ತಾಯಿ ನಿಂದಿಸಿದ ಹಿರಿಯ ವಿದ್ಯಾರ್ಥಿಯನ್ನು ಚಾಕು ಇರಿದು ಕೊಂದ 10 ತರಗತಿ ವಿದ್ಯಾರ್ಥಿ!

By Suvarna NewsFirst Published Oct 2, 2021, 8:15 PM IST
Highlights
  • 11ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಕೊಂದ 10 ತರಗತಿ ವಿದ್ಯಾರ್ಥಿ
  • ತಾಯಿಯನ್ನು ನಿಂದಿಸಿದ ಹಿರಿಯ ವಿದ್ಯಾರ್ಥಿ ವಿರುದ್ಧ ಕಿರಿಯ ವಿದ್ಯಾರ್ಥಿ ಆಕ್ರೋಶ
  • ಕ್ಷಮೆ ಕೇಳಲು ಸೂಚಿಸಿದ್ದ ಕಿರಿಯ ವಿದ್ಯಾರ್ಥಿ, ಸೊಪ್ಪು ಹಾಕದ 11ನೇ ತರಗತಿ ವಿದ್ಯಾರ್ಥಿ

ನವದೆಹಲಿ(ಅ.02):  ರಾಷ್ಟ್ರ ರಾಜಧಾನಿ ದೆಹಲಿ ಶಾಲೆಯಲ್ಲಿ ನಡೆದ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ತಾಯಿಯನ್ನು ನಿಂದಿಸಿದ ಕಾರಣಕ್ಕೆ ಹಿರಿಯ ವಿದ್ಯಾರ್ಥಿಯನ್ನು ಇರಿದು ಕೊಂದ ಘಟನೆ ನಡೆದಿದೆ. ಒಕ್ಲಾ ವಲಯದ ಸರ್ಕಾರಿ ಶಾಲೆಯಲ್ಲಿ ನಡೆದ ಈ ಘಟನೆ  ಇದೀಗ ವಿದ್ಯಾರ್ಥಿಗಳ ಎರಡು ಕುಟುಂಬದ ನಡುವಿನ ವೈಮನಸ್ಸಿಗೂ ಕಾರಣವಾಗಿದೆ.

ಕಾಲೇಜಿಗೆ ಚಕ್ಕರ್, ಲವ್ವಿ ಡವ್ವಿಯಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳು: ವಿಡಿಯೋ ವೈರಲ್

11ನೇ ತರಗತಿ ವಿದ್ಯಾರ್ಥಿ 10ನೇ ತರಗತಿ ವಿದ್ಯಾರ್ಥಿಯ ತಾಯಿಯನ್ನು ನಿಂದಿಸಿದ್ದಾನೆ. ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ 10ನೇ ತರಗತಿ ವಿದ್ಯಾರ್ಥಿ ತಾಯಿ ಕುರಿತು ಒಂದು ಪದ ಆಡದಂತೆ ಎಚ್ಚರಿಸಿದ್ದಾನೆ. ಆದರೆ ಈ ಮಾತು ಕೇಳದ ಹಿರಿಯ ವಿದ್ಯಾರ್ಥಿ ಮತ್ತೆ ನಿಂದಿಸಿದ್ದಾನೆ. 

