ಇಲ್ಲಿನ ಕಾಳಿನದಿ ಸೇತುವೆಯಿಂದ ನದಿಗೆ ಹಾರಿ ಜಿಪಂ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳಗಾವಿಯ ಕಿತ್ತೂರಿನ ಶ್ರೀಕಾಂತ ತಮ್ಮಣ್ಣ ಮೇಲಿನಮನೆ (38) ಆತ್ಮಹತ್ಯೆ ಮಾಡಿಕೊಂಡವರು.
ಕಾರವಾರ (ಡಿ.04): ಇಲ್ಲಿನ ಕಾಳಿನದಿ ಸೇತುವೆಯಿಂದ ನದಿಗೆ ಹಾರಿ ಜಿಪಂ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳಗಾವಿಯ ಕಿತ್ತೂರಿನ ಶ್ರೀಕಾಂತ ತಮ್ಮಣ್ಣ ಮೇಲಿನಮನೆ (38) ಆತ್ಮಹತ್ಯೆ ಮಾಡಿಕೊಂಡವರು. ಜಿಪಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಪ್ರೊಜೆಕ್ಟರ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು. ಮೇಲಧಿಕಾರಿಗಳ ಒತ್ತಡ, ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ತಂದೆ ತಮ್ಮಣ್ಣ ಚನ್ನಬಸಪ್ಪ ಮೇಲಿನಮನೆ ದೂರು ನೀಡಿದ್ದಾರೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆ ನೇಣಿಗೆ ಶರಣು: ನೇಣು ಬೀಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಟೇಕಲ್‌ನ ಕೆಜಿಹಳ್ಳಿಯಲ್ಲಿ ಶನಿವಾರ ಸಂಜೆ ನಡೆದಿದೆ. ಕೆಜಿಹಳ್ಳಿ ಸೀಮಾ (30) ಎಂಬಾಕೆಯೇ ಮೃತ ದುರ್ದೈವಿ. ಮಹಿಳೆ ಆತ್ಮಹತ್ಯೆಗೆ ವರದಕ್ಷಿಣೆ ಕಿರುಕುಳ ಎಂಬ ಶಂಕೆ ವ್ಯಕ್ತವಾಗಿದ್ದು, ಮೃತಳ ಪೋಷಕರ ದೂರಿನನ್ವಯ ಆಕೆಯ ಪತಿ ಅಸೀಪ್ ಖಾನ್ ಮತ್ತು ಅತನ ಸಹೋದರ ಜುಬೇರ ಖಾನ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಸ್ವಾರ್ಥ, ಪ್ರತಿಷ್ಠೆ ಬಿಟ್ಟು ಒಳ್ಳೆ ಮಾರ್ಗದಲ್ಲಿ ಅನುಸರಿಸಿ: ಸಚಿವ ಅಶ್ವತ್ಥನಾರಾಯಣ್
ಮೃತ ಸೀಮಾ ಪಕ್ಕದ ಗ್ರಾಮದ ಮಾಕರಹಳ್ಳಿ ನಿವಾಸಿ ಅಸೀಪ್‌ನೊಟ್ಟಿಗೆ 9 ವರ್ಷದ ಹಿಂದೆ ಮದುವೆಯಾಗಿದ್ದು, ಪತಿ ಕೆಜಿಹಳ್ಳಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದನು. ಕೊಲೆಗೈದು ಪತಿ ಹಾಗೂ ಅತನ ಸಹೋದರ ಸೇರಿ ಸೀಮಾಳನ್ನು ನೇಣು