7 ರೇ*ಸ್ಟ್​ಗಳಿಗೆ ಒಂದೇ ದಿನ ಜೀವಾವಧಿ ಶಿಕ್ಷೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೋರ್ಟ್​ಗಳು! ಕುತೂಹಲದ ಮಾಹಿತಿ ಇಲ್ಲಿದೆ...

Published : Mar 02, 2025, 02:50 PM ISTUpdated : Mar 03, 2025, 10:17 AM IST
7 ರೇ*ಸ್ಟ್​ಗಳಿಗೆ ಒಂದೇ ದಿನ ಜೀವಾವಧಿ ಶಿಕ್ಷೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೋರ್ಟ್​ಗಳು! ಕುತೂಹಲದ ಮಾಹಿತಿ ಇಲ್ಲಿದೆ...

ಸಾರಾಂಶ

"ನ್ಯಾಯ ವಿಳಂಬವು ಅನ್ಯಾಯಕ್ಕೆ ಸಮಾನ" ಎಂಬಂತೆ, ಭಾರತದ ಕಾನೂನು ವ್ಯವಸ್ಥೆಯಲ್ಲಿ ಪ್ರಕರಣಗಳು ದಶಕಗಳವರೆಗೆ ನಡೆಯುತ್ತವೆ. ಆದರೆ, ಗುಜರಾತ್‌ನ ನ್ಯಾಯಾಲಯವು ಒಂದೇ ದಿನದಲ್ಲಿ ಏಳು ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪೊಲೀಸರು ಶೀಘ್ರ ತನಿಖೆ ನಡೆಸಿ, ಆರೋಪಪಟ್ಟಿ ಸಲ್ಲಿಸಿದ್ದರಿಂದ ತ್ವರಿತ ವಿಚಾರಣೆ ಸಾಧ್ಯವಾಯಿತು. ಮುಖ್ಯಮಂತ್ರಿಗಳ ಸೂಚನೆಯಂತೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ, ಗುಜರಾತ್ ನ್ಯಾಯಾಲಯಗಳು ಪೋಕ್ಸೊ ಪ್ರಕರಣಗಳಲ್ಲಿ 574 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿವೆ.

"Justice delayed is justice denied" ಎಂದರೆ ವಿಳಂಬದ ನ್ಯಾಯದಿಂದ ನ್ಯಾಯಕ್ಕೆ ಅನ್ಯಾಯ ಮಾಡಿದಂತೆ ಎನ್ನುವ ಮಾತು ತಲೆತಲಾಂತರಗಳಿಂದಲೂ ಚಾಲ್ತಿಯಲ್ಲಿ ಇದೆ. ಆರೋಪಿಯೇ ತಾವು ಅಪರಾಧ ಮಾಡಿದ್ದನ್ನು ಒಪ್ಪಿಕೊಂಡರೂ ಕಾನೂನು ಕೇಳುವುದಿಲ್ಲ. ಏಕೆಂದರೆ ಕೆಲವೊಮ್ಮೆ ಯಾರದ್ದೋ ಪಿತೂರಿಯಿಂದಲೋ ಅಥವಾ ಇನ್ನಾವುದೋ ಕಾರಣಕ್ಕೋ ಆತ ತಾನು ಮಾಡದ ತಪ್ಪನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಇದು ಒಳ್ಳೆಯ ನಿಯಮವೇ. ಆದರೆ ಕೆಲವೊಂದು ಭಯಾನಕ, ಕ್ರೌರ್ಯ ಮೆರೆದ ಘಟನೆಗಳಲ್ಲಿಯೂ ಅಪರಾಧಿಗಳಿಗೆ ಬೇಗ ಶಿಕ್ಷೆಯಾಗುವುದೇ ಇಲ್ಲ. ಒಂದು ಕೋರ್ಟ್​ನಿಂದ ಇನ್ನೊಂದು ಕೋರ್ಟ್​, ಅಲ್ಲಿ ಒಂದಿಷ್ಟು ವರ್ಷ ವಿಚಾರಣೆ, ಸಂತ್ರಸ್ತರ ಕುಟುಂಬಗಳೂ ಪದೇ ಪದೇ ಕೋರ್ಟ್​ಗೆ ಅಲೆಯುವ ಸ್ಥಿತಿ. ಆರೋಪಿಗಳ ಪರ ಸ್ಟ್ರಾಂಗ್​ ವಕೀಲರಿಂದ ವಾದದ ಹಿನ್ನೆಲೆಯಲ್ಲಿ ಮತ್ತೊಂದಿಷ್ಟು ವಿಳಂಬ... ಹೀಗೆ ನಮ್ಮ ಇಡೀ ಕಾನೂನು ವ್ಯವಸ್ಥೆಯಿಂದಾಗಿ ಸೂಕ್ಷ್ಮಾತಿಸೂಕ್ಷ್ಮ ಪ್ರಕರಣಗಳು ದಶಕಗಳವರೆಗೆ ಕೋರ್ಟ್​ನಲ್ಲಿ ಎಳೆದಾಡುತ್ತಾ ಸಾಗುವುದು ಇದೆ. ಅದಕ್ಕಿಂತಲೂ ಕ್ರೂರವಾದದ್ದು ಕೆಲವೊಂದು ರಾಕ್ಷಸೀಕೃತ್ಯ ಎಸಗಿದ ಆರೋಪಿಗಳಿಗೂ ಕೋರ್ಟ್​ ಜಾಮೀನು ನೀಡುವುದು...

