ವಜ್ರದ ಅಂಗಡಿಗೆ ಕನ್ನ ಹಾಕಿ ಎಗರಿಸಿದ ಇರುವೆ! ಸಿಸಿಟಿವಿಯಲ್ಲಿ ಜಗತ್ತಿನ ಅತಿ ಚಿಕ್ಕ ಕಳ್ಳನ ಕಿತಾಪತಿ ದಾಖಲು...

Published : Mar 01, 2025, 12:55 PM ISTUpdated : Mar 01, 2025, 03:21 PM IST
ವಜ್ರದ ಅಂಗಡಿಗೆ ಕನ್ನ ಹಾಕಿ ಎಗರಿಸಿದ ಇರುವೆ! ಸಿಸಿಟಿವಿಯಲ್ಲಿ ಜಗತ್ತಿನ ಅತಿ ಚಿಕ್ಕ ಕಳ್ಳನ ಕಿತಾಪತಿ ದಾಖಲು...

ಸಾರಾಂಶ

ಜಗತ್ತಿನ ಅತಿ ಚಿಕ್ಕ ದರೋಡೆಕೋರ ಎಂಬ ಕುಖ್ಯಾತಿ ಗಳಿಸಿರೋ ಇರುವೆಯ ಕುತೂಹಲದ ಕಥೆ ಕೇಳಿ. ವಜ್ರ ಕದ್ದು ಸಿಕ್ಕಿಬಿದ್ದಿದೆ ಈ ಇರುವೆ. ಸಿಸಿಟಿವಿಯಲ್ಲಿ ದಾಖಲಾದ ವಿಡಿಯೋ ನೋಡಿ...  

ತಮಗಿಂತ ಹತ್ತಾರು ಪಟ್ಟು ಭಾರದ ವಸ್ತುವನ್ನು ಕೊಂಡೊಯ್ಯವ ಜೀವಿ ಎಂದರೆ ಅದು ಇರುವೆ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇರುವೆಯ ಜೀವನ ಚರಿತ್ರೆಯೇ ರೋಚಕವಾದದ್ದು. ಶಿಸ್ತಿಗೆ ಇದು ಹೇಳಿಮಾಡಿಸಿದ ಜೀವಿ. ಲೈನ್​ನಲ್ಲಿಒಟ್ಟಿಗೇ ಹೋಗಿ ಬರುವುದನ್ನು ನೋಡಿದರೇನೇ ತಿಳಿಯುತ್ತದೆ. ಇನ್ನು ಸಕ್ಕರೆ ಸಿಕ್ಕರಂತೂ ಮುಗಿದೇ ಹೋಯ್ತು. ಅದನ್ನು ಹೇಗೆ ಕಂಡುಹಿಡಿಯುತ್ತದೆಯೋ ಆ ದೇವರಿಗೇ ಗೊತ್ತು. ಸಕ್ಕರೆ ಎಲ್ಲಿಯೇ ಅಡಗಿಸಿ ಇಟ್ಟರೂ, ಎಷ್ಟೇ ಟೈಟ್​ ಆಗಿ ಮುಚ್ಚಳ ಹಾಕಿಟ್ಟರೂ ಅದನ್ನು ಹುಡುಕಿ ಬರುವಲ್ಲಿ ಇರುವೆ ನಿಸ್ಸೀಮನೇ ಸೈ. ಆದರೆ ಇಲ್ಲಿ ಹೇಳುತ್ತಿರುವುದು ಸಕ್ಕರೆಯ ಕಳ್ಳನ ಕಥೆಯಲ್ಲ, ಬದಲಿಗೆ ವಜ್ರದ ದರೋಡೆಕೋರನ ಕಥೆ. ಇದರ ವಿಡಿಯೋ ವೈರಲ್​ ಆಗಿದ್ದು, ಜಗತ್ತಿನ ಚಿಕ್ಕ ಕಳ್ಳನ ಕಿತಾಪತಿ ಸಿಸಿಟಿಯಲ್ಲಿ ದಾಖಲಾಗಿದೆ. 2018ರಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ. 

