Medical Seat Fraud: ವೈದ್ಯಕೀಯ ಸೀಟು ಆಸೆ ತೋರಿಸಿ 15 ಲಕ್ಷ ಮೋಸ

By Kannadaprabha NewsFirst Published Dec 13, 2021, 12:44 PM IST
Highlights

*  ಕೇವಲ 35 ಲಕ್ಷಕ್ಕೆ ಸೀಟು ಕೊಡಿಸುತ್ತೇವೆ ಎಂದಿದ್ದ ವಂಚಕರು
*  ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶಕ್ಕೆ ಪ್ರಯತ್ನ
*  5 ಲಕ್ಷ ಸಾಲ ಕೊಡಿಸುವುದಾಗಿ 3 ಲಕ್ಷ ಟೋಪಿ 
 

ಬೆಂಗಳೂರು(ಡಿ.13):  ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಸೀಟು(Medical Seat) ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ(Woman) 15 ಲಕ್ಷ ಪಡೆದು ದುಷ್ಕರ್ಮಿಗಳು(Miscreants) ವಂಚಿಸಿರುವ ಘಟನೆ ನಡೆದಿದೆ. ಕೊಡಗು(Kodagu) ಜಿಲ್ಲೆ ಗೋಣಿಕೊಪ್ಪದ ನಿವಾಸಿ ಶೀಲಾ ಎಂಬುವರೇ ಮೋಸ ಹೋಗಿದ್ದು, ಸಂತ್ರಸ್ತೆ(Vitim) ನೀಡಿದ ದೂರಿನ ಮೇರೆಗೆ ಹೇಮ ಕೋಮಲ್‌ ಹಾಗೂ ಬಾಲು ವಿರುದ್ಧ ಅಶೋಕ್‌ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಕೊಡುಗು ಜಿಲ್ಲೆಯ ಶೀಲಾ ಅವರಿಗೆ ಓಮನ್‌(Oman) ದೇಶದ ಖಾಸಗಿ ಕಂಪನಿಯಲ್ಲಿ ಉದ್ಯೋಗ(Job) ಸಿಕ್ಕಿತು. ಈ ಕಂಪನಿಗೆ ಕೆಲಸಕ್ಕೆ ಸೇರುವ ಮುನ್ನ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವಂತೆ ಅವರಿಗೆ ಕಂಪನಿ ಸೂಚಿಸಿತ್ತು. ಅಂತೆಯೇ ಅಶೋಕ ನಗರ ಸಮೀಪದ ರಿಚ್ಮಂಡ್‌ ಮೆಡಿಕಲ್‌ ಕೇರ್‌ನಲ್ಲಿ ಶೀಲಾ ವೈದ್ಯಕೀಯ ತಪಾಸಣೆಗೆ ತೆರಳಿದ್ದಾಗ ಆರೋಪಿಗಳ ಪರಿಚಯವಾಗಿದೆ. ಆಗ ಆರೋಪಿಗಳಿಗೆ ನನ್ನ ಮಗಳಿಗೆ ಮೆಡಿಕಲ್‌ ಓದಿಸಲು ನಿರ್ಧರಿಸಿದ್ದು, ಇದಕ್ಕಾಗಿ ರಾಜ್ಯದ(Karnataka) ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದೇನೆ ಎಂದು ಶೀಲಾ ಹೇಳಿದ್ದರು. ಈ ಮಾತಿಗೆ ಆರೋಪಿಗಳು, ನಮಗೆ ಪ್ರತಿಷ್ಠಿತ ಮೆಡಿಕಲ್‌ ಕಾಲೇಜು ಆಡಳಿತ ಮಂಡಳಿ ಪರಿಚಿಯವಿದೆ. ನಿಮಗೆ ಕೇವಲ 35 ಲಕ್ಷಕ್ಕೆ ಸೀಟು ಕೊಡಿಸುತ್ತೇವೆ ಎಂದಿದ್ದಾರೆ. ಈ ಮಾತು ನಂಬಿದ ಅವರು, ಆರೋಪಿಗಳಿಗೆ ಹಣ ಕೊಟ್ಟು ಕಳೆದುಕೊಂಡಿದ್ದಾರೆ ಎಂದು ಪೊಲೀಸರು(Police) ಹೇಳಿದ್ದಾರೆ.

Marriage Fraud: 60 ವರ್ಷದ ಮುದುಕನ ಮದುವೆಗೆ ತಂದಿದ್ದ ಸೀರೆ, ತಾಳಿ ಜತೆ ವಧು ಪರಾರಿ..!

5 ಲಕ್ಷ ಸಾಲ ಕೊಡಿಸುವುದಾಗಿ 3 ಲಕ್ಷ ಟೋಪಿ!

