
ಜೈಪುರ(ಜು.10): ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಐದು ತಿಂಗಳ ಬಾಲಕಿ ಅಮ್ಮನ ಎಡವಟ್ಟಿನಿಂದ ಸಾವನ್ನಪ್ಪಿದ್ದಾಳೆ. ತಾಯಿ ಮಗುವಿನ ಹೊಟ್ಟೆಗೆ ಸಂಬಂಧಿಸಿದ ಕೆಲವು ಕಾಯಿಲೆ ಗುಣಪಡಿಸುವ ಸಲುವಾಗಿ ಬಿಸಿ ಕಬ್ಬಿಣ ತಾಗಿಸಿದ್ದರು. ಇದರ ನಂತರ ಮಗು ಸಾವನ್ನಪ್ಪಿದೆ.
ಪೊಲೀಸರು ಈ ವಿಷಯದ ಬಗ್ಗೆ ತಿಳಿದುಕೊಂಡ ನಂತರ, ಮರಣೋತ್ತರ ಪರೀಕ್ಷೆಗಾಗಿ ಶಿಶುವಿನ ದೇಹವನ್ನು ಪಡೆದಿದ್ದು ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ರಮೇಶ್ ಬಗರಿಯಾ ಮತ್ತು ಅವರ ಪತ್ನಿ ಲಹರಿ ಜಿಲ್ಲೆಯ ಮಂಡಲ್ ಬ್ಲಾಕ್‌ನ ಲುಹರಿಯಾ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ, ದಂಪತಿಗಳ ಶಿಶು ಮಗಳು ಲೀಲಾ ಅನಾರೋಗ್ಯದಿಂದ ಬಳಲುತ್ತಿದ್ದರು. ಅವಳು ಸರಿಯಾಗಿ ಹಾಲು ಕುಡಿಯದೆ ಯಾವಾಗಲೂ ಅಳುತ್ತಿದ್ದಳು.
ಬಾಡಿಗೆ ಬೇಡ..ಕಿಸ್ ಕೊಟ್ರೆ ಸಾಕು.. 50 ವರ್ಷದ ಚಪಲ ಚೆನ್ನಿಗರಾಯ ಮನೆ ಮಾಲೀಕ!
ಹುಡುಗಿಗೆ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆ ಇದೆ ಎಂದು ಲಹರಿ ನಂಬಿದ್ದರು. ತನ್ನ ಮಗಳ ಚಿಕಿತ್ಸೆಗಾಗಿ ಸ್ಥಳೀಯ ತಾಂತ್ರಿಕನನ್ನು ಸಂಪರ್ಕಿಸಿದ್ದಾರೆ. ಆದರೆ ಅವನು ಹಳ್ಳಿಯಿಂದ ಹೊರಗೆ ಹೋಗಿದ್ದನು. ಇದನ್ನು ಅನುಸರಿಸಿ, ಲಹರಿ ಗುರುವಾರ ತನ್ನ ಪುಟ್ಟ ಮಗಳಿಗೆ ಬಿಸಿ ಕಬ್ಬಿಣ ತಾಗಿಸಿದ್ದಾರೆ.
ಮಗುವಿನ ಸ್ಥಿತಿ ಹದಗೆಟ್ಟಿತು. ಆಕೆಯನ್ನು ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಆಕೆಗೆ ವೆಂಟಿಲೇಟರ್ ಬೆಂಬಲ ನೀಡಲಾಯಿತು. ಏಳು ಗಂಟೆಗಳ ನಂತರ, ಮಗು ಮೃತಪಟ್ಟಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