Blackmail: ಮಹಿಳೆಯರ ಹೆಸರಲ್ಲಿ ಖಾತೆ,  ಸಲುಗೆ ಬೆಳೆಸಿ ಈತ ಮಾಡ್ತಿದ್ದ 'ಬೆತ್ತಲೆ' ಕೆಲಸ!

Published : Dec 13, 2021, 04:55 PM IST
Blackmail: ಮಹಿಳೆಯರ ಹೆಸರಲ್ಲಿ ಖಾತೆ,  ಸಲುಗೆ ಬೆಳೆಸಿ ಈತ ಮಾಡ್ತಿದ್ದ 'ಬೆತ್ತಲೆ' ಕೆಲಸ!

ಸಾರಾಂಶ

* ಮಾರ್ಫ್ ಮಾಡಿದ ಪೋಟೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದ * ತಮಿಳುನಾಡಿನ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದಲ್ಲಿ ಆರೋಪಿ ಸೆರೆ * ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರ ಹೆಸರಿನ ಖಾತೆ * ಯುವತಿಯರನ್ನು ನಂಬಿಸಿ ಚಾಟ್ ಮಾಡುವುದರಲ್ಲಿ ನಿಸ್ಸೀಮ

ಕೊಯಮತ್ತೂರು(ಡಿ. 13) ಕಾಲೇಜು ವಿದ್ಯಾರ್ಥಿನಿಯೊಬ್ಬಳು (Student) ದೂರು ಸಲ್ಲಿಸಿದ್ದಾಳೆ.  23 ವರ್ಷದ ಯುವಕ  ಬೆತ್ತಲೆ ವಿಡಿಯೋ (Nude Video Call)ಕಾಲ್ ಮಾಡು ಇಲ್ಲವಾದರೆ ಮಾರ್ಪ್ ಮಾಡಿರುವ ನಗ್ನ ಪೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಕ್ಕೆ (Social Media) ಅಪ್ ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾಳೆ.

ಯುವತಿಯ ದೂರಿನ ಆಧಾರದಲ್ಲಿ ಪೊಲೀಸರು ಎನ್ ನಿಯಾಜ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.ಕೊಯಮತ್ತೂರು (Coimbatore) ನಗರದ ನಿವಾಸಿ ನಿಯಾಜ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ.  ನಿಯಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯರ ಹೆಸರಿನ ಖಾತೆ ಸೃಷ್ಟಿ ಮಾಡಿಕೊಂಡಿದ್ದಾನೆ.  ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಮಹಿಳೆಯಂತೆ ನಟಿಸಿ ಮಾತನಾಡುತ್ತಿದ್ದ. ಯುವತಿ ಸಹ ತಾನು ಒಬ್ಬ ಸ್ತ್ರೀ ಜತೆಗೆ ಮಾತನಾಡುತ್ತಿರುವುದು ಎಂದು ನಂಬಿದ್ದಳು.

ಯುವತಿಯ ಪೋಟೋಗಳನ್ನು ಡೌನ್ ಲೋಡ್ ಮಾಡಿಕೊಂಡು ತನಗೆ ಬೇಕಾದಂತೆ ಮಾರ್ಪ್ ಮಾಡಿಕೊಂಡಿದ್ದಾನೆ.  ಇದನ್ನು ಯುವತಿಗೆ ಕಳುಹಿಸಿ ತನಗೆ ಬೆತ್ತಲೆ ಕರೆ ಮಾಡಬೇಕು ಎಂದು ಬೆದರಿಕೆ ಹಾಕಲು ಆರಂಭಿಸಿದ್ದಾನೆ.  ಒಂದು ವೇಳೆ ಮಾಡಿಲ್ಲ ಎಂದಾದರೆ ಎಲ್ಲ ಪೋಟೋ ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

American Impostor: 22ರ ಪೋರಿಯಂತೆ ಪೋಸ್‌ ಕೊಟ್ಟ 48ರ ಮಹಿಳೆ: ಕಿರಿಯ ವಯಸ್ಸಿನ ಯುವಕರ ಜತೆ ಲವ್ವಿಡವ್ವಿ!

