
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಆ.17): ಬೆಂಗಳೂರಿನಲ್ಲಿ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆಗೆ ಶರಣಾದ ವಿಜಯಪುರ ಮೂಲದ ಶಿವಾನಂದ ಭಜಂತ್ರಿ ಮೃತ ದೇಹವನ್ನ ಆತನ ಹುಟ್ಟೂರಿಗೆ ತರಲಾಗಿದೆ. ಮೃತ ದೇಹವನ್ನ ಬಸವನ ಬಾಗೇವಾಡಿ ಪಟ್ಟಣಕ್ಕೆ ತಂದ ಕುಟುಬಸ್ಥರು ಹಾಗೂ ಭಜಂತ್ರಿ ಸಮುದಾಯದ ಮುಖಂಡರು ಮೃತದೇಹವನ್ನ ಬಸವೇಶ್ವರ ವೃತ್ತದಲ್ಲಿಟ್ಟು ಪ್ರತಿಭಟನೆಗೆ ಮುಂದಾದ್ರು. ಈ ವೇಳೆ ಸೇರಿದ ನೂರಾರು ಜನರು ಯುವಕನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಶಿವಾನಂದ ಆತ್ಮಹತ್ಯೆಗೆ ಶರಣಾಗುವ ಮುನ್ನ ವಡವಡಗಿ ಗ್ರಾಮದ ಕೆಲವರ ಹೆಸ್ರನ್ನ ಹೇಳಿದ್ದಾನೆ. ಶಿವಾನಂದ ಸಾವಿನ ಹೇಳಿಕೆಯಲ್ಲಿರುವ ವ್ಯಕ್ತಿಗಳನ್ನ ಪೊಲೀಸರು ಬಂಧಿಸಿ ನ್ಯಾಯ ಕೊಡಬೇಕೆಂದು ಸಂಬಂಧಿಕರು ಆಗ್ರಹಿಸಿದರು. ಮೊನ್ನೆಯಷ್ಟೆ ಇದೆ ಶಿವಾನಂದ ಭಜಂತ್ರಿ ವಿರುದ್ಧ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬೆನ್ನಲ್ಲೆ ಶಿವಾನಂದ ಬೆಂಗಳೂರಿನ ಮಂತ್ರಿಮಾಲ್ ಬಳಿಕ ಗಜಾನನ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಇಡೀ ಘಟನೆ ಹಿನ್ನೆಲೆ: ಅಷ್ಟಕ್ಕು ಗಜಾನನ ಆತ್ಮಹತ್ಯೆ ಮಾಡಿಕೊಳ್ಳೊದರ ಹಿಂದೆ ಒಂದು ಕಾರಣವಿತ್ತು. ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ಸವರ್ಣಿಯ ಕುಟುಂಬದ ಅಪ್ರಾಪ್ತೆಯನ್ನ ಪ್ರೀತಿಸಿ ಶಿವಾನಂದ ಕಳೆದ ತಿಂಗಳು ಮದುವೆಯಾಗಿದ್ದ. ಬಳಿಕ ಬೆಂಗಳೂರಿಗೆ ಸೆಟ್ಲ್ ಆಗೋದಕ್ಕಾಗಿ ರೂಂ ನೋಡಲು ಬೆಂಗಳೂರಿಗೆ ಹೋಗಿದ್ದ. ಈ ವೇಳೆ ಗ್ರಾಮದಲ್ಲಿ ಅಪ್ರಾಪ್ತೆ ಕುಟುಂಬರು, ಸಂಬಂಧಿಕರಿಗೆ ಪ್ರೇಮ ವಿವಾಹ ವಿಚಾರಗೊತ್ತಾಗಿತ್ತು. ಬಳಿಕ ಕುಟುಂಬಸ್ಥರು ಶಿವಾನಂದ ಭಜಂತ್ರಿಗೆ ತಿಳಿಹೇಳಿ ಹುಡುಗಿಯ ಜೊತೆಗಿನ ಸಹವಾಸ ಬಿಡುವಂತೆ ತಾಕೀತು ಮಾಡಿದ್ದರಂತೆ.. ಆದ್ರೆ ಇದಕ್ಕೆ ಶಿವಾನಂದ ಒಪ್ಪಿರಲಿಲ್ಲ ಎನ್ನಲಾಗಿದೆ.
