ದೇಗುಲಕ್ಕೆಂದು ರೆಸಾರ್ಟ್‌ಗೆ ಕರೆದೊಯ್ದ ಕಾಲೇಜು ಮುಖ್ಯಸ್ಥ: ಹೆಣ್ಣುಮಕ್ಕಳ ದೂರು

By Suvarna News  |  First Published Aug 18, 2022, 4:40 PM IST

ವಿದ್ಯಾನಗರಿಯ ಕಾಲೇಜೊಂದರಲ್ಲಿ ಹೇಯ ಕೃತ್ಯವೊಂದು ನಡೆದಿದ್ದು, ಧಾರವಾಡ ಶಿಕ್ಷಣ ಕಾಶಿ ಖ್ಯಾತಿಗೆ ಮಸಿ ಬಳಿಯುವಂತಹ ಕೆಲಸವನ್ನು ಪ್ರಿನ್ಸಿಪಲ್ ಮತ್ತು ಕಾಲೇಜಿನ ಮುಖ್ಯಸ್ಥ ಇಬ್ಬರು ಸೇರಿ ಮಾಡಿದ್ದಾರೆ.


ವರದಿ ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 
ಧಾರವಾಡ :  ಧಾರವಾಡ ಅಂದ್ರೆ ವಿದ್ಯಾಕಾಶಿ ಅಂತಾನೇ ಫೇಮಸ್ ಆಗಿದೆ ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಶಿಕ್ಷಣ ಸಂಸ್ಥೆ ಮತ್ತು ಕೋಚಿಂಗ್ ಕೇಂದ್ರಗಳನ್ನು ಹೊಂದಿರುವುದು ಧಾರವಾಡ ನಗರದ ಹೆಗ್ಗಳಿಕೆ ಆಗಿದೆ. ಇದೇ ಕಾರಣಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೂ ಇಲ್ಲಿಗೆ ವಿದ್ಯಾರ್ಥಿಗಳು ಒಳ್ಳೆ ಶಿಕ್ಷಣ ಸಿಗುತ್ತೆ ಅಂತಾ ಕಲಿಯಲು ಬರ್ತಾರೆ. ಆದ್ರೆ ಈಗ ಶಿಕ್ಷಣಕ್ಕೆ ಹೆಸರುವಾಸಿಯಾಗಿರೋ ಈ ವಿದ್ಯಾನಗರಿಯ ಕಾಲೇಜೊಂದರಲ್ಲಿ ಹೇಯ ಕೃತ್ಯವೊಂದು ನಡೆದಿದ್ದು, ಧಾರವಾಡ ಶಿಕ್ಷಣ ಕಾಶಿ ಖ್ಯಾತಿಗೆ ಮಸಿ ಬಳಿಯುವಂತಹ ಕೆಲಸವನ್ನು ಪ್ರಿನ್ಸಿಪಲ್ ಮತ್ತು ಕಾಲೇಜಿನ ಮುಖ್ಯಸ್ಥ ಇಬ್ಬರು ಸೇರಿ ಮಾಡಿದ್ದಾರೆ.

ಧಾರವಾಡದ ಜಯನಗರ ಭಾವಿಯ ಬಳಿ ಇರುವ ವಿಶ್ವೇಶ್ವರಯ್ಯ ಪಿಯು ಸೈನ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖುದ್ದು ಈ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷನ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಅದಕ್ಕೆ ಪ್ರಾಚಾರ್ಯರೇ ಸಾಥ್ ನೀಡುತ್ತಾರೆ ಅನ್ನೋ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಸದ್ಯ ನೊಂದ ವಿದ್ಯಾರ್ಥಿನಿಯರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಕಾಲೇಜ್‌​ನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹದೇವ ಕುರವತ್ತಿಗೌಡರ ವಿರುದ್ಧ  ಉಪನಗರದ ನೊಂದ ವಿದ್ಯಾರ್ಥಿನಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಸಂಸ್ಥೆಯ ಅಧ್ಯಕ್ಷ ಬಸವರಾಜ ಪರಾರಿಯಾಗಿದ್ದು, ಪ್ರಾಚಾರ್ಯ ಮಹದೇವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Tap to resize

Latest Videos

ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆಗೆ ಓವೈಸಿ ಕೆಂಡ, ಇದು ಗುಜರಾತ್ ಚುನಾವಣಾ ಗಿಮಿಕ್ ಎಂದ AIMIM!

ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕಾಲೇಜ್ ಎದುರು ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು  ಪ್ರತಿಭಟನೆ ನಡೆಸಿ ಆಕ್ರೊಶ ಹೊರ ಹಾಕಿದ್ದಾರೆ. ಇನ್ನು ಧಾರವಾಡದಲ್ಲಿ 30ಕ್ಕೂ ಹೆಚ್ಚು  ಖಾಸಗಿ ಕಾಲೇಜು​ಗಳಿವೆ  ಧಾರವಾಡ ಹಾಗೂ ಸುತ್ತಮುತ್ತಲಿನ ಜಿಲ್ಲೆ ಮಾತ್ರವಲ್ಲ ಹೈದರಾಬಾದ್ ಕರ್ನಾಟಕ, ಮೈಸೂರು, ಕರ್ನಾಟಕ ಭಾಗದಿಂದಲೂ ಇಲ್ಲಿಗೆ ಕಲಿಯೋದಕ್ಕೆ ಅಂತ ಅನೇಕ ಮಕ್ಕಳನ್ನು ಪಾಲಕರು ಇಲ್ಲಿಗೆ ಕಳುಹಿಸಿ ಕೊಡ್ತಾರೆ. ಮೊದಲಿನಿಂದಲೂ ಧಾರವಾಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿರುವ ನಗರ ಹೀಗಾಗಿ ಇಲ್ಲಿ ನಮ್ಮ ಮಕ್ಕಳು ಸುರಕ್ಷಿತವಾಗಿ ಇರ್ತಾರೆ ಅನ್ನೋ ಕಾರಣಕ್ಕಾಗಿಯೇ ಇಲ್ಲಿಗೆ ಕಲಿಯಲು ಕಳುಹಿಸುತ್ತಾರೆ. ಆದರೆ ಇಲ್ಲಿ ಕಾಲೇಜು  ಅಧ್ಯಕ್ಷನೇ ಹೀಗೆ ಮಾಡಿರೋದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಪ್ರಶ್ನೆ ಉದ್ಭವಿಸಿದೆ. 

ಇನ್ನು ವಿಶ್ವೇಶ್ವರ ಪಿಯು ವಿಜ್ಞಾನ ಕಾಲೇಜ್‌ನ ಅಧ್ಯಕ್ಷರ ವರ್ತನೆಯ ಬಗ್ಗೆ ನೊಂದ ವಿದ್ಯಾರ್ಥಿನಿ ಎಫ್​ಐಆರ್‌ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ವಿದ್ಯಾರ್ಥಿನಿಯನ್ನು ಪುಸಲಾಯಿಸಿ ದಾಂಡೇಲಿಗೆ ಕರೆದುಕೊಂಡು ಹೋದ ಬಸವರಾಜ, ಜ್ಯೂಸ್ ಅಂತಾ ಹೇಳಿ ಬಿಯರ್ ಕುಡಿಸಿ, ಆಕೆ ನಿದ್ದೆಗೆ ಜಾರಿದಾಗ ದೈಹಿಕ ಸಂಪರ್ಕ ಮಾಡಿದ್ದಾನಂತೆ. ಇಂತಹ ನೀಚ ಕೃತ್ಯದಿಂದ ಬೇಸತ್ತ ವಿದ್ಯಾರ್ಥಿನಿಯ ನೋವು ಕೇಳಬೇಕಾದ ಪ್ರಾಚಾರ್ಯನೇ ಅಧ್ಯಕ್ಷನ ಜೊತೆ ವಿದ್ಯಾರ್ಥಿನಿಯನ್ನು ಕಳುಹಿಸಿ ಕೊಡುತ್ತಿದ್ದ ಅನ್ನೋ ಆರೋಪವೂ ಕೇಳಿ ಬಂದಿದ್ದು, ಇದೀಗ ಇಡೀ ಧಾರವಾಡಕ್ಕೆ ಕಪ್ಪು ಚುಕ್ಕೆ ಬಂದಿದೆ.

