'ಪಿರಿಯಡ್ಸ್ ಇದ್ದ ದಿನ ಮದುವೆ, ಹಣ ಕೊಡದಿದ್ರೆ ಬೇರೆಯವರ ಜತೆ ಮಲಗಲು ಸಿದ್ಧ'

By Suvarna News  |  First Published Dec 24, 2020, 9:37 PM IST

ಮದುವೆಯಾಗಿ ಕೆಲವೇ ದಿನಕಲ್ಕೆ ಡಿವೋರ್ಸ್  ಕೇಳಿದ ಗಂಡ/ ಪಿರಿಯಡ್ಸ್ ನಲ್ಲಿ ಇದ್ದ ಸಂಗತಿ ಮುಚ್ಚಿಟ್ಟಿದ್ದ ಪತ್ನಿ/  ಧಾರ್ಮಿಕ ನಿಯಮ ಉಲ್ಲಂಘಟನೆ ಮಾಡಿದ್ದಾಳೆ/ ಐಷಾರಾಮಿ ಜೀವನಕ್ಕೆ ಬೇಡಿಕೆ ಇಡುತ್ತಿದ್ದಾಳೆ


ವಡೋದರಾರ( ಡಿ. 24)  ವಡೋದರಾದ ವ್ಯಕ್ತಿಯೊಬ್ಬ ಹೆಂಡತಿಯಿಂದ ಡೈವೋರ್ಸ್ ಕೇಳಿದ್ದಾನೆ. ಮದುವೆ ದಿನ ಆಕೆ ಪಿರಿಯಡ್ಸ್  ನಲ್ಲಿ ಇದ್ದಳು ಎಂಬ ಕಾರಣಕ್ಕೆ ವಿಚ್ಛೇದನ ಕೇಳಿದ್ದಾನೆ.

ಐಷಾರಾಮಿ ವಸ್ತುಗಳಿಗಾಗಿ  ಹಣಕ್ಕೆ ಬೇಡಿಕೆ ಇಡುತ್ತಿದ್ದಾಳೆ. ಅದನ್ನು ಪೂರೈಸಲು ಸಾಧ್ಯವಾಗದ್ದಕ್ಕೆ ಕಾಟ ಕೊಡುತ್ತಿದ್ದಾಳೆ. ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕುತ್ತಾಳೆ ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ ದೂರಿನಲ್ಲಿ ತಿಳಿಸಿದ್ದಾರೆ.

Tap to resize

Latest Videos

ಮದುವೆ ಮುಗಿದ ಮೇಲೆ ದೇವಾಲಯಲ್ಲೆ ತೆರಳಿದಾಗ ಹೆಂಡತಿ ತಾನು ಪಿರಿಯಡ್ಸ್ ನಲ್ಲಿ ಇದ್ದೇನೆ ಎಂದು ತಿಳಿಸಿದ್ದಾಳೆ. ಶಿಕ್ಷಕಿಯಾಗಿರುವ ಹೆಂಡತಿ ಧಾರ್ಮಿಕ ನಂಬುಗೆಗಳನ್ನು ಮುರಿದಿದ್ದಾಳೆ ಎಂಬುದು ಗಂಡನ ಆರೋಪ.

ಪಿರಿಯಡ್ಸ್ ಡೇಟ್ ಮುಂದೆ ಹಾಕಿದ್ರೆ ಕಾಡುವ ಅಪಾಯ

ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಮಹಿಳೆ  ತನ್ನ ಖರ್ಚಿಗೆ ತಿಂಗಳಿಗೆ ಐದು ಸಾವಿರ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ.  ತನ್ನ ತವರು ಮನೆಯಿಂದಲೂ ಹೊರ ಹೋಗಿರುವ ಯುವತಿ ಅವರ ಮನೆಗೂ ಹಿಂದಿರುಗಿಲ್ಲ ಎಂದು  ಗಂಡ ದೂರಿನಲ್ಲಿ ಹೇಳಿದ್ದಾರೆ.

ಒಂದು ವೇಳೆ ನೀವು ಹಣ ಕೊಡದೆ ಹೋದರೆ  ತನ್ನ ಐಷರಾಮಿ ಜೀವನ ನಿರ್ವಹಿಸಲು ಬೇರೆ ಪುರುಷರೊಂದಿಗೂ ಮಲಗಲು ಸಿದ್ಧ. ನಿಮ್ಮ ಮೇಲೆ ಸುಳ್ಳು ದೂರು ದಾಖಲು ಮಾಡುತ್ತೇನೆ ಎಂದು ಬೆದರಿಕೆ  ಹಾಕಿದ್ದಾಳೆ ಎಂಬುದು  ಯುವಕನ ಮತ್ತೊಂದು ಆರೋಪ.  ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ

 

click me!