ತಂದೆ​- ಮಲತಾಯಿ ಕೊಲೆಗೆ ಸಂಚು: ವಕೀಲನ ಬಂಧನ

By Kannadaprabha NewsFirst Published Nov 20, 2022, 9:49 AM IST
Highlights

ತನ್ನ ತಂದೆ, ಮಲತಾಯಿಯನ್ನು ಕೊಲೆ ಮಾಡಿಸಲು ಹಂತಕರನ್ನು ಕರೆಯಿಸಿ ಸಂಚು ಹಾಕಿದ್ದ ವಕೀಲನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಮಳವಳ್ಳಿಯಲ್ಲಿ ನಡೆದಿರುವ ಇನ್ನೊಂದು ಘಟನೆಯಲ್ಲಿ ಆಸ್ತಿ ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಆತನ ಅಣ್ಣನ ಮಗನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ದಡದಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗಂಗಾವತಿ (ನ.20) : ತನ್ನ ತಂದೆ, ಮಲತಾಯಿಯನ್ನು ಕೊಲೆ ಮಾಡಿಸಲು ಹಂತಕರನ್ನು ಕರೆಯಿಸಿ ಸಂಚು ಹಾಕಿದ್ದ ವಕೀಲನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ವಕೀಲ ಯೋಗೇಶ್ವರ ದೇಸಾಯಿ ಬಂಧಿತ ಆರೋಪಿ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಇಲ್ಲಿನ ಜಯನಗರದಲ್ಲಿರುವ ತಂದೆ ಮನೋಹರ ದೇಸಾಯಿ ಮತ್ತು ಮಲತಾಯಿ ಕರ್ಣಂ ಕಲಾವತಿ ಅವರನ್ನು ಕೊಲೆ ಮಾಡಲು ಹಂತಕರನ್ನು ಕರೆಸಿದ್ದ ಎನ್ನಲಾಗಿದೆ.

ಪ್ರಕರಣ ಬಯಲು:

ಬೆಂಗಳೂರು ಯಶವಂತಪುರದಲ್ಲಿದ್ದ ವಕೀಲ ಯೋಗೇಶ್ವರ ಮೂಲತಃ ಕೊಪ್ಪಳ ತಾಲೂಕಿನ ಕವಲೂರು ಗ್ರಾಮದವ. ಅವರಿಗೆ ತಂದೆಯ ಜತೆ ಆಸ್ತಿ ವಿವಾದ ಇತ್ತು. ಗಂಗಾವತಿಯಲ್ಲಿ ಇರುವ ತನ್ನ ತಂದೆ ಮನೋಹರ ದೇಸಾಯಿ ಮತ್ತು ತಾಯಿ ಕರ್ಣಂ ಕಲಾವತಿ ಅವರ ಕೊಲೆ ಮಾಡಿಸುವ ಉದ್ದೇಶದಿಂದ ಬೆಂಗಳೂರಿನಿಂದ ಫಯಾಜ್‌ ಮತ್ತು ಇನ್ನೋರ್ವ ವ್ಯಕ್ತಿಯನ್ನು ಕರೆದುಕೊಂಡು ಬಂದು ಕೊಲೆಗೆ ಸಂಚು ರೂಪಿಸಿದ್ದಾನೆ. ಶುಕ್ರವಾರ ರಾತ್ರಿ ಜಯನಗರದ ಯೋಗೇಶ್ವರ ತಂದೆ ನಿವಾಸಕ್ಕೆ ಆಗಮಿಸಿ ಸಮಯ ಕಾದಿದ್ದಾನೆ. ಅಲ್ಲದೇ ಹಂತಕರಿಗೆ .3 ಲಕ್ಷ ನೀಡುವುದಾಗಿ ಹೇಳಿ .1.50 ಲಕ್ಷ ತೋರಿಸಿದ್ದಾನೆ. ಇದಕ್ಕೆ ಒಪ್ಪದ ಹಂತಕರು ಯೋಗೇಶ್ವರನಿಗೇ ಚೂರಿ ಇಳಿದು ಕಾರಿನಿಂದ ಕೆಳಗೆ ನೂಕಿ ಪರಾರಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಗಸ್ತು ಮಾಡುತ್ತಿದ್ದ ಪೋಲಿಸರು ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ವಕೀಲ ಯೋಗೇಶ್ವರ ತನ್ನ ಪುರಾಣ ಬಾಯಿ ಬಿಟ್ಟಿದ್ದಾರೆ. ಈಗ ಯೋಗೇಶ್ವರನನ್ನು ಬಂಧಿಸಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು: ಬಸ್‌ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ವಶಕ್ಕೆ

ಆಸ್ತಿ ವಿವಾದ ಕೊಲೆಯಲ್ಲಿ ಅಂತ್ಯ

ಮಳವಳ್ಳಿ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಆತನ ಅಣ್ಣನ ಮಗನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ದಡದಪುರ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಶಿವಲಿಂಗಯ್ಯ (55) ಕೊಲೆಯಾದ ವ್ಯಕ್ತಿ. ಕೊಲೆ ಪ್ರಕರಣ ಸಂಬಂಧ ಶಿವಲಿಂಗಯ್ಯ ಅವರ ಅಣ್ಣನ ಮಗ ಶಿವು (22) ಎಂಬಾತನನ್ನು ಗ್ರಾಮಾಂತರ ಪೊಲೀಸರು ಬಂಧಿಸಲಾಗಿದೆ. ಶುಕ್ರವಾರ ರಾತ್ರಿ ಮನೆಯ ಜಗುಲಿಯ ಮೇಲೆ ಮಲಗಿದ್ದ ಶಿವಲಿಂಗಯ್ಯ ಅವರ ತಲೆಗೆ ದೊಣ್ಣೆಯಿಂದ ಹೊಡೆದಿದ್ದು, ಈ ವೇಳೆ ಶಿವಲಿಂಗಯ್ಯ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕೊಲೆಗೆ ಆಸ್ತಿ ವಿವಾದವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಎಂ.ಜಗದೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!