* ಬಾಡೂಟಕ್ಕೆ ಹೋದವನ ಬರ್ಬರ ಹತ್ಯೆ,
* ಜಿಮ್ ಬಾಡಿಗೆ ಚಾಕುವಿನಿಂದ ಚುಚ್ಚಿ ಕೊಲೆ
* ದಾವಣಗೆರೆ ನಗರದ ನಿಟ್ಟುವಳ್ಳಿ ಬಡಾವಣೆಯಲ್ಲಿ ಘಟನೆ
ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಏ.28): ಆತ ಬಾಡಿ ಬಿಲ್ಡರ್ ಅಷ್ಟೇ ಅಲ್ಲ ಜಿಮ್ ಟ್ರೈನರ್ ಕೂಡ.ನಿನ್ನೆ (ಬುಧವಾರ) ರಾತ್ರಿ ಸ್ನೇಹಿತರ ಜೊತೆ ಊಟಕ್ಕೆಂದು ಹೋದವನು ಬರ್ಬರವಾಗಿ ಕೊಲೆಯಾಗಿದ್ದಾನೆ. ಕಟ್ ಮಸ್ತ್ ಆದ ಬಾಡಿ ಇದ್ದರು ದುಷ್ಕರ್ಮಿಗಳ ಹರಿತವಾದ ಚಾಕುವಿನ ಮುಂದೆ ಮಂಡಿಯೂರಿದ್ದಾನೆ. ಆತನ ಹೊಟ್ಟೆಗೆ ಹತ್ತಾರು ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿರುವ ಕೃತ್ಯ ಎಂತವರನ್ನು ಬೆಚ್ಚಿ ಬೀಳಿಸುತ್ತದೆ.
ದಾವಣಗೆರೆ ನಗರದ ನಿಟ್ಟುವಳ್ಳಿ ಬಡಾವಣೆ ಧನ್ಯಕುಮಾರ್ ಆಲಿಯಾಸ್ ಧನ್ಯ ಕಳೆದ ರಾತ್ರಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾರೆ. ನಿನ್ನೆ ರಾತ್ರಿ ದಾವಣಗೆರೆಯಿಂದ ಉಚ್ಚಂಗಿದುರ್ಗ ದ ಬಳಿ ಹಾಲಮ್ಮ ತೋಪಿಗೆ ಊಟಕ್ಕೆಂದು ಹೋಗಿದ್ದಾಗ ಮಧ್ಯರಾತ್ರಿ ಇಂತಹದೊಂದು ಘಟನೆ ನಡೆದಿದೆ.ಧನ್ಯ ಜೊತೆಗಿದ್ದ ಕೆಲವರು ಹಾಲಮ್ಮನ ತೋಪಿನಲ್ಲಿ ಕುಡಿದು ತಿಂದು ನಂತರ ಕೃತ್ಯ ವೆಸೆಗಿದ್ದಾರೆ. ಮಧ್ಯರಾತ್ರಿ 1.30 ರ ಸುಮಾರಿಗೆ ಧನ್ಯಕುಮಾರ್ ನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ. ಬೆಳಿಗ್ಗೆ ದೊಡ್ಡ ಬೇವಿನಹಳ್ಳಿ ತಾಂಡಾದ ಜಮೀನೊಂದರಲ್ಲಿ ರಕ್ತಸಿಕ್ತಗೊಂಡಿದ್ದ ಧನ್ಯಕುಮಾರ್ ಮೃತದೇಹ ಪತ್ತೆಯಾಗಿದೆ.ಹೊಲದಲ್ಲಿ ಬಿದ್ದಿದ್ದ ಮೃತದೇಹ ನೋಡಿದ ಸಾರ್ವಜನಿಕರು ಪೊಲೀಸರಿಗೆ ವಿಷ್ಯ ಮುಟ್ಟಿಸಿದ್ದಾರೆ. ಧನ್ಯಕುಮಾರ್ ಮೃತದೇಹದಲ್ಲಿ ಹತ್ತಾರು ಕಡೆ ಚಾಕುವಿನಿಂದ ಹಿರಿದು ಗಾಯಗೊಳಿಸಿದ ಚಿಹ್ನೆಗಳಿದ್ದು ಕರುಳಿನ ಭಾಗವೇ ಕಿತ್ತುಬಂದಿದೆ.