ಆದರೆ ಇವುಗಳ ನಡುವೆಯೇ ಅಪರೂಪದಲ್ಲಿ ಅಪರೂಪದ ಎಂಬಂತೆ ಗುಜರಾತ್​ನ ಕೋರ್ಟ್​ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಒಂದೇ ದಿನದಲ್ಲಿ ಗುಜರಾತ್​ನ ವಿವಿಧ ಕೋರ್ಟ್​ಗಳು ಏಳು ಮಂದಿ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಗುಜರಾತ್‌ನ ಅಮ್ರೇಲಿ, ವಡೋದರಾ ಮತ್ತು ರಾಜ್‌ಕೋಟ್‌ನ ವಿವಿಧ ನ್ಯಾಯಾಲಯಗಳು ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ)  ಪ್ರಕರಣಗಳಲ್ಲಿ ಒಂದೇ ದಿನ ಏಳು ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿವೆ. ಕುತೂಹಲದ ಸಂಗತಿ ಏನೆಂದರೆ, ಈ ಎಲ್ಲಾ ಪ್ರಕರಣಗಳಲ್ಲಿಯೂ ಪೊಲೀಸರು ಶೀಘ್ರದಲ್ಲಿಯೇ  ತನಿಖೆ ನಡೆಸಿ ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಕೋರ್ಟ್​ ಕೂಡ ಶೀಘ್ರದಲ್ಲಿಯೇ ವಿಚಾರಣೆಯನ್ನು ಮುಗಿಸಿ ತೀರ್ಪು ಪ್ರಕಟಿಸಿದೆ. 

ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ? ಬಾಲಿವುಡ್​ ನಟಿ ಪ್ರೀತಿ ಜಿಂಟಾ ಜೊತೆ ಕಾಂಗ್ರೆಸ್​ದು ಏನಿದು ಕಿರಿಕ್​?

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಮತ್ತು ಅತ್ಯಾಚಾರ ಘಟನೆಗಳನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಅಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಪೊಲೀಸರು ಇಂಥ ಪ್ರಕರಣಗಳಲ್ಲಿ ಕಾರ್ಯಪ್ರವೃತ್ತರಾಗಿರುವುದಾಗಿ ಪೊಲೀಸ್​ ಅಧಿಕಾರಿ ಹೇಳಿದ್ದಾರೆ. "ಅಮ್ರೇಲಿಯಲ್ಲಿ ಎರಡು ಪ್ರಕರಣಗಳಲ್ಲಿ, ಆರೋಪಿಯನ್ನು ಬಂಧಿಸಿದ 17 ದಿನಗಳಲ್ಲಿ ಆರೋಪಪಟ್ಟಿಗಳನ್ನು ಸಲ್ಲಿಸಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ, ಪೊಲೀಸರು ಅದೇ ದಿನ ಆರೋಪಿಯನ್ನು ಬಂಧಿಸಿದ್ದರು. ರಾಜ್‌ಕೋಟ್ ನಗರದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ, ಪೊಲೀಸರು 40 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಮತ್ತೊಂದೆಡೆ, ಪತನ್ವಾವ್ ಪ್ರಕರಣದಲ್ಲಿ ಘಟನೆಯ ದಿನವೇ ರಾಜ್‌ಕೋಟ್ ಗ್ರಾಮೀಣ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರೆ, ಭಯವದರ್ ಪ್ರಕರಣದಲ್ಲಿ 7 ದಿನಗಳಲ್ಲಿ ಆರೋಪಪಟ್ಟಿಗಳನ್ನು ಸಲ್ಲಿಸಲಾಗಿತ್ತು. 

  ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವದಲ್ಲಿ, ಗುಜರಾತ್‌ನ ನ್ಯಾಯಾಲಯಗಳು ಕಳೆದ ಮೂರು ವರ್ಷಗಳಲ್ಲಿ ಪೋಕ್ಸೊ ಪ್ರಕರಣಗಳಲ್ಲಿ 947 ತೀರ್ಪುಗಳನ್ನು ನೀಡಿವೆ, 574 ವ್ಯಕ್ತಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 11 ಜನರಿಗೆ ಮರಣದಂಡನೆ ವಿಧಿಸಲಾಗಿದೆ.

ಇದನ್ನು ಹಚ್ಚಿ, ನನ್ನಂತೇ ಹೊಳೆಯಿರಿ... ಎನ್ನುವ ನಟಿಗೆ ಚರ್ಮದ ಕಾಯಿಲೆ! ಖುದ್ದು ಯಾಮಿ ಹೇಳಿದ್ದೇನು ಕೇಳಿ...
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!