ತಿಂದುಂಡು ಮನೆಯಲ್ಲಿರಲು ಸಾಧ್ಯವಿಲ್ಲ' ತಾಲೀಬಾನಿಗಳಿಗೆ ದಿಟ್ಟೆಯ ಠಕ್ಕರ್

ಆಕ್ರೋಶಗೊಂಡ ಕಿರಿಯ ವಿದ್ಯಾರ್ಥಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾನೆ. ಆದರೆ ಇದಕ್ಕೂ ಸೊಪ್ಪು ಹಾಕದ ಹಿರಿಯ ವಿದ್ಯಾರ್ಥಿ ದರ್ಪ ಮುಂದುವರಿಸಿದ್ದಾನೆ. ಈ ಘಟನೆ ಕಿರಿಯ ವಿದ್ಯಾರ್ಥಿ ಮೇಲೆ ತೀವ್ರ ಪರಿಣಾಮ ಬೀರಿದೆ. ಘಟನೆ ನಡೆದ ಕೆಲ ದಿನಗಳ ಬಳಿಕ ಶಾಲೆಯ ಆವರಣದ ಹೊರಭಾಗದಲ್ಲಿ ಹಿರಿಯ ವಿದ್ಯಾರ್ಥಿಯನ್ನು ಅಡ್ಡಹಾಕಿದ ಕಿರಿಯ ವಿದ್ಯಾರ್ಥಿ ಬ್ಯಾಗ್‌ನಿಂಗ ಚಾಕು ತೆಗೆದು ಚುಚ್ಚಿದ್ದಾನೆ.

ಧಾರವಾಡ;  ವೇತನವೋ..ಯಾತನೆಯೋ.. 80 ರೂ. ಸ್ಕಾಲರ್‌ಶಿಪ್ ಬಂತು

ಹಿರಿಯ ವಿದ್ಯಾರ್ಥಿ ಮೇಲಿದ್ದ ಆಕ್ರೋಶಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇಬ್ಬರು ಶಾಲಾ ಸಮವಸ್ತ್ರದಲ್ಲಿರುವಾಗಲೇ ಈ ಘಟನೆ ನಡೆದಿದೆ. ರಕ್ತದ ಮಡುವಿನಲ್ಲಿದ್ದ ವಿದ್ಯಾರ್ಥಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲೇ ವಿದ್ಯಾರ್ಥಿ ಪ್ರಾಣ ಪಕ್ಷಿ ಹಾರಿಹೋಗಿದೆ. 

ಮಲ್ಪೆ ಬೀಚಲ್ಲಿ ಮುಳುಗುತ್ತಿದ್ದ 3 ವಿದ್ಯಾರ್ಥಿಗಳ ರಕ್ಷಣೆ

ಕಿರಿಯ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಶಾಲೆಯಲ್ಲಿರುವ ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಆದರೆ ವಿದ್ಯಾರ್ಥಿಗಳಿಬ್ಬರ ಜಗಳದಿಂದ ಇದೀಗ ಎರಡು ಕುಟುಂಬಗಳ ನಡುವೆ ವೈಮನಸ್ಸು ಶುರುವಾಗಿದೆ. 

ದೆಹಲಿ  ಶಾಲೆ:
ದೆಹಲಿ ಸರ್ಕಾರಿ ಶಾಲೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಹಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೆಹಲಿ ಸರ್ಕಾರದ ಸರ್ಕಾರಿ ಶಾಲೆ ಅಭಿವೃದ್ಧಿ ಯೋಜನೆಯಡಿ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ ದೆಹಲಿ ಶಾಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ಶಾಲಾ ವಿದ್ಯಾರ್ಥಿಯೊರ್ವ ಶಿಕ್ಷಕನನ್ನೇ ಇರಿದು ಕೊಂದಿದ್ದ. ಹಾಜರಾತಿ ಕಡಿಮೆ ಇದ್ದ ಕಾರಣ ಶಿಕ್ಷಕ 12ನೇ ತರಗತಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಇದರಿಂದ ಕೋಪಗೊಂಡಿದ್ದ ವಿದ್ಯಾರ್ಥಿ ತರಗತಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಿಕ್ಷಕ ಮೇಲೆ ದಾಳಿ ಮಾಡಿದ್ದಾನೆ. ಚಾಕುವಿನಿಂದ ಇರಿದು ಕೊಂದಿದ್ದಾನೆ. ಈ ಘಟನೆ ಬಳಿಕ ಇದೀಗ ಶಾಲಾ ವಿದ್ಯಾರ್ಥಿಯೇ ಹಿರಿಯ ವಿದ್ಯಾರ್ಥಿಯನ್ನು ಇರಿದು ಕೊಂದಿದ್ದಾರೆ.

click me!