ಹಾಕಿದ್ದಾರೆಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಮಾಸ್ತಿ ಸರ್ಕಲ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ನೇಣಿಗೆ ಶರಣು: ಪಟ್ಟಣದ ಕೃಷ್ಣಾಪುರದಲ್ಲಿ ಬಾಡಿಗೆ ಮನೆಯಲ್ಲಿ ನಡೆಸಲಾಗುತ್ತಿದ್ದ ಬಾಲಕರ ವಸತಿ ನಿಲಯದಲ್ಲಿ ಸೋಮವಾರ ಬೆಳಗ್ಗೆ ಪ್ರಥಮ ಪಿಯುಸಿ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ. ಅಂತರಸಂತೆ ಹೋಬಳಿಯ ಮಾರನಹಾಡಿ ಆದಿವಾಸಿ ನಿಂಗರಾಜು ಮತ್ತು ಮಂಗಳಮ್ಮ ಎಂಬವರ ಪುತ್ರ ಆಕಾಶ್ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಕಳೆದ ಶನಿವಾರ ರಜೆಯ ಮೇಲೆ ಊರಿಗೆ ಹೋದ ಆಕಾಶ್ ಸೋಮವಾರ ಬೆಳಗ್ಗೆ ಮನೆಯಿಂದ ತನ್ನ ಅಣ್ಣನ ಮೂಲಕ ಬೈಕ್‌ನಲ್ಲಿ ಹಾಡಿಯಿಂದ ಮಳಲಿ ಗೇಟ್‌ಗೆ ಡ್ರಾಪ್ ತೆಗೆದುಕೊಂಡು ನಂತರ ಬಸ್ಸಿನಲ್ಲಿ ಕೋಟೆಗೆ ಬಂದು ಸುಮಾರು 10.30ಕ್ಕೆ ತನ್ನ ತಂದೆ ಮೊಬೈಲ್‌ಗೆ ಕರೆಮಾಡಿ ಅಪ್ಪ ಹಾಸ್ಟೆಲ್ ಶಿಫ್ಟ್ ಮಾಡಿದ್ದಾರೆ. ನನ್ನೊಬ್ಬನಿಗೆ ಸಾಮಾನು ತೆಗೆದುಕೊಂಡು ಹೋಗಲು ಆಗುತ್ತಿಲ್ಲ, ಅಣ್ಣನನ್ನು ಕಳಿಸು ಎಂದು ಹೇಳಲಾಗಿ ನಂತರ ತಂದೆ ಅಣ್ಣನಾದ ನಂದೀಶ್‌ನನ್ನು ಬೈಕ್‌ನಲ್ಲಿ ಕಳುಹಿಸಿದರು.
ಕಳೆದ ನಾಲ್ಕೂವರೆ ವರ್ಷದಲ್ಲಿ ಜನಪರ ಕೆಲಸಗಳು ಆಗಿಲ್ಲ: ಶಾಸಕ ಚಲುವರಾಯಸ್ವಾಮಿ
ಸುಮಾರು 11.45 ಸಮಯಕ್ಕೆ ಹಾಸ್ಟೆಲ್ ಹತ್ತಿರ ಬಂದ ನಂದೀಶ್ ಹಾಸ್ಟೆಲ…ನಲ್ಲಿ ಯಾರು ಇಲ್ಲದನ್ನು ನೋಡಿ ಗಾಬರಿಯಾಗಿ ಮೇಲ್ಮಡಿ ಹತ್ತಿ ಕೊಠಡಿಯಲ್ಲಿ ನೋಡಲಾಗಿ ಬೆಡ್‌ಶಿಟ್‌ನಿಂದ ಫ್ಯಾನಿಗೆ ನೇತುಹಾಕಿ ಕೊಂಡಿದ್ದ ತಮ್ಮನ ದೇಹವನ್ನು ಕಂಡ ನಂದೀಶ್ ಬಾಗಿಲು ತೆಗೆದು ಹಗ್ಗವನ್ನು ಕಟ್ ಮಾಡಿ ಉಸಿರಿರಬಹುದೆಂದು ತಮ್ಮನ ದೇಹವನ್ನು ನೆಲಮಹಡಿಯ ಮುಖ್ಯ ಗೇಟ್‌ವರೆಗೆ ತಾನೊಬ್ಬನೇ ಹೊತ್ತು ತರಲಾಗಿ ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ನೋಡಿ ಗಾಬರಿಯಿಂದ ಓಡಿ ಬಂದು ಆಕಾಶ್ ಸತ್ತಿರುವುದು ಕಂಡುಬಂದಿದೆ. ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.