ರ್‍ಯಾಪ್ ಗಾಯಕನಾಗಲು ಕಳ್ಳತನ ಮಾಡ್ದ: ಹಾಡು ಹೇಳಿಯೇ ಜೈಲು ಪಾಲಾದ ಯುವಕ..!

By BK Ashwin  |  First Published Mar 2, 2023, 5:24 PM IST

ದೆಹ್ರಾಡೂನ್‌ನ ಗೋಪೇಶ್ವರ ಠಾಣೆ ಪೊಲೀಸರು ಸೋಮವಾರ 3.5 ಲಕ್ಷ ರೂಪಾಯಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಇದು ಅಲ್ಲಿದ್ದ ಪೊಲೀಸರಿಗೆ ಅಚ್ಚರಿ ಮತ್ತು ವಿನೋದಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. 


ದೆಹ್ರಾಡೂನ್ (ಮಾರ್ಚ್‌ 2, 2023): ಹಲವರಿಗೆ ಹಲವು ರೀತಿಯ ಆಸೆ, ಆಕಾಂಕ್ಷೆಗಳಿರುತ್ತದೆ. ಹಾಡು ಹೇಳಬೇಕು, ದೊಡ್ಡ ಮಟ್ಟದಲ್ಲಿ ಫೇಮಸ್‌ ಆಗ್ಬೇಕು. ನಾನು ಇವರ ರೀತಿ ಜನಪ್ರಿಯ ಗಾಯಕನಾಗ್ಬೇಕು ಅನ್ನೋ ಆಸೆಯೂ ಹಲವರಲ್ಲಿರುತ್ತೆ. ಅದೇ ರೀತಿ, ಇಲ್ಲೊಬ್ಬರು ಸ್ಥಳೀಯ ಗಾಯಕ ಫೇಮಸ್‌ ಆಗೋಕೆ ಹೋಗಿ ಕಳ್ಳತನ ಮಾಡಿದ್ದಾರೆ. ಹಾಗೆ, ಹಾಡು ಹೇಳಿಯೇ ಪೊಲೀಸರಿಗೆ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ ನೋಡಿ. ಉತ್ತರಾಖಂಡದ ದೆಹ್ರಾಡೂನ್‌ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. 

19 ವರ್ಷದ ಉದಯೋನ್ಮುಖ ಗಾಯಕ (Singer) ಸಂದೀಪ್‌ ಖತ್ರಿ, ಪ್ರಸಿದ್ಧ ರ್‍ಯಾಪ್ ಗಾಯಕನಾಗುವ (Rap Singer) ತನ್ನ ಕನಸನ್ನು ನನಸಾಗಿಸಲು ಸಹಾಯ ಮಾಡಲು ಸಂಗೀತ ಉಪಕರಣಗಳನ್ನು (Musical Instruments) ಖರೀದಿಸಲು ಹಣ (Cash) ಹೊಂದಿಸಲಾಗದೆ ಕಳ್ಳತನ (Theft) ಮಾಡಿದ್ದಾನೆ. ಅಲ್ಲದೆ, ಆರೋಪಿಗಾಗಿ ಪತ್ತೆ ಹಚ್ಚುತ್ತಿದ್ದ ಪೊಲೀಸರಿಗೆ (Police) ಹಾಡು ಹೇಳಿಯೇ ತನ್ನ ತಪ್ಪನ್ನು ಒಪ್ಪಿಕೊಂಡು ತಾನು ಕಳ್ಳತನ ಮಾಡುವ ಕೃತ್ಯವನ್ನ ಹೇಳಿಕೊಂಡಿದ್ದಾನೆ ನೋಡಿ.. ಸಂಗೀತ ಉಪಕರಣಗಳನ್ನು ಖರೀದಿಸಲು ಕಳ್ಳತನ ನಡೆಸಿದ್ದೇನೆ ಎಂದು ಪೊಲೀಸರ ಮುಂದೆ ಅವಲತ್ತುಕೊಂಡಿದ್ದಾನೆ.

Tap to resize

Latest Videos

ಇದನ್ನು ಓದಿ: ಶಾಲಾ- ಕಾಲೇಜುಗಳಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ ಕದಿಯುವ ಗ್ಯಾಂಗ್: 22 ವರ್ಷಗಳ ಬಳಿಕ ಖದೀಮರ ಸೆರೆ.!

‘’ಬಾರಹ್‌ ಬಜೆ ಮೈನೆ ಚೋರಿ ಕರ್‌ ದಿ, ದೇಖೋ ಮೈನೆ ಮಾಲ್ ಹರಿದ್ವಾರ್‌ ಭೇಜ್ ದಿ (ಮಧ್ಯರಾತ್ರಿ 12 ಗಂಟೆ ಸಮಯ ನಾನು ಕಳ್ಳತನ ಮಾಡಿದ್ದೇನೆ ಮತ್ತು, ನೋಡಿ, ಈ ವಸ್ತುಗಳು ಈಗ ಹರಿದ್ವಾರದಲ್ಲಿವೆ) ಎಂದು 19 ವರ್ಷದ ಉದಯೋನ್ಮುಖ ರ್‍ಯಾಪರ್‌ ಸಂದೀಪ್ ಖತ್ರಿ ಪೊಲೀಸರ ಎದುರೇ ಹಾಡು ಹೇಳಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ದೆಹ್ರಾಡೂನ್‌ನ ಗೋಪೇಶ್ವರ ಠಾಣೆ ಪೊಲೀಸರು ಸೋಮವಾರ 3.5 ಲಕ್ಷ ರೂಪಾಯಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಇದು ಅಲ್ಲಿದ್ದ ಪೊಲೀಸರಿಗೆ ಅಚ್ಚರಿ ಮತ್ತು ವಿನೋದಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. 

