Bitcoin Scam: ನಾಪತ್ತೆಯಾಗಿದ್ದ ಹ್ಯಾಕರ್‌ ಶ್ರೀಕಿ ಪೊಲೀಸರ ಮುಂದೆ ಪ್ರತ್ಯಕ್ಷ

By Kannadaprabha NewsFirst Published Dec 13, 2021, 9:15 AM IST
Highlights

*   ಕೋರ್ಟ್‌ ನಿರ್ದೇಶನದಂತೆ ಠಾಣೆಗೆ ಬಂದು ಸಹಿ
*   ಪರಾರಿ ಊಹಾಪೋಹಗಳಿಗೆ ತೆರೆ
*   ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಶ್ರೀಕಿಯನ್ನು ಬಂಧಿಸಿದ್ದ ಪೊಲೀಸರು
 

ಬೆಂಗಳೂರು(ಡಿ.13):  ಇತ್ತೀಚೆಗೆ ರಾಜ್ಯದಲ್ಲಿ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿ ಬಿಟ್‌ ಕಾಯಿನ್‌(Bitcoin Scam) ಪ್ರಕರಣ ಬೆಳಕಿಗೆ ಬಂದ ನಂತರ ನಿಗೂಢವಾಗಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ(International Hacker Shreeki) ಭಾನುವಾರ ದಿಢೀರನೇ ಜೀವನ್‌ಭೀಮಾ ನಗರ ಪೊಲೀಸರ(Police) ಮುಂದೆ ಪ್ರತ್ಯಕ್ಷನಾಗಿದ್ದಾನೆ. ಆ ವೇಳೆ, ನಾನು ಎಲ್ಲಿಯೂ ಓಡಿ ಹೋಗಿಲ್ಲ. ಬೆಂಗಳೂರಿನಲ್ಲೇ(Bengaluru) ನನ್ನ ಮನೆಯಲ್ಲೇ ಇದ್ದೇನೆ. ನನಗೆ ಪ್ರಚಾರದ ಅವಶ್ಯಕತೆ ಇಲ್ಲ. ನ್ಯಾಯಾಲಯದ(Court) ಸೂಚನೆಯಂತೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ಠಾಣೆಗೆ ಬಂದು ಸಹಿ ಮಾಡುತ್ತೇನೆ ಎಂದು ಪೊಲೀಸರಿಗೆ ಶ್ರೀಕಿ ಸ್ಪಷ್ಟನೆ ಕೊಟ್ಟಿದ್ದಾನೆ ಎನ್ನಲಾಗಿದೆ.

ನ.6ರಂದು ಹಳೇ ವಿಮಾನ ನಿಲ್ದಾಣ ರಸ್ತೆಯ ರಾಯಲ್‌ ಆರ್ಕಿಡ್‌ ಸ್ಟಾರ್‌ ಹೋಟೆಲ್‌ನಲ್ಲಿ ಸಿಬ್ಬಂದಿ ಮೇಲೆ ಹಲ್ಲೆ(Assault) ಹಾಗೂ ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಶ್ರೀಕಿಯನ್ನು ಜೆ.ಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ನ.11ರಂದು ಜಾಮೀನು ಪಡೆದು ಆತ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ. ಅದೇ ಹೊತ್ತಿಗೆ ರಾಜ್ಯದಲ್ಲಿ(Karnataka) ಬಿಟ್‌ಕಾಯಿನ್‌ ವಿವಾದ ಕಾವೇರಿತ್ತು. ಶ್ರೀಕಿ ಜೀವಕ್ಕೆ ಅಪಾಯವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಸೇರಿದಂತೆ ಕಾಂಗ್ರೆಸ್‌(Congress) ನಾಯಕರು ಶಂಕಿಸಿದ್ದರು.

Bitcoin Scam| ಶ್ರೀಕಿಯನ್ನ ಅರೆಸ್ಟ್‌ ಮಾಡಿದ್ದು ಬಿಜೆಪಿ ಸರ್ಕಾರ: ಆರಗ ಜ್ಞಾನೇಂದ್ರ

ಈ ಹಿನ್ನೆಲೆಯಲ್ಲಿ ಶ್ರೀಕಿ ಮನೆಗೆ ಪೊಲೀಸ್‌ ಭದ್ರತೆ(Police Security) ಕಲ್ಪಿಸಲಾಗಿತ್ತು. ಆದರೆ ಜೈಲಿನಿಂದ(Jail) ಬಿಡುಗಡೆಯಾದ ಬಳಿಕ ಬಹಿರಂಗವಾಗಿ ಕಾಣಿಸಿಕೊಳ್ಳದೆ ಪೊಲೀಸರ ಸಂಪರ್ಕಕ್ಕೂ ಸಿಗದೆ ಶ್ರೀಕಿ ಅಜ್ಞಾತವಾಗಿದ್ದು, ಹಲವು ವದಂತಿಗಳಿಗೆ ಕಾರಣವಾಗಿತ್ತು. ಕೊನೆಗೆ ಭಾನುವಾರ ಮಧ್ಯಾಹ್ನ ಜೆ.ಬಿ.ನಗರ ಠಾಣೆಯಲ್ಲಿ ಶ್ರೀಕಿ ಪ್ರತ್ಯಕ್ಷವಾಗುವ ಮೂಲಕ ತನ್ನ ಪರಾರಿ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾನೆ.

