ನನ್ನ ಮಗನನ್ನು ಬಲಿಪಶು ಮಾಡಲಾಗ್ತಿದೆ: ಡ್ರಗ್‌ ಕಿಂಗ್‌ಪಿನ್‌ ಖನ್ನಾ ತಂದೆ

Kannadaprabha News   | Asianet News
Published : Sep 13, 2020, 07:45 AM ISTUpdated : Sep 13, 2020, 07:46 AM IST
ನನ್ನ ಮಗನನ್ನು ಬಲಿಪಶು ಮಾಡಲಾಗ್ತಿದೆ: ಡ್ರಗ್‌ ಕಿಂಗ್‌ಪಿನ್‌ ಖನ್ನಾ ತಂದೆ

ಸಾರಾಂಶ

ಪುತ್ರ ವೀರೇನ್‌ ಖನ್ನಾ ಅನುಮತಿ ಮೇರೆಗೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಮದ್ಯ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಮಾದಕವಸ್ತು ಪೂರೈಕೆ ಮಾಡಿಲ್ಲ| ಹಲವು ವರ್ಷಗಳಿಂದ ಕಾರ್ಯಕ್ರಮಗಳ ಆಯೋಜನೆಯಲ್ಲಿ ವೀರೇನ್‌ ತೊಡಗಿದ್ದಾನೆ| ರವಿಶಂಕರ್‌ಗೂ ನನ್ನ ಮಗನಿಗೂ ಪರಿಚಯವಿಲ್ಲ| ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ| 

ಬೆಂಗಳೂರು(ಸೆ.13): ನನ್ನ ಪುತ್ರ ವೀರೇನ್‌ ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಯಲ್ಲಿ ಮದ್ಯ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಮಾದಕ ವಸ್ತು ಪೂರೈಕೆ ಮಾಡಿಲ್ಲ. ಪ್ರಕರಣದಲ್ಲಿ ಆತನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ವೀರೇನ್‌ ತಂದೆ ಶ್ರೀರಾಮ್‌ ಖನ್ನಾ ಹೇಳಿದ್ದಾರೆ.

ಸಿಸಿಬಿ ಕಚೇರಿ ಬಳಿ ಮಾತನಾಡಿದ ಅವರು, ಪುತ್ರ ವೀರೇನ್‌ ಖನ್ನಾ ಅನುಮತಿ ಮೇರೆಗೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಮದ್ಯ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಮಾದಕವಸ್ತು ಪೂರೈಕೆ ಮಾಡಿಲ್ಲ. ಹಲವು ವರ್ಷಗಳಿಂದ ಕಾರ್ಯಕ್ರಮಗಳ ಆಯೋಜನೆಯಲ್ಲಿ ವೀರೇನ್‌ ತೊಡಗಿದ್ದಾನೆ. ರವಿಶಂಕರ್‌ಗೂ ನನ್ನ ಮಗನಿಗೂ ಪರಿಚಯವಿಲ್ಲ. ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ. ಪೊಲೀಸರ ತನಿಖೆಗೆ ಸಹಕಾರ ನೀಡುತ್ತೇವೆ. ಹಣಕಾಸು ಸಂಬಂಧಿಸಿದಂತೆ ಎಲ್ಲ ರೀತಿಯ ದಾಖಲೆಗಳನ್ನು ಒದಗಿಸುತ್ತೇವೆ ಎಂದು ತಿಳಿಸಿದರು. 

'ಆಳ್ವ ಫಾರಂ ಹೌಸ್‌ನಲ್ಲಿ ನಾನು, ರಾಗಿಣಿ ಡ್ರಗ್ಸ್‌ ಸೇವಿಸಿದ್ದೇವೆ'

ದೀಪಾವಳಿ, ಹೋಳಿ ಹಬ್ಬ, ಹೊಸ ವರ್ಷಕ್ಕೆ ಆಯೋಜಿಸುವ ಪಾರ್ಟಿಗಳಲ್ಲಿ ವಿವಿಧ ರೀತಿಯ ವಸ್ತ್ರಗಳನ್ನು ಧರಿಸುತ್ತಾನೆ. ಪೊಲೀಸರ ದಾಳಿ ವೇಳೆ ಮನೆಯಲ್ಲಿ ಸಿಕ್ಕಿರುವ ಪೊಲೀಸರ ಸಮವಸ್ತ್ರ ಕೂಡ ಪಾರ್ಟಿ ಬಟ್ಟೆಗಳು ಎಂದು ವಿವರಣೆ ನೀಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾನೂನು ತಾರತಮ್ಯ ಉಲ್ಲೇಖಿಸಿ ಪೋಸ್ಟ್; 'ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ' ಎಂದ ವಿಜಯಲಕ್ಷ್ಮೀ ದರ್ಶನ್
ಕೇರ್ ಟೇಕರ್ ನಂಬಿದ ಅಪ್ಪ ಮಗಳಿಗೆ ಆಗಬಾರದು ಆಗೋಯ್ತು: ನಂಬೋದು ಯಾರನ್ನು?