ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿದವರ ಮೇಲೆಯೇ ಮಹಿಳೆ ಸುಳ್ಳು ರೇಪ್‌ ಕೇಸ್!

By Suvarna News  |  First Published Nov 9, 2021, 5:40 PM IST

*ಮಹಿಳೆ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿದ್ದ ವ್ಯಕ್ತಿ
*ದಿನಸಿ, ಇತರ ಅಗತ್ಯ ವಸ್ತುಗಳಿಗೆ  ಹಣ ಸಹಾಯ
*ಈಗ ರೂ. 10,000 ನೀಡದಿದ್ದಕ್ಕೆ ರೇಪ್‌ ಕೇಸ್!


ಹೈದರಾಬಾದ್‌ (ನ. 9)  :  ಹತ್ತು ಸಾವಿರ ಹಣ ನೀಡಲಿಲ್ಲವೆಂದು ವ್ಯಕ್ತಿಯೋರ್ವನ ಮೇಲೆ ಸುಳ್ಳು ರೇಪ್‌ ಕೇಸ್‌ ಹಾಕಿರುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ. ನವೆಂಬರ್ 5 ಮಹಿಳೆಯೊಬ್ಬರು  ಹೈದರಾಬಾದ್‌ನ ಗೋಲ್ಕೊಂಡಾ (Golconda) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂವರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ (Rape) ಮತ್ತು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.  ಮಹಿಳೆ ನೀಡಿದ ದೂರಿನ ಆಧಾರ ಪೋಲಿಸರು ತನಿಖೆ ಆರಂಭಿಸಿದ್ದರು. ಆದರೆ ತನಿಖೆ ನಡೆಸುತ್ತಿದ್ದ ಪೋಲಿಸರಿಗೆ ಅಚ್ಚರಿಯೊಂದು ಕಾದಿತ್ತು. ತನಿಖೆ ವಿಚಾರಣೆ (Investigation) ವೇಳೆ ಮಹಿಳೆ ತಾನು ಸುಳ್ಳು ಆರೋಪ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ವೈಯುಕ್ತಿಕ ಕಾರಣಗಳಿಂದಾಗಿ ಈ ಮಹಿಳೆ ಈ ರೀತಿ ವರ್ತಿಸಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ

ಹೈದರಾಬಾದ್‌ನ್ ಗೋಲ್ಕೊಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು ಮಹಿಳೆ  ಭಾನುವಾರ, ನವೆಂಬರ್ 7, 2021 ರಂದು ತಮ್ಮ ಹೇಳಿಕೆಗಳು ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. 30 ವರ್ಷದ ಮಹಿಳೆ ಸಲೇಹ್ (Saleh) ನಗರದ ನಿವಾಸಿಯಾಗಿದ್ದು, ವಿಚ್ಛೇದಿತರಾಗಿದ್ದಾರೆ (Divorcee). ಆಕೆ ತನ್ನ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದು, ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 

Tap to resize

Latest Videos

Crime News; ಹೆತ್ತ ತಾಯಿ ಮೇಲೆ ಎರಗಿದ ಕಾಮುಕ... ಎಲ್ಲವೂ ಡ್ರಗ್ಸ್ ಘಾಟು!

"ಶುಕ್ರವಾರ ಆಕೆ ಗೋಲ್ಕೊಂಡಾ ಪೊಲೀಸ್ ಠಾಣೆಗೆ ದೂರು (Compliant) ನೀಡಿದ್ದು, ಮೂವರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಮತ್ತು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಅಪರಾಧಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. "ತನಿಖೆಯ ಸಂದರ್ಭದಲ್ಲಿ, ದೂರುದಾರ ಮಹಿಳೆ ತಾವು ಮಾಡಿರುವ ಆರೋಪಗಳು ಸುಳ್ಳು ಎಂದು ಒಪ್ಪಿಕೊಂಡರು. ಸುಳ್ಳು ಹೇಳಿಕೆಗಳ ಹಿಂದೆ ವೈಯಕ್ತಿಕ ಕಾರಣವಿದೆ" ಎಂದು ಎಸಿಪಿ (ACP) ಆರ್‌ಜಿ ಶಿವ  ಮಾರುತಿ (RG Siva Maruthi) ಖಚಿತಪಡಿಸಿದ್ದಾರೆ. 

