* ದಿಢೀರ್ ಕಾರ್ಯಾಚರಣೆ
* ಪಶ್ಚಿಮ ವಿಭಾಗದ ರೌಡಿಗಳ ಮನೆ ಮೇಲೆ ಮುಂಜಾನೆಯೇ ದಾಳಿ ನಡೆಸಿದ ಪೊಲೀಸರು
* ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಸೂಚನೆ
ಬೆಂಗಳೂರು(ನ.08): ಸೊಂಪಾದ ನಿದ್ದೆಯಲ್ಲಿದ್ದ ರೌಡಿಶೀಟರ್‌ಗಳಿಗೆ(Rowdysheeters) ಪಶ್ಚಿಮ ವಿಭಾಗದ ಪೊಲೀಸರು ಭಾನುವಾರ ಮುಂಜಾನೆ ಚಳಿ ಬಿಡಿಸಿದ್ದಾರೆ. 150 ರೌಡಿಶೀಟರ್‌ಗಳು ಹಾಗೂ ಡ್ರಗ್ ಪೆಡ್ಲರ್‌ಗಳು(Drug Peddler) ಸೇರಿದಂತೆ 180 ಮನೆಗಳ ಮೇಲೆ ದಾಳಿ ನಡೆಸಿ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಎಂ.ಪಾಟೀಲ್ ಅವರ ನೇತೃತ್ವದಲ್ಲಿ ಸುಮಾರು ಐನೂರಕ್ಕೂ ಅಧಿಕ ಪೊಲೀಸರು(Police) ಮುಂಜಾನೆ ಐದು ಗಂಟೆಯಿಂದ 10 ಗಂಟೆವರೆಗೆ ದಾಳಿ(Raid) ಮಾಡಿದ್ದಾರೆ. ಕಾಟನ್ಪೇಟೆ, ಚಾಮರಾಜಪೇಟೆ, ಜೆ.ಜೆ.ನಗರ, ಬ್ಯಾಟರಾಯನಪುರ, ಕೆ.ಪಿ.ಅಗ್ರಹಾರ, ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾದರಾಯನಪುರ, ಅಂಜನಪ್ಪ ಗಾರ್ಡನ್, ಜಾಲಿ ಮೊಹಲ್ಲ, ನೇತಾಜಿ ನಗರ, ಗೋಪಾಲಪುರ, ಶಾಮಣ್ಣ ಗಾರ್ಡನ್, ಬಾಪೂಜಿನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಲೆಸಿರುವ 150 ಮಂದಿ ರೌಡಿಶೀಟರ್‌ಗಳು ಹಾಗೂ 10 ಮಂದಿ ಡ್ರಗ್(Drugs) ಪೆಡ್ಲರ್‌ಗಳಿಗೆ ಸೇರಿದ 180 ಮನೆಗಳ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಿದ್ದಾರೆ.
undefined
Crime News; ಬ್ರೇಕ್ ಅಪ್ ಮಾಡಿಕೊಂಡು ಬೇರೆ ಮದುವೆಯಾದವಳ ಹತ್ಯೆ!
ಪ್ರಮುಖ ರೌಡಿ ಶೀಟರ್ಗಳಾದ ಲಿಯೋ, ಕಾರ್ತಿಕ್, ಹಿದಾಯಾತ್, ವಾಸೀಂ ಪಾಷಾ, ಡಿಕ್ರಿ ಸಲೀಂ, ಆಯೂಬ್ ಖಾನ್, ವಿನೋದ್, ವೆಂಕಟೇಶ್, ವಿಜಯ್, ಸತೀಶ್ ಮನೆಗಳ ಮೇಲೆ ದಾಳಿ ನಡೆಸಿ, ಬಿಸಿ ಮುಟ್ಟಿಸಿದ್ದಾರೆ.
ಠಾಣೆಗೆ ಕರೆಸಿ ವಿಚಾರಣೆ:
ಒಟ್ಟು 150 ರೌಡಿ ಶೀಟರ್‌ಗಳ ಪೈಕಿ 121 ರೌಡಿಶೀಟರ್‌ಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಕೂಲಂಕಷವಾಗಿ ವಿಚಾರಣೆ ನಡೆಸಿದ್ದಾರೆ. ಪ್ರಸ್ತುತ ಅವರ ಕೆಲಸ-ಕಾರ್ಯಗಳು, ವ್ಯವಹಾರಗಳು, ಆದಾಯದ ಮೂಲ ಸೇರಿದಂತೆ ಎಲ್ಲದರ ಮಾಹಿತಿ ಸಂಗ್ರಹಿಸಿದ್ದಾರೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಅಂತೆಯೆ ವಿಳಾಸ, ಮೊಬೈಲ್ ಸಂಖ್ಯೆ, ಮನೆ ಸದಸ್ಯರ ಮೊಬೈಲ್ ಸಂಖ್ಯೆ ಸೇರಿದಂತೆ ಅವರ ಸಹಚರರ ಮಾಹಿತಿ ಪಡೆದು ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ. ದಾಳಿ ವೇಳೆ ಮನೆಯಿಂದ ನಾಪತ್ತೆಯಾಗಿದ್ದ 29 ಮಂದಿ ರೌಡಿಶೀಟರ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ನೋಟಿಸ್(Notice) ಜಾರಿಗೊಳಿಸಿ ವಿಚಾರಣೆಗೆ ಹಾಜರುವಂತೆ ಪೊಲೀಸರು ಸೂಚಿಸಿದ್ದಾರೆ.
