
ರಾಜ್‌ಕೋಟ್ (ಜು. 10) ತನ್ನ ಬಾಯ್ ಫ್ರೆಂಡ್ ನನ್ನು ಕೆಲಸದಿಂದ ತೆಗೆದು ಹಾಕಿದ ಸಿಟ್ಟಿಗೆ ಕೋಪಗೊಂಡ ಗೆಳತಿ ಫ್ಯಾಕ್ಟರಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾಳೆ.
ಗುಜರಾತ್‌ನ ಗಾಂಧಿಧಾಮದಿಂದ ವರದಿಯಾಗಿದ್ದು ಆರೋಪಿಯನ್ನು 24 ವರ್ಷದ ಯುವತಿ ಮಾಯಾಬೆನ್ ಪರ್ಮಾರ್ ಎಂದು ಗುರುತಿಸಲಾಗಿದೆ. ಗಣೇಶನಗರ ಪ್ರದೇಶದ ನಿವಾಸಿ ಮಾಯಾಬೆನ್ ಪರ್ಮಾರ್ ಎಂದು ಜುಲೈ 5 ರಂದು ಸಂಜೆ 5: 30 ರ ಸುಮಾರಿಗೆ, ಬಳಸಿದ ಬಟ್ಟೆಗಳನ್ನು ಮರುಬಳಕೆ ಮಾಡುವ ಕಂಪನಿ ಕೆನಮ್ ಇಂಟರ್ನ್ಯಾಷನಲ್ (ಪಿ) ಲಿಮಿಟೆಡ್‌ನ ಕಾರ್ಖಾನೆಗೆ ಬೆಂಕಿ ಇಡುವ ಯತ್ನ ಮಾಡಿದ್ದಾಳೆ. ಬಟ್ಟೆಯಿಂದ ಸಿದ್ಧಮಾಡಿಕೊಂಡಿದ್ದ ಸೂಡಿಯನ್ನು ಬಳಸಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ.
ಮನೆ ಬಾಡಿಗೆ ಬೇಡ ...ಕಿಸ್ ಕೊಟ್ಟರೆ ಸಾಕು
ಆಕೆ ಬೆಂಕಿ ಹಚ್ಚಿದನ್ನು ಕಂಪನಿಯ ನೌಕರನೊಬ್ಬ ಗಮನಿಸಿದ್ದಾನೆ. ತಕ್ಷಣ ಅದನ್ನು ಆರಿಸುವ ಕೆಲಸ ಮಾಡಿದ್ದು ಸಿಸಿಟಿವಿ ದೃಶ್ಯಾವಳಿ ಆಧರಿಸಿದಾಗ ಯುವತಿ ಸಿಕ್ಕಿಬಿದ್ದಿದ್ದಾಳೆ.
ಯುವತಿಯನ್ನು ಹಿಡಿದು ಮ್ಯಾನೇಜ್ ಮೆಂಟ್ ಈ ಬಗ್ಗೆ ಪ್ರಶ್ನೆ ಮಾಡಿದಾಗ ಆಕೆ ತನ್ನ ಗೆಳೆಯನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದೆ ಎಂಬ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಪೊಲೀಸರು ಯುವತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