ತಹಸೀಲ್ದಾರ್ ಪತ್ನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಬಗ್ಗೆ ಶಾಸಕ ಪ್ರತಿಕ್ರಿಯಿಸಿದ್ದು ಹೀಗೆ...
ಬಳ್ಳಾರಿ, (ಡಿ.24): ಜಿಲ್ಲೆಯ ಸಿರುಗುಪ್ಪ ತಹಸೀಲ್ದಾರ್ ಸತೀಶ ಬಿ.ಕೂಡ್ಲಿಗಿ ಅವರ ಪತ್ನಿ ಶಂಕ್ರಮ್ಮ ಮೃತದೇಹ ಗುರುವಾರ ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ತಹಸೀಲ್ದಾರ್ ಗೃಹ ಕಚೇರಿಯಲ್ಲಿ ಪತ್ತೆಯಾಗಿದೆ.
ಚುನಾವಣಾ ಕರ್ತವ್ಯ ಹಿನ್ನೆಲೆ ಇತ್ತೀಚೆಗೆ ಬಳ್ಳಾರಿ ಡಿಸಿ ಕಚೇರಿಗೆ ಸತೀಶ್ ವರ್ಗವಣೆಯಾಗಿದ್ದರು. ಆದರೆ, ಸಿರುಗುಪ್ಪದಲ್ಲಿನ ಮನೆಯನ್ನು ಖಾಲಿ ಮಾಡಿರಲಿಲ್ಲ. ಅಲ್ಲಿ ಪತ್ನಿ ಶಂಕ್ರಮ್ಮ ಇದ್ದರು. ಇದೇ ಮನೆಯಲ್ಲಿ ಶಂಕ್ರಮ್ಮ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ.
undefined
ಮೆಡಿಕಲ್ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣು: ಕಾರಣ...?
ಸತೀಶ್ ಬಿ. ಕೂಡ್ಲಿಗಿ ಅವರು ಗ್ರಾಮ ಪಂಚಾಯತ್ ಚುನಾವಣೆ ಕರ್ತವ್ಯದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆಯಾಗಿದ್ದರು. ಆದರೆ ಸರಕಾರಿ ನಿವಾಸವನ್ನು ಖಾಲಿ ಮಾಡಿರಲಿಲ್ಲ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಶಂಕ್ರಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ, ಈ ಸಾವು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಶಾಸಕರ ಅಭಿಪ್ರಾಯ
ಇನ್ನು ಈ ಬಗ್ಗೆ ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಪ್ರತಿಕ್ರಿಯಿಸಿದ್ದು, ಹಲವು ವರ್ಷಗಳಿಂದ ಶಂಕ್ರಮ್ಮ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನ ಹಲವು ಬಾರಿ ಆಸ್ಪತ್ರೆಗೂ ಕರೆದುಕೊಂಡು ಹೋಗಲಾಗಿತ್ತು. ಶಂಕ್ರಮ್ಮ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಬಗ್ಗೆ ಆಸ್ಪತ್ರೆಯ ದಾಖಲೆಗಳಿವೆ ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ ಎಂದರು.
ಆ ಮೂಲಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ತಹಶೀಲ್ದಾರ್ರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಶಾಸಕರು ಹೇಳಿದಂತಾಗಿದೆ. ಪೊಲೀಸರು ಇನ್ನೂ ತನಿಖೆ ಆರಂಭಿಸಿಲ್ಲ ಆಗಲೇ ಶಾಸರು ಈ ರೀತಿ ಹೇಳಿಕೆ ಕೊಟ್ಟಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.