ವೈನ್ ಸ್ಟೋರ್ ವಿರುದ್ಧ ಪ್ರಕರಣ:
ಇನ್ನು ಕೆ.ಆರ್.ಮಾರುಕಟ್ಟೆಠಾಣೆ ವ್ಯಾಪ್ತಿಯಲ್ಲಿ ಮುಂಜಾನೆಯೇ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪ ಮೇಲೆ ಮೂರು ವೈನ್ ಸ್ಟೋರ್‌ಗಳ ಮೇಲೆ ಪೊಲಿಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ನಿಗದಿತ ಸಮಯಕ್ಕೂ ಮುಂಚೆಯೇ ಮದ್ಯ(Alcohol) ಮಾರಾಟ ಮಾಡದಂತೆ ವೈನ್ ಸ್ಟೋರ್ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಸಿ ವಂಚನೆ
ಸಾರ್ವಜನಿಕರಿಗೆ ಲಾಭ ಆಸೆ ತೋರಿಸಿ ಕ್ರಿಪ್ಟೋ ಕರೆನ್ಸಿಯಲ್ಲಿ (Cryptocurrency) ಹಣ ಹೂಡಿಸಿ ಬಳಿಕ ವಂಚಿಸುತ್ತಿದ್ದ ಆರೋಪದಡಿ ಪೋಮೋಎಕ್ಸ್ ಕಂಪನಿಯ ಮೂವರನ್ನು ಕೇಂದ್ರ ಅಪರಾಧ ವಿಭಾಗ(CCB) ಪೊಲೀಸರು ಬಂಧಿಸಿದ್ದಾರೆ.
Crime News; ಹೆತ್ತ ತಾಯಿ ಮೇಲೆ ಎರಗಿದ ಕಾಮುಕ... ಎಲ್ಲವೂ ಡ್ರಗ್ಸ್ ಘಾಟು!
ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ರಾಘವೇಂದ್ರ, ನಾಗರಾಜು ಮತ್ತು ಶಿವಮೂರ್ತಿ ಬಂಧಿತರು. ಆರೋಪಿಗಳು ತಮ್ಮ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಶೀಘ್ರದಲ್ಲೇ ಶೇ.20ರಷ್ಟುಲಾಭ ಗಳಿಸಬಹುದು. ಚೈನ್‌ಲಿಂಕ್ ಮಾದರಿಯಲ್ಲಿ ಜನರನ್ನು ಕರೆತಂದು ಹಣ ಹೂಡಿಕೆ ಮಾಡಿಸಿದರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಸಾರ್ವಜನಿಕರನ್ನು ಪುಸಲಾಯಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಯಲಹಂಕ ಖಾಸಗಿ ಹೋಟೆಲ್‌ವೊಂದರಲ್ಲಿ ಪೋಮೋಎಕ್ಸ್ ಕಂಪನಿಯ ವ್ಯವಹಾರದ ಬಗ್ಗೆ ಪ್ರಚಾರ ಮಾಡಿ, ಸಾರ್ವಜನಿಕರನ್ನು ಸೆಳೆಯಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೋಮೋಎಕ್ಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಕ್ರಿಪ್ಟೋ ಕರೆನ್ಸಿ ಖರೀದಿಸಿ ನಂತರ ಬೇರೆ ವ್ಯಕ್ತಿಗಳನ್ನು ಕರೆತಂದು ಅವರಿಂದ ಕಂಪನಿಗೆ ಚೈನ್‌ಲಿಂಕ್ ಆಧಾರದಲ್ಲಿ ಎಡ-ಬಲದಲ್ಲಿ ಹಣ ಹೂಡಿಸಿದರೆ ಹೆಚ್ಚಿನ ಲಾಭ ಗಳಿಸಬಹುದು. ಕನಿಷ್ಠ 100 ಡಾಲರ್‌ನಿಂದ ಗರಿಷ್ಠ 10 ಸಾವಿರ ಡಾಲರ್‌ವರೆಗೂ ಹೂಡಿಕೆಗೆ ಪ್ಯಾಕೇಜ್ ರೂಪಿಸಿದ್ದರು. ಉದಾಹರಣೆಗೆ 100 ಡಾಲರ್ ಹೂಡಿಕೆ ಮಾಡಿಸಿದರೆ ಮಾಸಿಕ ಶೇ.10ರಷ್ಟುಲಾಭ ಬರಲಿದೆ. ಹತ್ತು ಸಾವಿರ ಡಾಲರ್ ಹೂಡಿಕೆ ಮಾಡಿಸಿದರೆ ಮಾಸಿಕ ಶೇ.15ರಷ್ಟುಮಾಸಿಕ ಲಾಭ ಗಳಿಸಬಹುದು ಎಂದು ಸಾರ್ವಜನಿಕರನ್ನು ನಂಬಿಸಿ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪೋಮೋಎಕ್ಸ್ ಕಂಪನಿಯು ಅಮೆರಿಕ, ಸಿಂಗಾಪುರ, ಚೀನಾ ದೇಶಗಳಲ್ಲಿ ಕಚೇರಿ ಹೊಂದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳು ಈ ಹಿಂದೆ ಇಎಸ್‌ಪಿಎನ್ ಗ್ಲೋಬಲ್ (ಈ-ಓರಾಕಲ್) ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿದ್ದು, ಚೈನ್‌ಲಿಂಕ್ ಮಾದರಿಯಲ್ಲಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿ ಬಳಿಕ ವಂಚಿಸಿರುವ ಬಗ್ಗೆ ಮಾಹಿತಿ ಬಂದಿದೆ. ಹೆಚ್ಚಿನ ತನಿಖೆ ಬಳಿಕ ಈ ವಂಚನೆ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.