಬಂದಿತ್ತು.
ಉದ್ಯಮಿ ಆತ್ಮಹತ್ಯೆ: ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್‌ಐಆರ್ ಪ್ರಶ್ನಿಸಿ ಪೊಲೀಸರಿಗೆ ಪ್ರಭಾವಿಗಳ ಕರೆ
ಹೀಗಾಗಿ ಮೊದಲಿಗೆ ಎಫ್.ಐ.ಆರ್‌ನಲ್ಲಿ ಹೆಸರನ್ನ ಉಲ್ಲೇಖಿಸಿ ಶಾಸಕ ಅನ್ನೊದು ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೇ ಎಂ.ಎಲ್.ಎ ಮೇಲೆ ಎಫ್.ಐ.ಆರ್ ಹಾಕ್ತಿರ ಅನ್ನೊ ಪ್ರಭಾವಿಗಳಿಗೆ ಕಾಮನ್ ಮ್ಯಾನ್ ಅನ್ನೊ ರಿವರ್ಸ್ ಆನ್ಸರ್ ಕೂಡಾ ಕೊಟ್ಟಿದ್ದಾರೆ. ಪ್ರಕರಣದಲ್ಲಿ ಡೆತ್ ನೋಟ್ ಸತ್ಯಾಸತ್ಯತೆಗೆ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದು, ಡೆತ್ ನೋಟ್ ನಲ್ಲಿರೋ ಕೈ ಬರಹ ಪ್ರದೀಪ್ ನದ್ದೇನಾ ಅನ್ನೊ ತನಿಖೆಯನ್ನು ನಡೆಸಲಾಗುತ್ತಿದೆ. ಪ್ರದೀಪ್ ಬ್ಯಾಂಕ್ ಅಕೌಂಟ್ ಹೊಂದಿದ್ದ ಬ್ಯಾಂಕ್ ಮ್ಯಾನೇಜರ್ ಸಂಪರ್ಕಿಸಿರೋ ಪೊಲೀಸರು, ಬ್ಯಾಂಕ್ ಚೆಕ್ ಚಲನ್‌ನನಲ್ಲಿನ ಕೈ ಬರಹ ಹಾಗೂ ಡೆತ್ ನೋಟ್‌ನಲ್ಲಿನ ಬರಹ ಎರಡನ್ನೂ ಪರೀಕ್ಷಿಸಿ ಎಫ್.ಎಸ್.ಎಲ್ ಅಧಿಕಾರಿಗಳು ವರದಿ ನೀಡಲಿದ್ದಾರೆ.
ಏನಿದು ಘಟನೆ?: ವ್ಯವಹಾರದಲ್ಲಿ ಮೋಸ ಮಾಡಿದರೆಂಬ ಕಾರಣಕ್ಕೆ ರಾಜಕಾರಣಿಯೊಬ್ಬರ ಹೆಸರು ಸೇರಿದಂತೆ ಪ್ರಭಾವಿಗಳ ಹೆಸರು ಉಲ್ಲೇಖಿಸಿ ಡೆತ್‌ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ತಾಲೂಕಿನ ನೆಟ್ಟಿಗೆರೆ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಬಳಿಯ ಅಮಲೀಪುರದ ನಿವಾಸಿ ಪ್ರದೀಪ್ (47) ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೂ ಮುನ್ನ ಮಾಜಿ ಸಚಿವ ಅರವಿಂದ ಲಿಂಬಾವಳಿ, ಉದ್ಯಮಿಗಳಾದ ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ, ಡಾ ಜಯರಾಮರೆಡ್ಡಿ, ರಾಘವ ಭಟ್ ಅವರ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಹೊಸ ವರ್ಷಾಚರಣೆ ಸಲುವಾಗಿ ಪ್ರದೀಪ್ ಕುಟುಂಬ ಸಮೇತ ರಾಮನಗರದ ಕಗ್ಗಲೀಪುರ ಸಮೀಪವಿರುವ ನೆಟ್ಟಗೆರೆ ಬಳಿ ಇರುವ ರೆಸಾರ್ಟ್ ಗೆ ಆಗಮಿಸಿದ್ದರು.
ವ್ಯಕ್ತಿ ಆತ್ಮಹತ್ಯೆ: ಡೆತ್‌ನೋಟಲ್ಲಿ ಲಿಂಬಾವಳಿ ಹೆಸರು, FIR ದಾಖಲು
ಕಾರಿನಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ: ರಾತ್ರಿ ಪಾರ್ಟಿ ಮಾಡಿರುವ ಪ್ರದೀಪ್ ಬೆಳಗ್ಗೆ ಶಿರಾಗೆ ಹೋಗಬೇಕೆಂದು ಹೇಳಿ ರೆಸಾರ್ಟ್‌ನಿಂದ ಭಾನುವಾರ ಬೆಳಗ್ಗೆ ಒಬ್ಬರೇ ಬೆಂಗಳೂರಿನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿ ಡೆತ್‌ನೋಟ್ ಬರೆದಿದ್ದಾರೆ. ಆನತರ ರೆಸಾರ್ಟ್‌ಗೆ ವಾಪಸ್ಸಾದ ಪ್ರದೀಪ್, ಕಾರಿನಲ್ಲಿ ಮತ್ತೊಂದು ಡೆತ್‌ನೋಟ್ ಬರೆದಿದ್ದಾರೆ. ಈ ವೇಳೆ ಕುಟುಂಬದವರು ಹೊರಟ್ಟಿದ್ದ ಕಾರನ್ನು ಓವರ್ ಟೇಕ್ ಮಾಡಿ, ತಾನು ಚಲಾಯಿಸುತ್ತಿದ್ದ ಕಾರಿನಲ್ಲಿಯೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