ವರ್ತೂರು ಸಂತೋಷ್‌ ಹುಲಿ ಉಗುರು ಪೆಂಡೆಂಟ್‌ನಿಂದ ಚಿನ್ನದಂಗಡಿ ಮಾಲೀಕನಿಗೂ ಸಂಕಷ್ಟ!

By Sathish Kumar KHFirst Published Oct 24, 2023, 11:10 AM IST
Highlights

ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಹುಲಿ ಉಗುರು ಧರಿಸಿ ಬಂಧನವಾದ ಬೆನ್ನಲ್ಲೇ ಆತನಿಗೆ ಹುಲಿ ಉಗುರಿನ ಪೆಂಡೆಂಟ್‌ ಮಾಡಿಕೊಟ್ಟ ಚಿನ್ನದಂಗಡಿ ಮಾಲೀಕರಿಗೂ ಸಂಕಷ್ಟ ಎದುರಾಗಿದೆ.

ಬೆಂಗಳೂರು (ಅ.24): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಪ್ರಮುಖ ರಿಯಲ್‌ ಎಸ್ಟೇಟ್‌ ಪ್ರದೇಶವಾದ ವರ್ತೂರು ಗ್ರಾಮದ ಹಳ್ಳಿಕಾರ್‌ ಹಸುಗಳನ್ನು ಸಾಕಣೆ ಮಾಡುವ ಸಂತೋಷ್ ಅವರಿಗೆ ಹುಲಿ ಉಗುರಿನ ಪೆಂಡೆಂಟ್‌ ಇರುವ ಚಿನ್ನದ ಸರ ಹಾಗೂ ಲಾಕೆಟ್ ಮಾಡಿಕೊಟ್ಟ ಚಿನ್ನದಂಗಡಿ ಮಾಲೀಕರಿಗೂ ಈಗ ಸಂಕಷ್ಟ ಎದದುರಾಗಿದೆ.

ವರ್ತೂರು ಸಂತೋಷ್‌ಗೆ ಸ್ಥಳೀಯವಾಗಿ ಭಾರಿ ಬೆಂಬಲವಿದೆ. ಆದರೆ, ತಾನು ಹಳ್ಳಿಕಾರ್‌ ಎತ್ತುಗಳನ್ನು ಸಾಕಣೆ ಮಾಡಿ ಅವುಗಳ ಸಂರಕ್ಷಣೆ ಉದ್ದೇಶದಿಂದ ರಾಷ್ಟ್ರಮಟ್ಟದ ಹಳ್ಳಿಕಾರ್‌ ಎತ್ತುಗಳ ಓಟದ ಸ್ಪರ್ಧೆಯನ್ನು ಏರ್ಪಡಿಸಿ ಪ್ರಸಿದ್ಧಿಯಾಗಿದ್ದನು. ಹುಲಿ ಉಗುರು ಧರಿಸುವುದು ಅಪರಾಧವೆಂದು ಗೊತ್ತಿಲ್ಲದೇ ತಾನು ಹುಲಿಯ ಉಗುರನ್ನು ಧರಿಸಿದ್ದ ವರ್ತೂರು ಸಂತೋಷ್‌ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಈಗ ಜೈಲಿನಲ್ಲಿ ಮುದ್ದೆಯನ್ನೈ ಮುರಿಯುತ್ತಿದ್ದಾನೆ. ಆದರೆ, ಈಗ ಆತನಿಗೆ ಚಿನ್ನದ ಸರದೊಂದಿಗೆ ಹುಲಿ ಉಗುರಿನ ಲಾಕೆಟ್‌ ಮಾಡಿಕೊಟ್ಟಿದ್ದ ಚಿನ್ನದಂಗಡಿ ಮಾಲೀಕರಿಗೂ ಈಗ ಸಂಕಷ್ಟ ಎದುರಾಗಿದೆ.

