ಇನ್ಫೋಪಾರ್ಕ್ ಮೂಲದ ಪ್ರಮುಖ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಆರೋಪಿಯು 'ಬುರ್ಖಾ' ಧರಿಸಿ ಮಹಿಳೆಯರ ವಾಶ್‌ರೂಮ್‌ಗೆ ಪ್ರವೇಶಿಸಿ ತನ್ನ ಮೊಬೈಲ್ ಅನ್ನು ಅಲ್ಲಿ ಇರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಚ್ಚಿ (ಆಗಸ್ಟ್ 17, 2023): ಕೇರಳದ ಜನಪ್ರಿಯ ಮಾಲ್‌ನಲ್ಲಿ ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ಗೆ ನುಗ್ಗಿ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಆರೋಪದ ಮೇಲೆ 23 ವರ್ಷದ ಐಟಿ ವೃತ್ತಿಪರನನ್ನು ಬಂಧಿಸಲಾಗಿದೆ. ಬಿ.ಟೆಕ್ ಪದವೀಧರನಾದ ಈ ವ್ಯಕ್ತಿಯನ್ನು ಅದೇ ದಿನ ಐಪಿಸಿಯ ಸೆಕ್ಷನ್ 354 (ಸಿ) ಮತ್ತು 419 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 ಇ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಆರೋಪಿಯನ್ನು ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಲಮಸ್ಸೆರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲುಲು ಮಾಲ್‌ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಇನ್ಫೋಪಾರ್ಕ್ ಮೂಲದ ಪ್ರಮುಖ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಆರೋಪಿಯು 'ಬುರ್ಖಾ' ಧರಿಸಿ ಮಹಿಳೆಯರ ವಾಶ್‌ರೂಮ್‌ಗೆ ಪ್ರವೇಶಿಸಿ ತನ್ನ ಮೊಬೈಲ್ ಅನ್ನು ಅಲ್ಲಿ ಇರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ವಾಹನ ಸವಾರರೇ ಎಚ್ಚರ: ಪೊಲೀಸ್ ಪೋರ್ಟಲ್ ಬಳಸ್ಕೊಂಡು ಕಾರು, ಬೈಕ್ ಮಾಲೀಕರಿಂದ ಹಣ ಸುಲಿಗೆ ಮಾಡ್ತಿದ್ದ ಐನಾತಿ ಕಳ್ಳ!
ಅವನು ತನ್ನ ಫೋನ್ ಅನ್ನು ಸಣ್ಣ ರಟ್ಟಿನ ಪೆಟ್ಟಿಗೆಯಲ್ಲಿ ಇರಿಸಿ, ಆ ಹೋಲ್‌ನಲ್ಲಿ ದೃಶ್ಯಗಳನ್ನು ರೆಕಾರ್ಡ್ ಮಾಡಲು ಮೊಬೈಲ್ ಕ್ಯಾಮರಾವನ್ನು ಆ ಜಾಗದಲ್ಲಿ ಸರಿಯಾಗಿ ಇಟ್ಟಿದ್ದ. ಹಾಗೂ, ಅದನ್ನು ವಾಶ್ ರೂಂನ ಬಾಗಿಲಿಗೆ ಅಂಟಿಸಿದನು ಎಂದು ಪೊಲೀಸರು ಹೇಳಿದ್ದಾರೆ. ಅದರ ನಂತರ, ಶಂಕಿತ ವ್ಯಕ್ತಿ ಅಲ್ಲಿಂದ ಹೊರಬಂದು ವಾಶ್ ರೂಂನ ಮುಖ್ಯ ಬಾಗಿಲಿನ ಮುಂದೆ ನಿಂತಿದ್ದಾನೆ ಎಂದೂ ತಿಳಿದುಬಂದಿದೆ.
ಈ ಹಿನ್ನೆಲೆ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ಮಾಲ್‌ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಿಚಾರಣೆ ವೇಳೆ ಆತ ಮಹಿಳೆಯ ವೇಷ ಧರಿಸಿದ್ದು, ವಾಶ್‌ರೂಮ್‌ನಲ್ಲಿದ್ದ ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆರೋಪಿಯ ಬುರ್ಖಾ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಂಡು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಚಾಕೊಲೇಟ್ ಕೊಡ್ಸೋದಾಗಿ ಹೇಳಿ 6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ!
ಇನ್ನೊಂದೆಡೆ, ಆರೋಪಿ ಈ ಹಿಂದೆ ಬೇರೆಲ್ಲಿಯಾದರೂ ಇಂತಹ ಕೃತ್ಯ ಎಸಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದೂ ಅಧಿಕಾರಿ ತಿಳಿಸಿದರು.
ಇದನ್ನೂ ಓದಿ: ಮಲತಾಯಿ ಅಂದ್ರೆ ಹಿಂಗೇನಾ? ಬಾಲಕನಿಗೆ ಶಾಲೆಗೆ ಹೋಗದಂತೆ ತಡೆದು ತಂದೆಯಿಂದ ದೇಹದ ಹಲವೆಡೆ ಬರೆ ಹಾಕಿಸಿದ ಪಾಪಿ!