ಯುವಕರೇ ಎಚ್ಚರ, ಎಚ್ಚರ... ಮೂತ್ರ ಶೇಖರಿಸಿಟ್ಟು ಗರ್ಭಿಣಿಯಾಗ್ತಾರೆ! ಹೊಸ ವಂಚನೆ ಬಗ್ಗೆ ಇವಳ ಬಾಯಲ್ಲೇ ಕೇಳಿ...

Published : Mar 01, 2025, 05:33 PM ISTUpdated : Mar 01, 2025, 06:56 PM IST
ಯುವಕರೇ ಎಚ್ಚರ, ಎಚ್ಚರ...  ಮೂತ್ರ ಶೇಖರಿಸಿಟ್ಟು ಗರ್ಭಿಣಿಯಾಗ್ತಾರೆ! ಹೊಸ ವಂಚನೆ ಬಗ್ಗೆ ಇವಳ ಬಾಯಲ್ಲೇ ಕೇಳಿ...

ಸಾರಾಂಶ

ಇತ್ತೀಚೆಗೆ ಗರ್ಭಧಾರಣೆಯ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ಯುವತಿಯೊಬ್ಬಳು ಸಂದರ್ಶನದಲ್ಲಿ ತಾನು ಗರ್ಭಿಣಿಯಾಗಿದ್ದಾಗ ಮೂತ್ರವನ್ನು ಸಂಗ್ರಹಿಸಿ, ಪ್ರೆಗ್ನೆನ್ಸಿ ಕಿಟ್‌ನಲ್ಲಿ ಪಾಸಿಟಿವ್ ತೋರಿಸುವಂತೆ ಮಾಡಿ ಗೆಳೆಯನಿಂದ ಹಣ ಪಡೆದ ಬಗ್ಗೆ ಹೇಳಿದ್ದಾಳೆ. ಈ ವಂಚನೆ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಹುಡುಗಿಯರ ಸಹವಾಸ ಬೇಡ ಎನ್ನುತ್ತಿದ್ದಾರೆ. ಹುಡುಗರು ಚಾಪೆಯ ಕೆಳಗೆ ನುಸುಳಿದರೆ, ರಂಗೋಲಿ ಕೆಳಗೆ ನುಸುಳುವ ಹುಡುಗಿಯರೂ ಇದ್ದಾರೆ ಎನ್ನೋದು ಮರೆಯಬೇಡಿ.

ಈಗೀಗ ವಂಚನೆಗಳಿಗೆ ನೂರಾರು ದಾರಿ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಯಾವ್ಯಾವುದೋ ರೀತಿಯಲ್ಲಿ ಮರಳು ಮಾಡಿ ಹಣ ಪೀಕುವ ಸಾಕಷ್ಟು ಮಂದಿ ಇದ್ದಾರೆ. ಅದರಲ್ಲಿಯೂ ಡಿಜಿಟಲ್​ ಯುಗದಲ್ಲಿ, ಮೋಸ ಹೋಗುತ್ತಿರುವವರ ದೊಡ್ಡ ದಂಡೇ ಇದೆ. ಇವೆಲ್ಲವುಗಳ ಬಗ್ಗೆ ನೀವು ಇದಾಗಲೇ ಸಾಕಷ್ಟು ಕೇಳಿರಲಿಕ್ಕೆ ಸಾಕು. ಆದರೆ ಇಲ್ಲಿ ಹೇಳುತ್ತಿರುವುದು ಸೈಬರ್​ ಕ್ರೈಮೂ ಅಲ್ಲ, ಡಿಜಿಟಲ್​ ಅಪರಾಧವೂ ಅಲ್ಲ. ಬದಲಿಗೆ ಇದು ಪ್ರೆಗ್ನೆನ್ಸಿ ಸ್ಕ್ಯಾಮ್​. ನಿಜ.. ನಿಜ.. ಗರ್ಭಧರಿಸುವ ಮೋಸದಾಟ ಇದು!   ಇದು ಅಂತಿಂಥ ಸ್ಕ್ಯಾಮ್​ ಅಲ್ಲ. ಹುಡುಗಿಯರ ನಂಬಿ ಒಂದು ಸಲ ಅವಳ ಹಿಂದೆ ಹೋದ್ರೆ ಮುಗೀತು ನಿಮ್ಮ​ ಕಥೆ. ಬ್ಯಾಂಕ್​ ಖಾತೆ ಜೀರೋ, ನೀವು ಬೀದಿ ಪಾಲು!