3 ವರ್ಷಗಳ ಹಿಂದೆ ಹುಲಿ ಉಗುರು ಖರೀದಿಸಿದ ಬಗ್ಗೆ ಬಿಗ್‌ಬಾಸ್‌ ವರ್ತೂರ್‌ ಸಂತೋಷ್‌ ತಪ್ಪೊಪ್ಪಿಗೆ

ಹಳ್ಳಿಕಾರ್‌ ತಳಿಯ ಎತ್ತುಗಳನ್ನು ಸಾಕಣೆ ಮಾಡುತ್ತಾ ರೈತನಾಗಿದ್ದರೂ ಐಷಾರಾಮಿ ಜೀವನ ಹಾಗೂ ಶೋಕಿ ಮಾಡುತ್ತಾ ಓಡಾಡುತ್ತಿದ್ದನು. ನಾಡಿನ ಹಳ್ಳಿಕಾರ್‌ ತಳಿಯ ಗೋ ಸಂರಕ್ಷಣೆಯಲ್ಲಿ ತೊಡಗಿದ್ದರಿಂದ ಆತನನ್ನು ಕಲರ್ಸ್‌ ಕನ್ನಡದ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿಯೂ ಅವಕಾಶ ಪಡೆದುಕೊಂಡಿದ್ದನು. ಆದರೆ, ತನಗೆ ಹುಲಿ ಉಗುರು ಧರಿಸುವುದು ಅಪರಾಧವೆಂಬುದು ಗೊತ್ತಿಲ್ಲದೇ ಹುಲಿಯ ಉಗುರನ್ನು ಖರೀದಿಸಿ ಅದನ್ನು ಚಿನ್ನದ ಲಾಕೆಟ್‌ ಆಗಿ ಮಾಡಿಸಿ ಧರಿಸಿದ್ದನು. ಇದರಿಂದ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಈಗ ಆತನನ್ನು ಬಂಧಿಸಿ ಜೈಲಿಗಟ್ಟಲಾಗಿದೆ. 

ಚಿನ್ನದಂಗಡಿ ಮಾಲೀಕರಿಗೆ ನೋಟಿಸ್‌ ಜಾರಿ: ಯಾವುದೇ ಕಾಡು ಪ್ರಾಣಿಗಳ ಚರ್ಮ, ಉಗುರು, ದಂತ ಹಾಗೂ ಮೂಳೆಗಳನ್ನು ಮನುಷ್ಯರು ಧರಿಸುವುದು, ಸಂಗ್ರಹಣೆ ಹಾಗೂ ಮಾರಾಟ ಮಾಡುವುದು ಅಪರಾಧವಾಗಿದೆ. ಇನ್ನು ಹುಲಿಯ ಉಗುರು ಖರೀದಿ ಮಾಡಿಕೊಂಡು ಬಂದಿದ್ದ ವರ್ತೂರು ಸಂತೋಷ್‌ ಹಾಗೂ ಆತನ ಮನೆಯವರಿಗೆ ಇದು ಅಪರಾಧವೆಂದು ಗೊತ್ತಿಲ್ಲದಿದ್ದರೂ ಚಿನ್ನದ ಅಂಗಡಿ ಮಾಲೀಕರಾದರೂ ಪೆಂಡೆಂಟ್‌ ಮಾಡಿಕೊಡುವ ಮುನ್ನ ಈ ಬಗ್ಗೆ ಮಾಹಿತಿ ನೀಡಬಹುದಿತ್ತು. ಜೊತೆಗೆ, ಯಾರೇ ಕಾಡು ಪ್ರಾಣಿಗಳ ದೇಹದ ಅಂಗ ತಂದಲ್ಲಿ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಬೇಕಿತ್ತು. ಇದ್ಯಾವುದನ್ನೂ ಮಾಡದೇ ಚಿನ್ನದ ಸರ ಹಾಗೂ ಹುಲಿ ಉಗುರಿಗೆ ಪೆಂಡೆಂಟ್‌ ಮಾಡಿಕೊಟ್ಟ ಚಿನ್ನದಂಗಡಿ ಮಾಲೀಕರಿಗೂ ಈಗ ನೋಟಿಸ್‌ ಜಾರಿ ಮಾಡಲಾಗಿದೆ.

ವರ್ತೂರು ಸಂತೋಷ್‌ ಬಂಧನದ ಹಿಂದೆ ಷಡ್ಯಂತ್ರ, ಒರಿಜಿನಲ್ ಅಲ್ಲ ಅಂತಾ ಡೌಟಿದೆ ಎಂದ ತಾಯಿ

ಹುಲಿ ಉಗುರಿನ ಮೂಲ ಹುಡುಕಾಟದಲ್ಲಿ ಅಸ್ಪಷ್ಟ ಮಾಹಿತಿ: ಹುಲಿ ಉಗುರು ಧರಿಸಿ ಬಂಧನಕ್ಕೊಳಗಾದ ವರ್ತೂರು ಸಂತೋಷ್‌ ಬಂಧನದ ನಂತರ ನ್ಯಾಯಾಲಯ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ವೇಳೆ ಹುಲಿ ಉಗುರಿನ ಮೂಲವನ್ನು ಪತ್ತೆ ಮಾಡುತ್ತಿರುವ ಅರಣ್ಯ ಅಧಿಕಾರಿಗಳಿಗೆ ವರ್ತೂರು ಸಂತೋಷ್‌ ಅಸ್ಪಷ್ಟ ಮಾಹಿತಿ ನೀಡಿದ್ದಾನೆ. ಆದ್ದರಿಂದ ಈಗ ಸಂತೋಷ್‌ನ ಆಪ್ತ ರಂಜಿತ್ ಹಾಗೂ ಆತನಿಗೆ ಹುಲಿ ಉಗುರಿನ ಪೆಂಡೆಂಟ್‌ ಮಾಡಿಕೊಟ್ಟ ಹೊಸೂರು ಮೂಲದ ಚಿನ್ನದ ಅಂಗಡಿ ಮಾಲೀಕನಿಗೂ ಈಗ ಸಂಕಷ್ಟ ಎದುರಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರಿಗೂ ನೋಟಿಸ್‌ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

click me!