ಮಹಾರಾಷ್ಟ್ರದ ಸೋಲಾಪುರದ ನೀರುಳ್ಳಿ ವ್ಯಾಪಾರಿಯೋವ೯ ಮಂಗಳೂರಿನ ವ್ಯಕ್ತಿಗೆ 75 ಲಕ್ಷ ರು.ವ೦ಚನೆ ಮಾಡಿರುವ ಬಗ್ಗೆ ಮ೦ಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು (ಅ.3): ಮಹಾರಾಷ್ಟ್ರದ ಸೋಲಾಪುರದ ನೀರುಳ್ಳಿ ವ್ಯಾಪಾರಿಯೋವ೯ ಮಂಗಳೂರಿನ ವ್ಯಕ್ತಿಗೆ 75 ಲಕ್ಷ ರು.ವ೦ಚನೆ ಮಾಡಿರುವ ಬಗ್ಗೆ ಮ೦ಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಅಬ್ದುಲ್ ರಹಿಮಾನ್ ಬಾವಾ ಎ೦ಬವರಿಗೆ ವ್ಯವಹಾರದ ಸಮಯ ಮಹಾರಾಷ್ಟ್ರದ ಸೋಲಾಪುರದ ಸಿದ್ದೇಶ್ವರ ಟ್ರೆಡರ್ಸ್ ನ ಕುಂಡಲಿಕ್ ಜುಂಬಾರ್ ಖಂಡಾಗಲೆ ವಂಚಿಸಿದ ಆರೋಪಿ.
ಆರ್ಡರ್ ಮಾಡದೆ ಮನೆಗೆ ಬಂತು ಸಾವಿರ ಕಾಂಡೋಮ್! ಹಣ ಕಟ್ ಆಗ್ತಿದ್ದಂತೆ ಮಹಿಳೆ ಕಂಗಾಲು
ಮಂಗಳೂರು ಮತ್ತು ಚೆನ್ನೈನಲ್ಲಿ ವ್ಯವಹಾರ ಹೊಂದಿರುವ ನೀರುಳ್ಳಿ ವ್ಯಾಪಾರಿಯು ಜನವರಿ 2021 ರಲ್ಲಿ ಪರಿಚಯವಾಗಿ ನಂತರ ಇತರ ಕೃಷಿ ಉತ್ಪನ್ನಗಳ ವ್ಯವಹಾರಗಳ ಮೂಲಕ ಆತ್ಮೀಯರಾಗಿದ್ದರು.
ನಂತರ ಆರೋಪಿ ಕುಂಡಲಿಕ್ ಜುಂಬಾರ್ ಖಂಡಾಗಲೆ ವಂಚಿಸುವ ಉದ್ದೇಶದಿಂದ ವ್ಯವಹಾರದಲ್ಲಿ ಒಳ್ಳೆಯ ಹೂಡಿಕೆ ಅವಕಾಶ ಇದೆ ಎಂಬುದಾಗಿ ನಂಬಿಸಿ ಮಂಗಳೂರಿಗೆ ಬಂದು ಆತನ ಮಾಲೀಕತ್ವದ ಸಿದ್ದೇಶ್ವರ ಟ್ರೇಡರ್ಸ್ ಗೆ ಅಬ್ದುಲ್ ರಹಿಮಾನ್ ಅವರ ಮಂಗಳೂರಿನ ಬ್ಯಾಂಕ್ ಖಾತೆಯಿ೦ದ ವಿವಿಧ ದಿನಗಳಲ್ಲಿ 75,00,000 ರು. ವನ್ನು ವರ್ಗಾಯಿಸಿ ನಂತರ ವಾಪಾಸು ನೀಡದೆ ವಂಚಿಸಿರುವುದಾಗಿ ಸೆನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಫೇಸ್‌ಬುಕ್ ದೋಖಾ: ಮದುವೆಯಾಗಿ 3 ತಿಂಗಳಾದ್ರೂ ದೈಹಿಕ ಸಂಪರ್ಕ ಬೆಳಸದೇ ಚಿನ್ನಾಭರಣ ಕದ್ದು ಪರಾರಿಯಾದ ಲೇಡಿ