
ತುಮಕೂರು: ಅದೊಂದು ತುಂಬು ಕುಟುಂಬ. ಗಂಡ, ಹೆಂಡತಿ ಮತ್ತು ಮುದ್ದಾ ಮೂರು ಮಕ್ಕಳು. ಆದರೆ ಇಡೀ ಕುಟುಂಬ ಹೆಂಡತಿ ಮಾಡಿದ ಒಂದು ತಪ್ಪಿನಿಂದ ಛಿದ್ರವಾಗಿದೆ. ಮದುವೆಯಾಗಿ ಮೂರು ಮಕ್ಕಳಿದ್ದರೂ ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದವಳು ಕುಟುಂಬ ತೊರೆದಿದ್ದಾಳೆ. ಪ್ರಿಯಕರನ ಜೊತೆ ಸೌದಿ ಅರೇಬಿಯಾಗೆ ಓಡಿ ಹೋಗಿದ್ದಾಳೆ. ನಂತರ ಮೋಜು ಮಸ್ತಿ ಮಾಡುತ್ತಾ ಗಂಡನಿಗೆ ವಿಡಿಯೋ ಕರೆ ಮಾಡುತ್ತಿದ್ದಳು. ಗಂಡ ಮತ್ತು ಮಕ್ಕಳು ವಾಪಸ್ ಭಾರತಕ್ಕೆ ಬರುವಂತೆ ಎಷ್ಟು ಗೋಗರೆದರೂ ಬರದಿದ್ದಾಗ ಗಂಡ ಮಕ್ಕಳಿಗೂ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೆಂಡತಿ ಬಿಟ್ಟು ಹೋದ ದಿನದಿಂದ ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದ ಎನ್ನಲಾಗಿದೆ. ಆತ ಮೃತಪಟ್ಟಿದ್ದು ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತ ಘಟನೆ ನಡೆದಿರುವುದು ರಾಜಧಾನಿಯ ಪಕ್ಕದ ಜಿಲ್ಲೆ ತುಮಕೂರಿನಲ್ಲಿ. ತುಮಕೂರಿನ ಪಿಎಚ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಸಮೀವುಲ್ಲಾ ಎಂಬುವವನೇ ಮೃತ ದುರ್ದೈವಿ. ಸದ್ಯ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು ಬದುಕಿನ ನಡುವೆ ಮಕ್ಕಳು ಹೋರಾಡುತ್ತಿದ್ದಾರೆ. ತಾಯಿ ಮಾಡಿದ ತಪ್ಪಿಗೆ ಮಕ್ಕಳಿಗೆ ರೌರವ ನರಕ ಪ್ರಾಪ್ತಿಯಾಗಿದೆ.
ಇದನ್ನೂ ಓದಿ:
ಪ್ರಿಯಕರನ ಜತೆಗೆ ಪರಾರಿ:10 ವರ್ಷ ವಯಸ್ಸು ಕಡಿಮೆ ಹೇಳಿ ಮದುವೆ: ‘ಬಾ ನಲ್ಲೆ ಮಧುಚಂದ್ರಕೆ’ ರೀತಿ ಪತ್ನಿ ಕೊಲೆ!
ಗಂಡನಿಗೆ ಒಂದು ಮಾತೂ ಹೇಳದೆ ದೇಶವನ್ನೇ ತೊರೆದು ಪ್ರಿಯಕರನೊಂದಿಗೆ ಸೌದಿ ಅರೇಬಿಯಾಗೆ ಹೆಂಡತಿ ಓಡಿಹೋಗಿದ್ದಾಳೆ. ಆಗಾಗ ಮೋಜು ಮಸ್ತಿ ಮಾಡುತ್ತಾ ವಿಡಿಯೋ ಕಾಲ್ ಮಾಡಿ ಗಂಡನನ್ನು ರೇಗಿಸುತ್ತಿದ್ದಳು ಎಂದು ತಿಳಿದುಬಂದಿದೆ. ಪತ್ನಿ ವಾಪಸ್ ಬರಲ್ಲ, ಎಂದಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇಶ ಬಿಟ್ಟು ಸೌದಿಗೆ ಹೋದ ನಂತರ ಅಲ್ಲಿ ಮನೆ ಕೆಲಸ ಮಾಡಿಕೊಂಡು ಹೆಂಡತಿ ಸಾಹೇರಾ ಭಾನು ಅರಾಮಾಗಿದ್ದಾಳೆ. ಹೆಂಡತಿ ವಿಡಿಯೋ ಕಾಲ್ ಮಾಡಿ ಲೇವಡಿ ಮಾಡುತ್ತಿದ್ದರೂ ವಾಪಸ್ ಬಂದು ಬಿಡು ಎಂದು ಗಂಡ ಗೋಗರೆಯುತ್ತಿದ್ದ. ಮಕ್ಕಳೂ ಸಹ ಹಲವು ಬಾರಿ ಕಣ್ಣೀರು ಹಾಕಿದ್ದು. ಮಕ್ಕಳ ಕಣ್ಣೀರಿಗೂ ಸಾಹೇರಾ ಭಾನು ಕರಗಲಿಲ್ಲ.
ಅಮ್ಮ ಬರಲ್ಲ ಎಂಬ ವಿಚಾರ ಅರಿವಾಗಿ ತಂದೆಯೊಂದಿಗೆ ಮೂವರು ಮಕ್ಕಳು ಇಂದು ವಿಷ ಸೇವಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಈಗ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಸಮೀವುಲ್ಲಾ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅನೈತಿಕ ಸಂಬಂಧದ ಶಂಕೆ; ಗಂಡನ ಮರ್ಮಾಂಗದ ಮೇಲೆ ಬಿಸಿ ನೀರು ಸುರಿದ ಹೆಂಡತಿ
ಗಂಡನ ಮೇಲೆ ಪ್ರೀತಿ ಇಲ್ಲ ಎಂದರೆ ಒಪ್ಪಬಹುದು. ಆದರೆ ಮುದ್ದಾದ ಮಕ್ಕಳ ಕಣ್ಣೀರಿಗೂ ಕರಗದೇ ಇರುವ ಸಾಹೇರಾ ಭಾನು ವಿರುದ್ಧ ನೆರೆಹೊರೆಯವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಹೆಂಡತಿ ಸಿಗರೇಟು ಸೇದುತ್ತಾ ಸಮೀವುಲ್ಲಾಗೆ ಕರೆ ಮಾಡುತ್ತಿದ್ದಳು. ನೀನೆಷ್ಟೇ ಅತ್ತರೂ ನಾನು ವಾಪಸ್ ಬರುವುದಿಲ್ಲ. ನೀನು ಅಳ್ಳುವುದನ್ನು ನೋಡಿ ಖುಷಿ ಪಡಲೆಂದೇ ವಿಡಿಯೋ ಕರೆ ಮಾಡುತ್ತೇನೆ ಎಂದು ಕುಚೋದ್ಯ ಮಾಡುತ್ತಿದ್ದಳು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಮೃತ ಸಮೀವುಲ್ಲಾ ಮೊಬೈಲಿನಲ್ಲಿ ಹಲವು ಸ್ಕ್ರೀನ್ ಗ್ರಾಬ್ ಕೂಡ ಲಭ್ಯವಾಗಿದ್ದು ಅದರಲ್ಲಿ ಆಕೆ ಎಲೆಕ್ಟ್ರಿಕ್ ಸಿಗರೇಟ್ ಸೇದುತ್ತಿರುವ ಫೋಟೊಗಳು ಲಭ್ಯವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