ಈ ಬಗ್ಗೆ ಸಂದರ್ಶನವೊಂದರಲ್ಲಿ ಒಬ್ಬ ಹುಡುಗಿಯೇ ಅದನ್ನು ಬಯಲು ಮಾಡಿದ್ದಾಳೆ. ಅದರ ವಿಡಿಯೊ ಇದೀಗ ವೈರಲ್​ ಆಗಿದೆ. ಅಷ್ಟಕ್ಕೂ ಅವಳು ಹೇಳಿದ್ದನ್ನೇ ಇಲ್ಲಿ ಹೇಳುವುದಾದರೆ, 'ನಾನು ಒಬ್ಬ ಹುಡುಗನನ್ನು ಲವ್​ ಮಾಡ್ತಿದ್ದೆ. ಅವನಿಂದ ಗರ್ಭಿಣಿಯಾದೆ. ಅವನು ನನಗೆ ಗರ್ಭಪಾತ ಮಾಡಿಸಿದ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ನಾನು ನನ್ನ ಮೂತ್ರವನ್ನು ಶೇಖರಿಸಿ ಫ್ರಿಜ್​ನಲ್ಲಿ ಇಟ್ಟುಕೊಂಡಿದ್ದೆ. ನನಗೆ ದುಡ್ಡು ಬೇಕಾದಾಗಲೆಲ್ಲಾ ಪ್ರೆಗ್ನೆನ್ಸಿ ಕಿಟ್​ ತಂದು ಅದರಲ್ಲಿ ಆ ಮೂತ್ರವನ್ನು ಹಾಕುತ್ತಿದ್ದೆ. ಆಗ ಸಹಜವಾಗಿ ಅದು ಪಾಸಿಟಿವ್​ ಎಂದು ತೋರಿಸುತ್ತಿತ್ತು. ಅದನ್ನೇ ನನ್ನ ಬಾಯ್​ಫ್ರೆಂಡ್​ಗೆ ತೋರಿಸಿ ದುಡ್ಡು ಪಡೆಯುತ್ತಾ ಬಂದಿದ್ದೇನೆ' ಎಂದಿದ್ದಾಳೆ! ಇದನ್ನು ಕೇಳಿ ಸಂದರ್ಶಕನೇ ಸುಸ್ತು ಹೊಡೆದು ಹೋಗಿದ್ದಾನೆ.

ವಜ್ರದ ಅಂಗಡಿಗೆ ಕನ್ನ ಹಾಕಿ ಎಗರಿಸಿದ ಇರುವೆ! ಸಿಸಿಟಿವಿಯಲ್ಲಿ ಜಗತ್ತಿನ ಅತಿ ಚಿಕ್ಕ ಕಳ್ಳನ ಕಿತಾಪತಿ ದಾಖಲು...

ಅಷ್ಟಕ್ಕೂ ಪ್ರೆಗ್ನೆನ್ಸಿ ಕಿಟ್​ನಲ್ಲಿ ಗರ್ಭಿಣಿ ಹೌದೋ ಅಲ್ಲವೋ ಎನ್ನುವುದನ್ನು ಪರೀಕ್ಷೆ ಮಾಡಬಹುದು ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಷಯವೇ. ಈ ಕಿಟ್​ನಲ್ಲಿ ಮೂತ್ರದ ಬಿಂದು ಹಾಕಿದಾಗ ಒಂದು ಕೆಂಪು ಗೆರೆ ಬಂದರೆ ಗರ್ಭಿಣಿಯಲ್ಲ ಎಂದು, ಆದರೆ ಗರ್ಭಿಣಿಯಾಗಿದ್ದರೆ ಎರಡು ಕೆಂಪು ಗೆರೆ ಬರುತ್ತದೆ. ಈ ಯುವತಿ, ಗರ್ಭ ಧರಿಸಿದ್ದ ಸಂದರ್ಭದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರುವ ಮೂತ್ರದ ಹನಿಗಳನ್ನು ಈ ಕಿಟ್​ನಲ್ಲಿ ಹಾಕಿ ತಾನು ಗರ್ಭಿಣಿ ಎಂದು ಹೇಳುತ್ತಾ ಬಂದಿದ್ದಾಳಂತೆ! ಅಷ್ಟಕ್ಕೂ ಈಕೆ ಯಾರು? ಈ ಗುಟ್ಟನ್ನು ಯಾಕೆ ಬಿಟ್ಟುಕೊಟ್ಟಿದ್ದಾಳೆ ಎನ್ನುವುದು ತಿಳಿದಲ್ಲ.

