
ಹುಬ್ಬಳ್ಳಿ (ಅ.3): ಅಪ್ರಾಪ್ತ ಮಕ್ಕಳಿಗೆ ಹಣದಾಸೆ ತೋರಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ವಿಕೃತ ಕಾಮುಕನನ್ನು ಸ್ಥಳೀಯರೇ ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆ ನಡೆದಿದೆ.
ಆರೋಪಿ ಒಡಿಶಾ ಮೂಲದವನಾಗಿದ್ದು, ಹುಬ್ಬಳ್ಳಿಯ ಪ್ರತಿಷ್ಠಿತ ಹೋಟೆಲ್ಲೊಂದರಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಹುಬ್ಬಳ್ಳಿಯ ಸಿದ್ಧಲಿಂಗೇಶ್ವರ ಕಾಲೋನಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಆರೋಪಿ. ಸುತ್ತಮುತ್ತಲಿನ ಮನೆಗಳ ಅಪ್ರಾಪ್ತ ಮಕ್ಕಳೇ ಇವನ ಟಾರ್ಗೆಟ್. ಮಕ್ಕಳಿಗೆ ಹಣದ ಆಸೆ, ಚಾಕಲೆಟ್ ಕೊಟ್ಟು ಅಪ್ರಾಪ್ತ ಬಾಲಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ತಾನೇ ಅದರ ವಿಡಿಯೋ ಮಾಡಿಕೊಂಡು ಹಣಕ್ಕಾಗಿ ಸೆಕ್ಸ್ ಸೈಟ್‌ಗಳಿಗೆ ವಿಡಿಯೋ ಮಾರಾಟ ಮಾಡುತ್ತಿದ್ದ ವಿಕೃತ ಕಾಮುಕ.
ಬೆಂಗಳೂರು: ಬೆಳ್ಳಂಬೆಳಗ್ಗೆ ಕಾರು-ಲಾರಿ ನಡುವೆ ಭೀಕರ ಅಪಘಾತ; ತಾಯಿ ಮಗು ಸಾವು
ಅಪ್ರಾಪ್ತ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸ್ಥಳೀಯರಿಗೆ ರೆಡ್‌ಹ್ಯಾಂಡ್ ಆಗಿಬಿದ್ದ ಆರೋಪಿ. ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ ಜನರು. ಬಳಿಕ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಕಾಮುಕ. ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಪೊಲೀಸರು. ಈ ಹಿಂದೆ ಇದೇ ರೀತಿ ಮಕ್ಕಳಿಗೆ ವಂಚಿಸಿರುವ ಶಂಕೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