ಇದರಿಂದ ನೊಂದ ಯುವತಿ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಿದ್ದಾಳೆ.  ಎಲ್ಲ ಮಾಹಿತಿ ಪಡೆದುಕೊಂಡ ಪೊಲೀಸರು  ಯುವಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354A (ಲೈಂಗಿಕ ಕಿರುಕುಳ), 354B (ವಿವಸ್ತ್ರಗೊಳ್ಳಲು ಅಪರಾಧಿಯ ಆಕ್ರಮಣ ಅಥವಾ ಬಳಕೆ) ಮತ್ತು 354D (ಹಿಂಬಾಲಿಸುವಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ತಮಿಳುನಾಡು ಮಹಿಳೆಯರ ಮೇಲಿನ ಕಿರುಕುಳ ನಿಷೇಧ ಕಾಯ್ದೆಯಡಿ ಸಂಬಂಧಿತ ಆರೋಪಿಗಳನ್ನು ದಾಖಲಿಸಿ ಆರೋಪಿಯನ್ನು ಡಿ.  10 ರಂದು  ಬಂಧಿಸಲಾಗಿದೆ. 

ಹಲವು ಯುವತಿಯರು ನ್ಯೂಡ್ ವಿಡಿಯೋ ಕಾಳ್ ಮಾಡಿದ ವಿಡಿಯೋಗಳನ್ನು ಆರೋಪಿಯ ಮೊಬೈಲ್‌ನಿಂದ ವಶಕ್ಕೆ ಪಡೆದುಕೊಂಡಿದ್ದೇವೆ.  ಈತನಿಂದ ತೊಂದರೆಗೆ ಒಳಗಾಗದ ಯುವತಿಯರು ಮುಂದೆ ಬಂದು ದೂರು ನೀಡಬೇಕು ಎಂದು ಪೊಲೀಸರು ಕೇಳಿಕೊಂಡಿದ್ದಾರೆ.

ಒಂದು ತಿಂಗಳ ಹಿಂದಿನ ಪ್ರಕರಣ:  ತಮಿಳುನಾಡಿನ ತಿರುವೆರ್ಕಾಡು ಪೊಲೀಸರು  ಇಂಥದ್ದೇ ಒಂದು ಪ್ರಕರಣವನ್ನು ತಿಂಗಳ ಹಿಂದೆ ಪತ್ತೆ ಮಾಡಿದ್ದರು. ಮಾರ್ಫ್ ಮಾಡಿದ್ದ ಪೋಟೋ ಇಟ್ಟುಕೊಂಡು ಮಹಿಳೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದರು. ಮಾರ್ಫ್ ಮಾಡಿದ ಚಿತ್ರಗಳನ್ನು ಸೋಶಿಯಲ್ ಮೀಡಿಯಾಕ್ಕೆ ಹರಿಯಬಿಡುತ್ತೇನೆ ಎಂದು ಭಯ ಹುಟ್ಟಿಸಿದ್ದ  ಆರೋಪಿಯನ್ನು ಬಂಧಿಸಲಾಗಿತ್ತು.

ಬೆಂಗಳೂರಿನ ಪ್ರಕರಣ:  ಯುವತಿಯ ಖಾಸಗಿ ಫೋಟೋ​ಗ​ಳನ್ನು ಸಾಮಾ​ಜಿಕ ಜಾಲ​ತಾ​ಣ​ದಲ್ಲಿ (Social Media) ಹಾಕುವುದಾಗಿ 3 ವರ್ಷಗಳಿಂದ ಬ್ಲ್ಯಾಕ್‌​ಮೇಲ್‌ ಮಾಡು​ತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

19 ವರ್ಷ​ದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಈಕೆಯ ಸ್ನೇಹಿತರಾದ ದೇವಸಂದ್ರ ನಿವಾಸಿಗಳಾದ ಬ್ರಿಜ್‌ ಭೂಷಣ್‌ ಯಾದವ್‌ (21) ಮತ್ತು ವಿವೇಕ್‌ ರೆಡ್ಡಿ (20) ಎಂಬುವರನ್ನು ಬೆಂಗಳೂರಿನ(Bengaluru) ಅಮೃತಹಳ್ಳಿ ಪೊಲೀಸ್‌ ಠಾಣೆ​ ಪೊಲೀಸರು ಬಂಧಿಸಿದ್ದರು.