ಆದರೆ, ಇಂಥ ಸ್ಕ್ಯಾಮ್​ ಕೂಡ ನಡೆಯುತ್ತದೆ ಎನ್ನುವುದು ಮಾತ್ರ ಯುವಕರಿಗೆ ಶಾಕ್​ ತರುವ ವಿಷಯವಾಗಿದೆ. ಇದರ ವಿಡಿಯೋ ವೈರಲ್​ ಆಗುತ್ತಲೇ ಯುವ ಕಮೆಂಟಿಗರು ಮಾತ್ರ ಶಾಕ್​ನಲ್ಲಿಯೇ ಕಮೆಂಟ್​ ಮಾಡಿದ್ದಾರೆ. ಹುಡುಗಿಯರ ಸಹವಾಸ ಬೇಡಪ್ಪಾ ಬೇಡ ಎನ್ನುತ್ತಿದ್ದಾರೆ. ಮತ್ತೆ ಕೆಲವರು, ನಾನು ಇಷ್ಟೆಲ್ಲಾ ದಡ್ಡನಲ್ಲ, ಇನ್ನು ಮುಂದೆ ನನ್ನ ಹುಡುಗಿ ಏನಾದ್ರೂ ಪ್ರೆಗ್ನೆಂಟ್​ ಎಂದರೆ ಡಾಕ್ಟರ್​ ಬಳಿ ಚೆಕ್​ ಮಾಡಿಸುವೆ ಎಂದಿದ್ದಾನೆ.ಫ್ರಿಜ್​ನಲ್ಲಿ ಇಡುವ ಮೂತ್ರದಿಂದ  ಹೀಗೆ ಮಾಡಲು ಸಾಧ್ಯವೆ ಎನ್ನುವ ಪ್ರಶ್ನೆಯನ್ನೂ ಹಲವರು ಕೇಳುತ್ತಿದ್ದಾರೆ.ಮೂತ್ರವನ್ನು ಪ್ರಿಡ್ಜಲ್ಲಿ ಸಂಗ್ರಹಿಸಿಟ್ಟು, ಬ್ಲಾಕ್ ಮೇಲ್ ಮಾಡೋ ಸಾಧ್ಯತೆ ಕಡಿಮೆ  ಎನ್ನುವುದು ಅವರ ಅಭಿಮತ.  ಬಹುಶಃ ಪ್ರೆಗ್ನೆನ್ಸಿ ಕಿಟ್ ಗೆ ಯೂರಿನ್ ಹಾಕಿ, ಒಂದಿಷ್ಟು ಕಿಟ್ ಇಟ್ಕೊಂಡು ಬ್ಲಾಕ್ ಮೇಲ್ ಮಾಡುತ್ತಿರಬೇಕು ಅಂತಿದ್ದಾರೆ ಗೈನಾಕಾಲಜಿಲಿಸ್ಟ್. -2 ಡಿಗ್ರಿ ಸೆ.ನಲ್ಲಿ ಸಂಗ್ರಹಿಸಿಟ್ಟರೆ ಕೆಲವೊಮ್ಮೆ ಪ್ರೆಗ್ನಿನ್ಸಿ ತೋರಿಸೋ ಸಾಧ್ಯತೆ ಇರುತ್ತದೆ. ಆದರೆ, ಕ್ರಮೇಣ ಅದರ ಅಕ್ಯೂರೆಸಿ ಕಡಿಮೆಯಾಗುತ್ತದೆ.ಸುಮಾರು 6 ತಿಂಗಳ ಕಾಲ ಅದರ ಪವರ್​ ಇರುವ  ಸಾಧ್ಯತೆ ಇರುತ್ತದೆ ಎನ್ನುವುದು ಅವರ ಮಾಹಿತಿ. ಅದೇನೇ ಇದ್ದರೂ ಇಂಥ ದುಸ್ಸಾಹಸಕ್ಕೆ ಕೈಹಾಕುವ ಮುನ್ನ ಯುವಕರು ಎಚ್ಚರದಿಂದ ಇರುವುದು ಒಳಿತು!  

ಸತ್ತ ವ್ಯಕ್ತಿ ಎದ್ದು ಬಂದ: ಲಾಟರಿ ಖರೀದಿಸಿ ಕಾರು ಗೆದ್ದ! ಮಾಧ್ಯಮದ ಮುಂದೆ ತೋರಿಸಲು ಹೋಗಿ ಏನಾಯ್ತು ನೋಡಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!