740 ಕೋಟಿ ವೆಚ್ಚದಲ್ಲಿ ವಿ.ವಿ.ಸಾಗರ ನೀರಾವರಿ ಯೋಜನೆ ಆಧುನೀಕರಣಕ್ಕೆ ಚಿಂತನೆ: ಸಚಿವ ಡಿ.ಸುಧಾಕರ್
ದಾಖಲಾಯ್ತು ಪೋಕ್ಸೋ ಪ್ರಕರಣ: ಅತ್ತ ಅಪ್ರಾಪ್ತೆ ಕುಟುಂಬಸ್ಥರು ಶಿವಾನಂದ ಕೇಳದೆ ಇದ್ದಾಗ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಕಾನೂನು ಬಾಹಿರ ಮದುವೆ ಮಾಡಿಕೊಂಡಿರುವ ಬಗ್ಗೆ ಹಾಗೂ ಕೆಲ ಬೆತ್ತಲೆ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾನೆ ಎಂದು ಬಸವನ ಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಮೂರು ದಿನಗಳ ಹಿಂದಷ್ಟೆ ಶಿವಾನಂದ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಶಿವಾನಂದ ಬೆಂಗಳುರಿನ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಪ್ರಾಪ್ತೆಯ ಖಾಸಗಿ ಪೋಟೊ, ವಿಡಿಯೋ ವೈರಲ್: ಯಾವಾಗ ತನ್ನ ಮೇಲೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಯ್ತೋ ಶಿವಾನಂದ ಕಂಗಾಲಾಗಿದ್ದಾನೆ. ಇತ್ತ ಪೊಲೀಸರು ಬಂಧಿಸಿ ಜೈಲಿಗೆ ಹಾಕ್ತಾರೆ ಎಂದು ಆತಂಕಕ್ಕೊಳಗಾಗಿದ್ದಾನೆ. ಅಲ್ಲದೆ ಆತ್ಮಹತ್ಯೆ ನಿರ್ಧಾರ ಮಾಡಿದ ಶಿವಾನಂದ ತನ್ನ ಬಳಿ ಇದ್ದ ಅಪ್ರಾಪ್ತೆಯ ಬೆತ್ತಲೆ ಪೋಟೊ, ವಿಡಿಯೋಗಳನ್ನ ತನ್ನದೆ ಇನ್‌ಸ್ಟಾಗ್ರಾಂ ಐಡಿಗೆ ಹಾಕಿದ್ದಾನೆ. ಜೊತೆಗೆ ಇಬ್ಬರು ಜೊತೆಗಿರುವ ಖಾಸಗಿ ವಿಡಿಯೋ, ಪೋಟೊಗಳನ್ನು ಹಾಕಿದ್ದಾನೆ. ಮದುವೆಯಾದ ಪೋಟೊ-ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾನೆ. ಬಳಿಕ ನೇಣಿಗೆ ಶರಣಾಗಿದ್ದಾನೆ..
3 ತಿಂಗಳಲ್ಲೇ ಸಿದ್ದು ಸರ್ಕಾರದ ವರ್ಚಸ್ಸು ಕಡಿಮೆ: ಶಾಸಕ ವಿಜಯೇಂದ್ರ ಟೀಕೆ
ಆತ್ಮಹತ್ಯೆಗೂ ಮುನ್ನ ವಿಡಿಯೋ ಹೇಳಿಕೆ: ಇನ್ನು ಶಿವಾನಂದ ಭಜಂತ್ರಿ ತಾನು ಸಾಯೋದಕ್ಕು ಮೊದಲು ಏನಾಗಿತ್ತು ಎನ್ನುವ ಬಗ್ಗೆ ವಿಡಿಯೋ ಮಾಡಿದ್ದಾನೆ. ತನಗೆ ಅಪ್ರಾಪ್ತೆಯ ಕುಟುಂಬಸ್ಥರು ಬೆದರಿಕೆ ಹಾಕ್ತಿರುವ ಬಗ್ಗೆ ಹೇಳಿಕೊಂಡಿದ್ದಾನೆ. ತಾನು ಸಾವನ್ನಪ್ಪಿದ್ರೆ ಇಂಥವರೆ ಕಾರಣ, ಇಂಥವರದ್ದೆ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ತಿರೋದಾಗಿ ಹೇಳಿಕೊಂಡಿದ್ದಾನೆ. ಇನ್ನು ತಾನು ಮದುಯಾಗಿರೋ ಹುಡುಗಿಯು ನನ್ನ ವಿರುದ್ಧ ಮಾತನಾಡ್ತಿದ್ದಾಳೆ. ತಿರುಗಿ ಬಿದ್ದಿದ್ದಾಳೆ ಎಂದು ಸಹ ಹೇಳಿಕೊಂಡಿದ್ದಾನೆ. ಈ ವಿಡಿಯೋಗಳನ್ನು ತನ್ನ ಇನ್‌ಸ್ಟಾಗ್ರಾಂ ಗೆ ಹಾಕಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