ರೂ. 10,000 ನೀಡದಿದ್ದಕ್ಕೆ ರೇಪ್‌ ಕೇಸ್!

ಹೆಚ್ಚುವರಿ ಡಿಸಿಪಿ (DCP) ಇಕ್ಬಾಲ್ ಸಿದ್ದಿಕಿ (Iqbal Siddiqui) ಮಾತನಾಡಿ, ''ಮಹಿಳೆ ತನ್ನ ಪರಿಚಯಸ್ಥರೊಬ್ಬರ ಬಳಿ ಸಾಲ (Loan) ಪಡೆಯುತ್ತಿದ್ದಳು. ಸಾಲದಾತನು ಈ ಹಿಂದೆ ಆಕೆ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ ದಿನಸಿ ಮತ್ತು ಇತರ ಅಗತ್ಯ ವಸ್ತುಗಳಿಗೆ ಹಣವನ್ನು ನೀಡಿದ್ದನು. ಅದೇ ರೀತಿ  10,000 ರೂ. ಬೇಕು ಎಂದು ಮಹಿಳೆ ಮತ್ತೆ ಕೇಳಿದ್ದಾಳೆ. ಅದರೆ ಈ ಬಾರಿ ಹಣ ನೀಡಲು ಆತ ನಿರಾಕರಿಸಿದ್ದ ಎಂದು ತಿಳಿದುಬಂದಿದೆ. ಕೋಪಗೊಂಡ ಮಹಿಳೆ, ಹೇಗಾದರೂ ಮಾಡಿ ಅವನಿಂದ ಹಣವನ್ನು ಪಡೆಯುವ ಸಲುವಾಗಿ, ಅವನನ್ನು ಬೆದರಿಸಲು ಯೋಜನೆಯೊಂದನ್ನು ರೂಪಿಸಿದ್ದಾಳೆ. ಈ ಮೂಲಕ  ಸಾಲದ ರೂಪದಲ್ಲಾದರೂ ಹಣ ಪಡೆಯಬೇಕೆಂದು ಅಂದುಕೊಂಡಿದ್ದಾಳೆ. ಆದರೆ ವ್ಯಕ್ತಿ ನಿರಾಕರಿಸಿದಾಗ ಈ ರೀತಿ ಕೃತ್ಯಕ್ಕೆ ಮಹಿಳೆ ಕೈ ಹಾಕಿದ್ದಾಳೆ. ಮೂವರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಮಹಿಳೆ ಪೋಲಿಸ್‌ ಠಾಣೆಯ ಮೆಟ್ಟಿಲೆರಿದ್ದಾಳೆ.

ಮಗಳಿಗೆ ಅತ್ಯಾಚಾರ ಬೆದರಿಕೆ: ವಿಕೃತ ಮನಸ್ಸುಗಳಿಗೆ ಅನುಷ್ಕಾ ಶರ್ಮಾ ಹೇಳಿದ್ದಿಷ್ಟು!

ಮಹಿಳೆ ಶುಕ್ರವಾರ ದೂರು ದಾಖಲಿಸಿದ್ದು ಪೋಲಿಸ್‌ ತನಿಖೆ ವೇಳೆ  ತನ್ನ ಆರೋಪ ಸುಳ್ಳು ಎಂದು ರವಿವಾರ ತಪ್ಪೊಪ್ಪಿಕೊಂಡಿದ್ದಾಳೆ. ಪೋಲಿಸರು ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ. ಹಾಗೂ ಆಕೆಯ ಸುಳ್ಳು ಹೇಳಿಕೆಗಳಿಗೆ ಶಿಕ್ಷೆಯನ್ನು (punishment) ಜಾರಿಗೊಳಿಸಲು ನಾವು ನ್ಯಾಯಾಲಯದಿಂದ (Court) ಕಾನೂನು  ಅಭಿಪ್ರಾಯಕ್ಕಾಗಿ (Opinion) ಕಾಯುತ್ತಿದ್ದೇವೆ ಎಂದು ಹೆಚ್ಚುವರಿ ಡಿಸಿಪಿ ಇಕ್ಬಾಲ್ ಹೇಳಿದ್ದಾರೆ.

click me!