ಕಳ್ಳತನವಾಗಿರುವ ಅಂಗಡಿ ಮಾಲೀಕ ಸಂಜಯ್ ಸಿಂಗ್ ನೀಡಿದ ದೂರಿನ ಮೇರೆಗೆ ಫೆಬ್ರವರಿ 24ರಂದು ದಾಖಲಾದ ಕಳ್ಳತನ ಪ್ರಕರಣದ ತನಿಖೆಯ ವೇಳೆ ಸಂದೀಪ್‌ ಖತ್ರಿಯನ್ನು ಬಂಧಿಸಲಾಗಿದೆ ಎಂದು ಚಮೋಲಿ ಎಸ್‌ಪಿ ಪ್ರಮೇಂದ್ರ ದೋಭಾಲ್ ಮಂಗಳವಾರ ತಿಳಿಸಿದ್ದಾರೆ. ಅಲ್ಲದೆ, ವಿಚಾರಣೆ ವೇಳೆ  ಎಲೆಕ್ಟ್ರಾನಿಕ್ ಗ್ಯಾಜೆಟ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದೇನೆ. ಈ ಹಿಂದೆ ತನ್ನ  ತವರು ಜಿಲ್ಲೆಯಲ್ಲಿ ಇದೇ ರೀತಿಯ ಅಪರಾಧವನ್ನು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದೂ ಸಹ ಪೊಲೀಸರು ಹೇಳಿದ್ದಾರೆ. 

ಇದನ್ನೂ ಓದಿ: ಪ್ರತಿದಿನ 1 ಕೋಟಿ ರೂ. ಕದಿಯುವುದು ಸೈಬರ್‌ ಕಳ್ಳರ ಟಾರ್ಗೆಟ್: ನಿಮ್ಮ ಹಣ ಸೇಫ್ಟಿಗೆ ಇಲ್ಲಿದೆ ಮಾರ್ಗ..!

ಫೆಬ್ರವರಿ 19 ರಂದು ತನ್ನ ಮುಚ್ಚಿದ್ದ ಎಲೆಕ್ಟ್ರಾನಿಕ್ಸ್ ಅಂಗಡಿಗೆ ನುಗ್ಗಿದ ನಂತರ ಅಪರಿಚಿತ ಆರೋಪಿಗಳು 3.5 ಲಕ್ಷ ರೂಪಾಯಿ ಮೌಲ್ಯದ ಐದು ಮೊಬೈಲ್ ಫೋನ್‌ಗಳು ಮತ್ತು ಡಿಎಸ್‌ಎಲ್‌ಆರ್ ಕ್ಯಾಮೆರಾವನ್ನು ಕದ್ದಿದ್ದಾರೆ ಎಂದು ಅಂಗಡಿ ಮಾಲೀಕರು ತಮ್ಮ ದೂರಿನಲ್ಲಿ ಆರೋಪಿಸಿದ್ದರು ಎಂದು ಚಮೋಲಿ ಎಸ್‌ಪಿ ಪ್ರಮೇಂದ್ರ ದೋಭಾಲ್ ಮಾಹಿತಿ ನೀಡಿದ್ದಾರೆ. 

ಶಂಕಿತ ಆರೋಪಿಗಳನ್ನು ಬಂಧಿಸಲು ಚಮೋಲಿ ವೃತ್ತದ ಅಧಿಕಾರಿಯ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಪೊಲೀಸರು ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿಗಳು ಮತ್ತು ಸ್ಥಳೀಯ ಇನ್‌ಪುಟ್‌ಗಳ ಸಹಾಯದಿಂದ ಸಂದೀಪ್‌ ಖತ್ರಿಯನ್ನು ಬಂಧಿಸಿದ್ದರು. ಕದ್ದ ಎಲ್ಲಾ ವಸ್ತುಗಳು ಅವನ ಬಳಿ ಪತ್ತೆಯಾಗಿವೆ. ನಂತರ ಅವನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ಹಾಗೂ ಮತ್ತು ಜೈಲಿಗೆ ಕಳುಹಿಸಲಾಗಿದೆ ಎಂದೂ ಉತ್ತರಾಖಂಡದ ಚಮೋಲಿ ಎಸ್‌ಪಿ ಪ್ರಮೋಂದ್ರ ಧೋಬಾಲ್‌ ಹೇಳಿದ್ದಾರೆ. 

ಇದನ್ನೂ ಓದಿ: ಕಳ್ಳತನ ಮಾಡಿ ಎಸ್ಕೇಪ್ ಆದವ ಗಿರವಿ ಅಂಗಡಿಯಲ್ಲಿ ಸಿಕ್ಕಿ ಬಿದ್ದ, ಆರೋಪಿಗಾಗಿ 150 ಸಿಸಿಟಿವಿ ಚೆಕ್!

click me!