
ರಾಯಚೂರು(ಸೆ.12): ಪರಮಾತ್ಮ ಮೇಲಿಂದ ಭೂಮಿಗೆ ಒಗೆದ ಕಣ್ಣು ಒಡೆದು ಬಿತ್ತಿದಾಗ ಅದು ಗಾಂಜಾ ಬೀಜವಾಗಿದೆ ಎಂದು ಗಾಂಜಾ ಆರೋಪಿ ಪರಸಪ್ಪ(68) ಪೊಲೀಸರಿಗೆ ನೀತಿ ಕಥೆ ಹೇಳಿರುವ ಪ್ರಸಂಗ ಜಿಲ್ಲೆಯ ಲಿಂಗಸುಗೂರಿನ ಗುಜಲೋರದೊಡ್ಡಿಯಲ್ಲಿ ಶುಕ್ರವಾರ ನಡೆದಿದೆ.
ತಮ್ಮ ಹೊಲದಲ್ಲಿ ತೊಗರಿ ಜೊತೆಗೆ ಗಾಂಜಾ ಬೆಳೆದಿದ್ದ ಪರಸಪ್ಪ ಮತ್ತು ಅಮರೇಶನನ್ನು ಬಂಧಿಸಿ, 16 ಸಾವಿರ ಮೌಲ್ಯದ 9 ಕೆಜಿ ಗಾಂಜಾ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದ ವೇಳೆ ಆರೋಪಿ ಪರಸಪ್ಪ, ಪರಮಾತ್ಮನ ಒಂದು ಕಣ್ಣು ಭೂಮಿ ಮೇಲೆ ಬಿದ್ದಿದ್ದು, ಅದನ್ನು ಹಿಂದಿನ ಶರಣರು ಒಡೆದು ಭೂಮಿಯಲ್ಲಿ ಬಿತ್ತಿದಾಗ ಗಾಂಜಾ ಗಿಡವಾಗಿ ಬೆಳೆದಿದೆ.
ಕಲಬುರಗಿ ಗಾಂಜಾಕೋರ ಬಿಜೆಪಿ ಕಾರ್ಯಕರ್ತ: ಕಾಂಗ್ರೆಸ್
ಹಿಂದೆ ಇದ್ದ ಐವರು ಶರಣರು ಕೂಡಿಕೊಂಡು ಬಿತ್ತಿದ ಬೀಜವೇ ಗಾಂಜಾ ಗಿಡವಾಗಿದೆ. ಮಾನವ ಜನ್ಮ ಪಂಚಭವತಿ, ನಾ ಪಂಚಭವತಿ ಇದನ್ನು ಅವರೇ ಹೇಳಿದ್ದಾರೆ. ಹೀಗೆ ತನಗೆ ತಿಳಿದಿರುವ ಕಥೆಯನ್ನು ಹೇಳಿರುವ ಆರೋಪಿ ಮಾತುಗಳಿಗೆ ಪೊಲೀಸರು ಹೂಂಗುಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