ಕೆ.ಆರ್‌.ಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಯುವತಿಗೆ ಆರೋಪಿ ಬ್ರಿಜ್‌ಭೂಷಣ್‌ ಪರಿಚಯವಾಗಿತ್ತು. ಬಳಿಕ ಇಬ್ಬರು ಸ್ನೇಹಿತರಾಗಿದ್ದರು.  ಆರೋಪಿ ಸಂತ್ರ​ಸ್ತೆಯ ಮನೆಗೆ ಬರುವಷ್ಟು ಸಲುಗೆ ಬೆಳೆಸಿಕೊಂಡಿದ್ದ.ಇದರಿಂದ ಯುವತಿಗೆ ಅನುಮಾನ ಬಂದು  ಆರೋ​ಪಿ​ಯಿಂದ ಅಂತರ ಕಾಯ್ದು​ಕೊಂಡು, ಮಾತ​ನಾ​ಡು​ವು​ದನ್ನು ಬಿಟ್ಟಿ​ದ್ದರು. 

ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಆರೋಪಿ ನನ್ನ ಬಳಿ ನಿನ್ನ ಬೆತ್ತಲೆ ಫೋಟೋ​ಗ​ಳಿ​ವೆ. ಹಣ, ಚಿನ್ನಾ​ಭ​ರಣ ಕೊಡ​ದಿ​ದ್ದ​ರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕು​ತ್ತೇನೆ ಎಂದು ಬೆದ​ರಿ​ಕೆ​ಯೊ​ಡ್ಡುತ್ತಿದ್ದ. ಇದರಿಂದ ಆತಂಕಗೊಂಡ ಯುವತಿ ಮನೆ​ಯ​ಲ್ಲಿದ್ದ 218 ಗ್ರಾಂ ಚಿನ್ನಾ​ಭ​ರಣ, 75 ಸಾವಿರ ರು. ನಗದು ಕೊಟ್ಟಿ​ದ್ದಳು.

ಬ್ರಿಜ್‌ ಭೂಷಣ್‌ನ ಸ್ನೇಹಿತ ವಿವೇಕ್‌ ರೆಡ್ಡಿ 2019ರಲ್ಲಿ ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಚಾಟ್‌ ಮಾಡುತ್ತಿದ್ದ. ಬಳಿಕ ರಾಚೇ​ನ​ಹಳ್ಳಿ ಕೆರೆ ಬಳಿ ಕರೆ​ಸಿ​ಕೊಂಡು ಅಸ​ಭ್ಯ​ವಾಗಿ ನಡೆ​ದು​ಕೊ​ಳ್ಳು​ತ್ತಿದ್ದ. ಒಮ್ಮೆ ಕರೆ ಮಾಡಿ ನಿನ್ನ ಖಾಸಗಿ ಫೋಟೋ ಇದೆ.ಹಣ, ಒಡ​ವೆ ಕೊಡದಿದ್ದರೆ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡು​ತ್ತೇ​ನೆ ಎಂದು ಬೆದರಿಸಿದ್ದ. ಇದ​ರಿಂದ ಹೆದರಿದ ಸಂತ್ರಸ್ತೆ,​ ತ​ನ್ನ ಮಾವನ ಪತ್ನಿಯ ಮಾಂಗಲ್ಯ ಸರ ತಂದು ಕೊಟ್ಟಿದ್ದಳು. ಅಂತಿಮವಾಗಿ ಪೊಲೀಸರಿಗೆ ದೂರು  ನೀಡಿದ್ದು ಆರೋಪಿಗಳ ಹೆಡೆಮುರಿ ಕಟ್ಟಲಾಗಿತ್ತು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!