
ಬೆಂಗಳೂರು(ಸೆ.13): ನಟಿ ರಾಗಿಣಿ ಸ್ನೇಹವಾದ ಬಳಿಕ ನನ್ನ ಪತ್ನಿ ದೂರವಾದಳು. ರಾಗಿಣಿಯನ್ನು ಸುತ್ತಾಡಿಸಲು ಬಿಎಂಡಬ್ಲ್ಯೂ ಕಾರಿನಲ್ಲೇ ಹೋಗುತ್ತಿದ್ದೆ. ನಾವು ಆದಿತ್ಯ ಆಳ್ವ ಫಾರಂ ಹೌಸ್ ಸೇರಿದಂತೆ ಹಲವು ಕಡೆ ಡ್ರಗ್ಸ್ ಸೇವಿಸಿದ್ದೇವೆ...!
ಇವು ಸಿಸಿಬಿ ವಿಚಾರಣೆ ವೇಳೆ ರಾಗಿಣಿ ಸ್ನೇಹಿತ ಸಾರಿಗೆ ಇಲಾಖೆ ನೌಕರ ರವಿಶಂಕರ್ ನೀಡಿರುವ ಹೇಳಿಕೆ. ರಾಗಿಣಿ ಸ್ನೇಹ, ಡ್ರಗ್ಸ್ ಪಾರ್ಟಿಗಳು ಹಾಗೂ ಸ್ನೇಹಿತರು ಹೀಗೆ ಹಲವು ವಿಚಾರಗಳ ಬಗ್ಗೆ ರವಿಶಂಕರ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಕೂಲಿಂಗ್ ಗ್ಲಾಸ್‌ನಲ್ಲಿ ಕೂಲ್ ಆಗಿ ಕಾಣಿಸುವ ನಟಿಮಣಿಯರು!
2013ರಲ್ಲಿ ನಮ್ಮ ಕುಟುಂಬದ ಸ್ನೇಹಿತ, ಸಿನಿಮಾ ನಿರ್ಮಾಪಕ ಶಿವಪ್ರಕಾಶ್ ಮೂಲಕ ರಾಗಿಣಿ ಪರಿಚಯವಾಯಿತು. ರಾಗಿಣಿ ಬಳಿ ಶಿವಪ್ರಕಾಶ ವಿವಾಹ ಪ್ರಸ್ತಾಪ ಮಾಡಿದ್ದ. ಆದರೆ ಸಮಯ ಕೇಳಿದ ಆಕೆ, ನಂತರ ಶಿವಪ್ರಕಾಶ್‌ನಿಂದ ದೂರವಾಗಿದ್ದಳು. ನಂತರ ರಾಗಿಣಿ ಮತ್ತು ನನ್ನ ನಡುವೆ ಗಾಢ ಸ್ನೇಹವಾಯಿತು. ಇದೇ ವಿಚಾರ ತಿಳಿದು ನನ್ನ ಪತ್ನಿ ಗಲಾಟೆ ಮಾಡಿದಳು.
ರಾಗಿಣಿಯೇ ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಹೇಳಿದ್ದಳು. ಕೊನೆಗೆ ನಾನು ವಿವಾಹ ವಿಚ್ಛೇದನ ಪಡೆದೆ. ನನ್ನ ಸ್ನೇಹಿತ ಕ್ಲಬ್ ಮಾಲೀಕ ಶ್ರೇಯಸ್ ಪಾಟೀಲ್‌ನ ಬಿಎಂಡಬ್ಲ್ಯೂ ಕಾರಿನಲ್ಲಿ ರಾಗಿಣಿಯನ್ನು ಹೋಟೆಲ್‌ಗೆ ಕರೆದೊಯ್ಯುತ್ತಿದ್ದೆ ಎಂದು ರವಿಶಂಕರ್ ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