Suvarna FIR ಕುಚುಕು ಗೆಳೆಯರ ನಡುವೆ ಹಣಕ್ಕಾಗಿ ಕಿರಿಕ್, ಕೊಲೆಯಲ್ಲಿ ಅಂತ್ಯ
ಸ್ಥಳಕ್ಕೆ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೂರರಿಂದ ನಾಲ್ಕು ಜನ ಸೇರಿಕೊಂಡು ಕೊಲೆ ಮಾಡಿರುವ ಸಾಧ್ಯತೆ ಇದೆ. ಬೈಕ್ ಒಂದು ಕಡೆ ಮೃತದೇಹ ಇನ್ನೊಂದು ಕಡೆ ಬಿದ್ದಿದೆ. ಧನ್ಯ ಕುಮಾರ್ ಸ್ಟೈಲ್ ಜಿಮ್ ನಲ್ಲಿ ಜಿಮ್ ಟ್ರೈನರ್ ಆಗಿದ್ದ ಎಂಬ ಮಾಹಿತಿ ಇದ್ದು ಆರೋಪಿಗಳ ಪತ್ತೇಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ
ಧನ್ಯಕುಮಾರ್ ದಾವಣಗೆರೆ ನಗರದ ಸ್ಟೈಲ್ ಜಿಮ್ ಕೋಚ್ ಅಲ್ಲದೇ ತರಗಾರ ಕೆಲಸ ಮಾಡಿ ಒಂದಿಷ್ಟು ಹಣ ಸಂಪಾದಿಸುತ್ತಿದ್ದ. ಮನೆಯ ಹಿರಿಯ ಮಗನಾಗಿ ಜವಬ್ಧಾರಿ ನಿಭಾಯಿಸುತ್ತಿದ್ದ ಧನ್ಯಕುಮಾರ್ ವೃದ್ಧ ತಂದೆತಾಯಿಗಳು ಓರ್ವ ತಮ್ಮ ಇಬ್ಬರು ಅಕ್ಕತಂಗಿ ಇದ್ದು ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.ಕೊಲೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಊಟಕ್ಕೆಂದು ಹೋದ ಧನ್ಯಕುಮಾರ್ ಹೆಣವಾಗಿದ್ದು ಹರಪನಹಳ್ಳಿ ಪಟ್ಟಣದ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಿನ್ನೆ ಉಚ್ಚಂಗಿದುರ್ಗಕ್ಕೆ ಊಟಕ್ಕೆ ಹೋಗಿದ್ದವರು ಯಾರು..ಯಾವ ಕಾರಣಕ್ಕಾಗಿ ಕೊಲೆ ಆಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಸಧ್ಯ ಮೂವರನ್ನು ವಶಕ್ಕೆ ಪಡೆಯಲಾಗಿದ್ದು ಕೊಲೆಗೆ ಅಸಲಿ ಕಾರಣದ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
ಪೊಲೀಸರ ಬಿಗಿ ಕ್ರಮ
ಇತ್ತಿಚೆಗೆ ದಾವಣಗೆರೆ ನಗರದಲ್ಲಿ ರೌಡಿಸಂ ಚಟುವಟಿಕೆಗಳು ಹೆಚ್ಚಾಗಿವೆ.ಕಳೆದ ಎರಡು ದಿನಗಳ ಹಿಂದೆ ಮನೆಯೊಂದಕ್ಕೆ ನುಗ್ಗಿ ಕುಟುಂಬವೊಂದಕ್ಕೆ ಧಮಕಿ ಹಾಕಿದ ಆರೋಪದ ಮೇಲೆ ಗಾರಮಂಜ ಎಂಬ ರೌಡಿಶೀಟರ್ ನನ್ನು ಬಂಧಿಸಲಾಗಿದೆ. ಅದರ ಬೆನ್ನಲ್ಲೇ ಪುಡಿ ರೌಡಿಗಳು ಇದೀಗ ಬರ್ಬರವಾಗಿ ಧನ್ಯಕುಮಾರ್ ನನ್ನು ಕೊಲೆ ಮಾಡಿದ್ದಾರೆ.ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವಂತಹ ಮಾನಸಿಕತೆಯನ್ನು ಹೊಂದಿರುವವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ.