ನಗರದ ನಂತೂರು ಬಳಿ ದ್ವಿಚಕ್ರ ವಾಹನದಲ್ಲಿ 500 ರು. ಮುಖಬೆಲೆಯ 4.50 ಲಕ್ಷ ರು. ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ(Bantwal)ದ ಬಿ.ಸಿ.ರೋಡ್(BC Road) ನಿವಾಸಿ ನಿಜಾಮುದ್ದೀನ್(32)(Nijamuddin), ಮಂಗಳೂರು ಜೆಪ್ಪು ನಿವಾಸಿ ರಜೀಮ್(Rajeem) ಯಾನೆ ರಫಿ (31) ಬಂಧಿತರು
ಮಂಗಳೂರು (ಜ.4) : ನಗರದ ನಂತೂರು ಬಳಿ ದ್ವಿಚಕ್ರ ವಾಹನದಲ್ಲಿ 500 ರು. ಮುಖಬೆಲೆಯ 4.50 ಲಕ್ಷ ರು. ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಬಿ.ಸಿ.ರೋಡ್ ನಿವಾಸಿ ನಿಜಾಮುದ್ದೀನ್(32), ಮಂಗಳೂರು ಜೆಪ್ಪು ನಿವಾಸಿ ರಜೀಮ್ ಯಾನೆ ರಫಿ (31) ಬಂಧಿತರು ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೋಮವಾರ ಕದ್ರಿ ಠಾಣಾ ಪೊಲೀಸರು(Kadri police) ನಂತೂರು ಬಳಿ ವಾಹನ ತಪಾಸಣೆ ವೇಳೆ ಪೊಲೀಸರನ್ನು ಕಂಡು ಆರೋಪಿಗಳು ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಅವರನ್ನು ಬೆನ್ನಟ್ಟಿಹಿಡಿದು ತಪಾಸಣೆ ನಡೆಸಿದ್ದಾರೆ. ಆಗ 500 ರು. ಮುಖಬೆಲೆಯ 4.50 ಲಕ್ಷ ರು.ಗಳ ಖೋಟಾ ನೋಟು ಪತ್ತೆಯಾಗಿದೆ. ಕೂಡಲೇ ಆರೋಪಿಗಳನ್ನು ಪೊಲೀಸರು ಬಂಧಿಸಿ ಖೋಟಾ ನೋಟು ವಶಪಡಿಸಿದ್ದಾರೆ.
ಕರ್ನಾಟಕದಲ್ಲೇ ಅತಿಹೆಚ್ಚು 2000 ರೂ. ನಕಲಿ ನೋಟು ಪತ್ತೆ!
ಬೆಂಗಳೂರಿನ(Bengaluru) ಡೇನಿಯಲ್(Daniel) ಎಂಬಾತನಿಂದ ತಾವು ಖೋಟಾನೋಟು(currency notes) ಪಡೆದು ಚಲಾವಣೆ ಮಾಡಲು ಮುಂದಾಗಿರುವುದಾಗಿ ಪೊಲೀಸರಲ್ಲಿ ಆರೋಪಿಗಳು ತಿಳಿಸಿದ್ದಾರೆ. ಆರೋಪಿಗಳು ಸೋಮವಾರ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಅವರ ಸ್ಕೂಟರ್‌ನ್ನು ಸುಲಿಗೆ ಮಾಡಿದ್ದಾರೆ. ಬಳಿಕ ಅದೇ ವಾಹನವನ್ನು ಖೋಟೋ ನೋಟು ಸಾಗಾಟಕ್ಕೆ ಬಳಕೆ ಮಾಡಿದ್ದಾರೆ.