ಹ್ಯಾಕರ್‌ ಶ್ರೀಕಿ ಚಾರ್ಜ್‌ಶೀಟ್‌ನಲ್ಲಿ ಕಾಂಗ್ರೆಸ್‌ನ ಹ್ಯಾರಿಸ್‌, ಲಮಾಣಿ ಮಕ್ಕಳ ಹೆಸರು!

ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿರುವ ಬಿಟ್‌ ಕಾಯಿನ್‌ ಹಗರಣದ ಕೇಂದ್ರ ಬಿಂದು, ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಗೆ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ (Congress MLA NA Harris) ಪುತ್ರ ಹಾಗೂ ಹಾವೇರಿಯ ಮಾಜಿ ಸಚಿವ ರುದ್ರಪ್ಪ ಲಮಾಣಿ (Rudrappa Lamani) ಪುತ್ರನ ಜತೆ ಆಪ್ತ ಸ್ನೇಹವಿತ್ತು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎರಡು ಪ್ರತ್ಯೇಕ ಆರೋಪ ಪಟ್ಟಿಗಳಲ್ಲಿ ಈ ಅಂಶ ಉಲ್ಲೇಖವಾಗಿದೆ.

Bitcoin| ರಾಹುಲ್‌, ಮಲ್ಯ ಟ್ವಿಟರ್‌ ಹ್ಯಾಕ್‌ ಮಾಡಿದ್ದ ಶ್ರೀಕಿ..!

ಹ್ಯಾರಿಸ್‌ ಪುತ್ರ ಉಮರ್‌ ನಲಪಾಡ್‌ (Umar Haris Nalapad) ಹಾಗೂ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ (Darshan Lamani) ಜತೆ ಆತ್ಮೀಯ ಒಡನಾಟ ಹೊಂದಿದ್ದ ಶ್ರೀಕಿ, ಈ ನಾಯಕರ ಮಕ್ಕಳ ಜತೆ ಹಣಕಾಸು ವ್ಯವಹಾರ ಸಹ ಹೊಂದಿದ್ದ. ಅಲ್ಲದೆ, 2018ರಲ್ಲಿ ಉಮರ್‌ನ ಸೋದರ ಮೊಹಮ್ಮದ್‌ ನಲಪಾಡ್‌ ವಿರುದ್ಧ ದಾಖಲಾಗಿದ್ದ ಯುಬಿ ಸಿಟಿ (UB City) ಪಬ್‌ ಗಲಾಟೆ ಪ್ರಕರಣದಲ್ಲಿ ಶ್ರೀಕಿ ಆರೋಪಿಯಾಗಿದ್ದ. ಹಾಗೆಯೇ 2020ರಲ್ಲಿ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ ಬಂಧಿತನಾಗಿದ್ದ ಡ್ರಗ್ಸ್‌ ಕೇಸ್‌ನಲ್ಲಿ ಶ್ರೀಕಿಯನ್ನು ಸಿಸಿಬಿ ಬಂಧಿಸಿತ್ತು. ಈ ಬಗ್ಗೆ ನ್ಯಾಯಾಲಯಕ್ಕೆ ಸಿಸಿಬಿ ಸಲ್ಲಿಸಿರುವ ಆರೋಪ ಪಟ್ಟಿಗಳಲ್ಲಿ ಕೂಡ ಉಲ್ಲೇಖವಾಗಿದೆ. 

9 ಕೋಟಿ ಬಿಟ್‌ ಕಾಯಿನ್‌ ಸಂಪಾದಿಸಿದ್ದ ಹ್ಯಾಕರ್‌ ಶ್ರೀಕಿ

ಮಾದಕ ವಸ್ತು ಮಾರಾಟ ದಂಧೆಯಲ್ಲಿ(Drugs Mafia) ಸಿಕ್ಕಿಬಿದ್ದಿದ್ದ ಕುಖ್ಯಾತ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಹಲವು ವೆಬ್‌ಸೈಟ್‌ಗಳಿಗೆ ಕನ್ನ ಹಾಕಿ ದೋಚಿದ್ದ ಸುಮಾರು 9 ಕೋಟಿ ಮೌಲ್ಯದ 31 ಬಿಟ್‌ ಕಾಯಿನ್‌ಗಳನ್ನು ಸಿಸಿಬಿ ಪೊಲೀಸರು(CCB Police) ಜಪ್ತಿ ಮಾಡಿದ್ದರು.
 

click me!