ನಾಗರಬೆಟ್ಟ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಎಕ್ಸ್‌ಪರ್ಟ್ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ.
ವಿಜಯಪುರ (ನ.20): ನಾಗರಬೆಟ್ಟ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಎಕ್ಸ್‌ಪರ್ಟ್ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು, ಅಜಯಕುಮಾರ್ ವಿರುಪಾಕ್ಷಿ ನುಚ್ಚಿ (18) ಮೃತಪಟ್ಟ ವಿದ್ಯಾರ್ಥಿ. ವಿಜಯಪುರ ನಗರದ ಇಬ್ರಾಹಿಮಪುರ ಮೂಲದ ವಿದ್ಯಾರ್ಥಿ ನಾಗರಬೆಟ್ಟದ ಆಕ್ಸ್‌ಫರ್ಡ್ ವಸತಿ ಶಾಲೆಯಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳೆದ ಮೂರು ದಿನದ ಹಿಂದೆ ಬಾಲಕನಿಗೆ ಅದೆ ಶಾಲೆಯ ಮುಖ್ಯಸ್ಥರ ಮಗನಿಗೆ ಜಗಳ ನಡೆದಿತ್ತು ಎನ್ನುವ ಮಾಹಿತಿ ಲಭ್ಯವಾಗಿದ್ದು, ಈಗ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಇನ್ನು ವಸತಿ ಶಾಲೆಯ ಕಟ್ಟಡದಲ್ಲಿಯೇ ಬಾಲಕನ ಶವ ಸಿಕ್ಕಿದ್ದು, ಹಲವು ಅನುಮಾನ ಹುಟ್ಟಿಸಿದೆ. ಇನ್ನು ವಸತಿ ಶಾಲೆಯ ಮಕ್ಕಳಲ್ಲಿ ಭಯ ಆವರಿಸಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಟೋದಲ್ಲಿ ಕುಕ್ಕರ್ ಸ್ಫೋಟ: ಮಂಗಳೂರಿನಲ್ಲಿ ನಡೆದಿತ್ತಾ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು?
ದೊಡ್ಡಘಟ್ಟದಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕ ಸಾವು: ಬೀರೂರು ಸಮೀಪದ ಬೀರೂರು ಹೋಬಳಿ ದೊಡ್ಡಘಟ್ಟಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. ದೊಡ್ಡಘಟ್ಟದ ಕೆ.ರಾಜಪ್ಪ ಅವರ 15 ವರ್ಷದ ಪುತ್ರ ಶರತ್ ಮೃತಪಟ್ಟದುರ್ದೈವಿ. ಜೋಡಿತಿಮ್ಮಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ. ಶರತ್ ಗುರುವಾರ ತಡರಾತ್ರಿ ನೀರು ಹಾಯಿಸಲು ತೆರಳಿದ್ದ ಚಿಕ್ಕಪ್ಪ ಸೋಮಶೇಖರ್ ಜೊತೆ ಅಡಕೆ ತೋಟಕ್ಕೆ ಹೋಗಿದ್ದ.
ಜಮೀನಿನಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಯು ಕಟ್ಟಾಗಿ ಸ್ಟಾಟರ್ ಬಾಕ್ಸ್ ಮೇಲೆ ಬಿದ್ದಿತ್ತು. ರಾತ್ರಿ ಕತ್ತಲಾಗಿದ್ದ ಪರಿಣಾಮ ಮೋಟಾರ್ ಪಂಪಿನ ಸ್ಟಾಟರ್ ಬಾಕ್ಸ್ ಬೀಗ ತೆಗೆಯಲು ಬಂದಿದ್ದ ಶರತ್‌ಗೆ ವಿದ್ಯುತ್ ತಗುಲಿದೆ. ಆಗ ಅಲ್ಲಿಯೇ ಬಿದ್ದು ಹೊರಳಾಡಿದ್ದಾನೆ. ಚಿಕ್ಕಪ್ಪ ಸೋಮಶೇಖರ್ ಮನೆಯವರಿಗೆ ವಿಷಯ ತಿಳಿಸಿದ್ದು, ಬೀರೂರು ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಶರತ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮೃತನ ತಂದೆ ಡಿ.ಕೆ.ರಾಜಪ್ಪ ನೀಡಿದ ದೂರಿನ ಹಿನ್ನಲೆ ಬೀರೂರು ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಪರಿಹಾರ ಭರವಸೆ: ಮೃತ ಬಾಲಕನ ತೋಟಕ್ಕೆ ಸ್ಥಳ ಮಹಜರು ಮಾಡಿದ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ನಂದೀಶ್ ಸ್ಥಳ ಪರಿಶೀಲನೆ ನಡೆಸಿದರು. ಅನಂತರ ಇಲಾಖೆ ಜೀವಾ ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು, ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ದೊರಕುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಗ್ರಾಮೀಣ ಪ್ರದೇಶಗಳಿಗೆ ರಾತ್ರಿ ಸಮಯದಲ್ಲಿ ತ್ರೀಫೇಸ್ ವಿದ್ಯುತ್ ಪೂರೈಕೆ ಸೌಲಭ್ಯ ನೀಡಲಾಗುವುದು.
ಚಿಲುಮೆ ಸಂಸ್ಥೆಯನ್ನು ನಾನು ಬಳಸಿಲ್ಲ: ಸಚಿವ ಅಶ್ವತ್ಥ್ ನಾರಾಯಣ
ಈ ಸಂದರ್ಭದಲ್ಲಿ ಕೆಲವು ವಿದ್ಯುತ್ ತಂತಿಗಳು ಇದರ ಒತ್ತಡ ತಾ ಳಲಾರದೇ ಸಹ ತಂತಿಗಳು ಕಟ್ಟಾಗುವ ಸಾಧ್ಯತೆ ಹೆಚ್ಚು. ಇದು ಸಹ ಅದೇ ರೀತಿ ಆಗಿರಬಹುದು ಎಂದರು. ಈ ಹಿಂದೆಯೇ ತೋಟದಲ್ಲಿರುವ ಮಾರ್ಗದ ವಿದ್ಯುತ್ ತಂತಿ ಇದೇ ರೀತಿ ಕಟ್ಟಾಗಿ ಬಿದ್ದಿತ್ತು. ಮೆಸ್ಕಾಂಗೆ ದೂರು ನೀಡಿದ ನಂತರ ಇದಕ್ಕೆ ಮತ್ತೊಂದು ತಂತಿ ಸೇರಿಸಿ, ತೋಟಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಈ ಅವಘಡದ ಹಿಂದೆ ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.