ಹುಬ್ಬಳ್ಳಿ(Hubballi): ಬಜಾಜ್‌ ಫೈನಾನ್ಸ್‌ನಲ್ಲಿ(Bajaj Finance) ಕೇವಲ ಶೇ. 5ರ ಬಡ್ಡಿ ದರದಲ್ಲಿ 5 ಲಕ್ಷ ಸಾಲ(Loan) ಕೊಡಿಸುವುದಾಗಿ ನಂಬಿಸಿದ ಅಪರಿಚಿತ ಅಗತ್ಯ ದಾಖಲೆ ಪಡೆದು 3 ಲಕ್ಷ ಪಡೆದು ವಂಚಿಸಿದ ಬಗ್ಗೆ ಇಲ್ಲಿನ ಸೈಬರ್‌ ಕ್ರೈಂ(Cyber Crime) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪಶ್ಚಿಮ ಬಂಗಾಳದ(West Bengal) ಸದ್ಯ ಧಾರವಾಡ(Dharwad) ನಿವಾಸಿ ಹಾರು ಆಸ್ಟೋಬೋರ್‌ ವಂಚನೆಗೆ ಒಳಗಾದವರು. ಕಲ್ಕತ್ತಾದಿಂದ ಕರೆ ಮಾಡುವುದಾಗಿ ಹೇಳಿದ ವಂಚಕ ಆಧಾರ, ಪಾನ್‌, ಐಟಿ ರಿಟರ್ನ್‌ ಪಾಡದು ಬಜಾಜ್‌ ಫೈನಾನ್ಸ್‌ದಿಂದ 5 ಲಕ್ಷ ಸಾಲ ಮಂಜೂರಾಗಿದೆ ಎಂದು ನಂಬಿಸಿದ್ದಾನೆ. ಬಳಿಕ ಲೋನ್‌ ಅಕೌಂಟ್‌ ತೆರೆಯಲು ತಿಳಿಸಿ ಅಪ್ರೂವಲ್‌ ಫೀಜ್‌, ಇನ್ಶ್ಯೂರೆನ್ಸ್‌ ಫೀಜ್‌ ಪಾಸ್‌ವರ್ಡ್‌ ಸೆಟ್ಟಿಂಗ್‌ ಚಾಜ್‌ರ್‍ ಎಂದು ಹಂತ ಹಂತವಾಗಿ 304100 ಆನ್‌ಲೈನ್‌, ಎಟಿಎಂ ಮೂಲಕ ಡ್ರಾ. ಮಾಡಿಕೊಂಡು ಬಳಿಕ ಸಾಲವನ್ನೂ ವಂಚಿಸಿದ್ದಾನೆ ಎಂದು ದೂರಲ್ಲಿ ದಾಖಲಾಗಿದೆ.

Aadhaar Fraud: ಆಧಾರ್‌ ಪಡೆದು ಮೆಗಾ ಮೋಸ: ಕಂಗಾಲಾದ ಜನ..!

100 ಕೋಟಿ ಸಾಲದಾಸೆ ತೋರಿಸಿ 1.8 ಕೋಟಿ ಧೋಖಾ: ಕಂಗಾಲಾದ ಉದ್ಯಮಿ..!

ಬೆಂಗಳೂರು: ಉದ್ಯಮಿಯೊಬ್ಬರಿಗೆ 100 ಕೋಟಿ ರು. ಸಾಲ ಕೊಡುವುದಾಗಿ ಮುಂಗಡವಾಗಿ ಮೂರು ತಿಂಗಳ ಬಡ್ಡಿ ರೂಪದಲ್ಲಿ 1.8 ಕೋಟಿ ರು. ಪಡೆದು ಬಳಿಕ ಸಾಲ ನೀಡದೇ ವಂಚಿಸಿದ್ದ(Fraud) ಪ್ರಕರಣ ಸಂಬಂಧ ನಾಲ್ಕು ಮಂದಿ ಆರೋಪಿಗಳನ್ನು(Accused) ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ ಘಟನೆ ಡಿ.10 ರಂದು ನಡೆದಿತ್ತು.

ಎಚ್‌ಎಸ್‌ಆರ್‌ ಲೇಔಟ್‌ನ ನರೇಶ್‌(36), ವಿಜಯ್‌ ಆನಂದ್‌(37), ನಿವೇದಿತಾ(37), ಹರ್ಷಿಣಿ(29) ಬಂಧಿತರು(Arrest). ಆರೋಪಿಗಳು ಇತ್ತೀಚೆಗೆ ಹೈದರಾಬಾದ್‌(Hyderabad) ಮೂಲದ ಉದ್ಯಮಿ(Businessman) ಪಿ.ಕೃಷ್ಣಂ ರಾಜು ಅವರಿಗೆ 100 ಕೋಟಿ ರು. ಸಾಲ(Loan) ನೀಡುವುದಾಗಿ ನಂಬಿಸಿ ಮುಂಗಡವಾಗಿ ಮೂರು ತಿಂಗಳ ಬಡ್ಡಿ(Interest) 1.8 ಕೋಟಿ ರು. ಪಡೆದು ಬಳಿಕ ಸಾಲ ನೀಡದೇ ವಂಚಿಸಿದ್ದರು. 

ಈ ಸಂಬಂಧ ಉದ್ಯಮಿಯ ಅಳಿಯ ಮಂಥೆನಾ ತರುಣ್‌ ಗಾಂಧಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ತಮಿಳುನಾಡು(Tamil Nadu) ಮೂಲದ ಕಾತಿರ್‌ ವೇಲನ್‌ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
 

click me!