ಈ ವಿಡಿಯೋ ನೋಡಿದರೆ ನಿಮಗೆ ಇರುವೆ ಸಕ್ಕರೆಯನ್ನು ಕೊಂಡೊಯ್ಯುವಂತೆ ಕಾಣಿಸುತ್ತದೆ.  ಜೂಮ್​ ಕ್ಯಾಮೆರಾದಲ್ಲಿ ಇದನ್ನು ಶೂಟ್​ ಮಾಡಲಾಗಿದ್ದು, ಇದು ಸಕ್ಕರೆಯೇ ಎನ್ನುವುದಾಗಿ ಬಹುತೇಕ ಎಲ್ಲರೂ ಅಂದುಕೊಳ್ಳಲಿಕ್ಕೆ ಸಾಕು. ಆದರೆ ನಿಜವಾಗಿಯೂ ಇದು ಸಕ್ಕರೆಯಲ್ಲ, ವಜ್ರ ಎನ್ನುವುದು ಸಾಬೀತಾಗಿದೆ! ವಜ್ರದ ಅಂಗಡಿಗೆ ಕನ್ನಡ ಹಾಕಿರುವ ಈ ಇರುವೆ ಅಲ್ಲಿಂದ ವಜ್ರವನ್ನು ಕಚ್ಚಿಕೊಂಡು ಪರಾರಿಯಾಗಿದೆ. ಈ ವಿಡಿಯೋದಲ್ಲಿ ಮೇಜಿನ ಮೇಲೆ ಇರುವ  ಬ್ಲಾಟರ್‌ನಲ್ಲಿ ಬಹಳ ಚಿಕ್ಕ ವಜ್ರಗಳ ರಾಶಿಯನ್ನು ಕಾಣಬಹುದು. ಕ್ಯಾಮೆರಾ ಜೂಮ್ ಮಾಡಿ ಬ್ಲಾಟರ್‌ನ ಒಂದು ಮೂಲೆಯಲ್ಲಿ ಇರುವೆ ಇರುವುದನ್ನು ನೋಡಬಹುದಾಗಿದೆ.

ರಕ್ತದ ಗುಂಪು ಪರೀಕ್ಷೆ ಮಾಡಿರುವಿರಾ? ಯಾರ ಊಹೆಗೂ ನಿಲುಕದ 'ಬಾಂಬೆ ಬ್ಲಡ್​ ಗ್ರೂಪ್​' ನಿಮ್ಮದಾಗಿರಬಹುದು!

ಅದರಲ್ಲಿ ಒಂದು ಇರುವೆ,  ತನ್ನ ಬಾಯಲ್ಲಿ  ವಜ್ರವನ್ನು ಹಿಡಿದು ಹೋಗುತ್ತಿರುವುದನ್ನು ನೋಡಬಹುದು.  ಸುಮಾರು 47 ಸೆಕೆಂಡುಗಳ ಕಾಲ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇರುವೆ ಚಲನವಲನ ದಾಖಲಾಗಿದೆ.  ವಜ್ರವನ್ನು ಮೇಜಿನ ಮೇಲೆ ಹೊತ್ತುಕೊಂಡು ಹೋಗುವುದುನ್ನು ಹಾಗೂ ಅದರ ಜೊತೆ  ಕೆಲವೊಮ್ಮೆ ಇರುವೆ  ಮುಂದೆ- ಹಿಂದೆ ಚಲಿಸುವುದು ಕೂಡ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದನ್ನು ಸಕ್ಕರೆ ಅಂದುಕೊಂಡು ಇರುವೆಯಂತೂ ಕೊಂಡೊಯ್ಯಲಿಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಇರುವೆ ಸಕ್ಕರೆ ಕಂಡುಹಿಡಿಯುವಲ್ಲಿ ನಿಸ್ಸೀಮ. ಆದರೆ ಇದನ್ನು ವೀಕ್ಷಣೆ ಮಾಡಿದರೆ ಸಕ್ಕರೆ ಕಂಡಂತೆ ಕಾಣಿಸುವುದು ದಿಟ. ಆದರೆ ಇದು ವಜ್ರದ ಅಂಗಡಿ ಎನ್ನುವುದು ಸಾಬೀತಾಗಿದೆ. 
  
ಇನ್ನು ಇರುವೆಯ ಜೀವನದ ಕುತೂಹಲದ ಬಗ್ಗೆ ಹೇಳುವುದಾದರೆ,  ಇರುವೆಯ ಜಾತಿ  ಜೀವಿತಾವಧಿಯನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಗಂಡು ಇರುವೆಗಳು ಕೆಲವು ವಾರಗಳವರೆಗೆ ಮಾತ್ರ ಬದುಕುತ್ತವೆ ಮತ್ತು ರಾಣಿಯೊಂದಿಗೆ ಸಂಯೋಗದ ನಂತರ ಸಾಯುತ್ತವೆ. ಕೆಲಸ ಮಾಡುವ ಹೆಣ್ಣು ಇರುವೆಗಳು ಹಲವಾರು ತಿಂಗಳುಗಳವರೆಗೆ ಬದುಕಬಲ್ಲವು. ಮತ್ತೊಂದೆಡೆ, ರಾಣಿ ಇರುವೆಗಳು ದಶಕಗಳವರೆಗೆ ಬದುಕಬಲ್ಲವು. ಕೆಲವು ಜಾತಿಗಳಲ್ಲಿ, ರಾಣಿ ಇರುವೆಗಳು 30 ವರ್ಷಗಳವರೆಗೆ ಬದುಕಬಲ್ಲವು.  

ನಾಯಕಿಯನ್ನು ಅಟ್ಟಿಸಿಕೊಂಡು ಬಂದ ಆನೆ: ಭಯಾನಕ ದೃಶ್ಯಗಳ ಶೂಟಿಂಗ್​ ಮಾಡುವುದು ಹೀಗೆ ನೋಡಿ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!