ಅತ್ಯಾಚಾರ ಆರೋಪ; ಖ್ಯಾತ ಗಾಯಕ ರಾಹುಲ್ ಜೈನ್ ವಿರುದ್ಧ ಎಫ್ ಐ ಆರ್ ದಾಖಲು

ಆಯಾ ಕಾಲೇಜ್‌ಗಳಲ್ಲಿರೋ ಮಹಿಳಾ ಸುರಕ್ಷತಾ ಮತ್ತು ದೂರು ಘಟಕಗಳು ಆ್ಯಕ್ಟಿವ್ ಇದೆಯೇ ಅನ್ನೋ ಪ್ರಶ್ನೆ ಉದ್ಭವಿಸಿದ್ದು, ಇದೆ ವಿಷಯ ಇಟ್ಟುಕೊಂಡು ವಿಶ್ವೇಶ್ವರಯ್ಯ ಕಾಲೇಜ್‌ನ ವಿದ್ಯಾರ್ಥಿಗಳು ಮತ್ತು ಪಾಲಕರು ಡಿಡಿಪಿಯು ಕಚೇರಿಗೆ ದೂರು ಸಲ್ಲಿಸಿದ್ದಾರೆ‌. ಸದ್ಯ ಕಾಲೇಜು ಅಧ್ಯಕ್ಷ ಮತ್ತು ಪ್ರಾಚಾರ್ಯನ ಮೇಲೆಯೇ ಕೇಸ್ ಆಗಿರೋ ಹಿನ್ನೆಲೆ ಕಾಲೇಜ್‌ನ್ನು ಸರ್ಕಾರ ವಶಕ್ಕೆ ಪಡೆಯಬೇಕೆಂಬ ಆಗ್ರಹ ಕೇಳಿ ಬಂದಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರ ಡಿಡಿಪಿಯು ತಿಳಿಸಿದ್ದಾರೆ.

ಸದ್ಯ ಧಾರವಾಡದಲ್ಲಿ ಒಂದು ಕಾಲೇಜಿನ​ವರು ಮಾಡಿರೋ ನೀಚ ಕೃತ್ಯಕ್ಕೆ ಇಲ್ಲಿಗೆ ಕಲಿಯಲು ಬಂದಿರೋ ಹೆಣ್ಣು ಮಕ್ಕಳಲ್ಲಿ ಭಯದ ವಾತಾವರಣ ಎದುರಾಗಿದೆ. ಸದ್ಯಕ್ಕೆ ಆಯಾ ಕಾಲೇಜ್‌ಗಗಳಲ್ಲಿ ವಿದ್ಯಾರ್ಥಿನಿಯರ ದೂರು ಕೇಳೋಕೆ ಅಂತಾನೇ ಮಹಿಳಾ ಸೆಲ್ ಕಡ್ಡಾಯವಾಗಿ ಮಾಡಬೇಕು. ಆದ್ರೆ ಆ ಕಾರ್ಯ ಧಾರವಾಡದಲ್ಲಿ ಆಗುತ್ತಿಲ್ಲವೆ ಅನ್ನೋ ಗುಮಾನಿ ಬರೋಕೆ ಶುರುವಾಗಿದೆ. ಇನ್ನು ಧಾರವಾಡ ಉಪನಗರ ಪೊಲೀಸರು ಪ್ರಿನ್ಸಿಪಲ್ ಮಹಾದೇವ್ ನನ್ನ‌ ವಶಕ್ಕೆ ಪಡೆದುಕ್ಕೊಂಡು ವಿಚಾರಣೆ ಮಾಡುತ್ತಿದ್ದಾರೆ.ಕಳೆದ ಎರಡು ದಿನದಿಂದ ಸಂಸ್ಥೆಯ ಮುಖ್ಯಸ್ಥ ಬಸವರಾಜ ಯಡವನ್ನವರ ತಲೆ ಮೆರೆಸಿಕೊಂಡಿದ್ದಾನೆ. ಆತನಿಗಾಗಿ ಎರಡು ತಂಡವನ್ನ ರಚನೆ ಮಾಡಿ ಆರೋಪಿ ಬಸವನಿಗೆ ಪೊಲೀಸರು ಬಲೆ ಬೀಸಿದ್ದಾರೆ.
 

click me!