ನನಗೆ ನನ್ನ ಗಂಡ ಬೇಕು.. ನನಗೆ ನನ್ನ ಹೆಂಡತಿ ಬೇಕು!
ಅಂಕಲ್ ಅಫೀಸ್ಗೆ ಆಂಟಿ ಮತ್ತೊಬ್ಬ ಅಂಕಲ್ ಜೊತೆ ಎಸ್ಕೇಪ್..!
ಕೆಲಸಕ್ಕೆ ಅಂತ ಅವನು ..ಶಾಲೆಗೆ ಅಂತ ಅವಳು ಹೋದವಳು ಸುಳಿವೇ ಇಲ್ಲ
ಬೆಂಗಳೂರು (ಜ.21): ನಾವು ಅದೆಂಥೆಂಥ ಲವ್ ಸ್ಟೋರಿಗಳನ್ನ ನೋಡಿಲ್ಲ.. ಕೇಳಿಲ್ಲ.. ಇನ್ನೂ ಸಿನಿಮಾಗಳಲ್ಲಂತೂ ಬಿನ್ನ ವಿಭಿನ್ನ ಪ್ರೇಮ್ ಕಹಾನಿಗಳನ್ನ ತೋರಿಸುತ್ತಾರೆ. ಆದರೆ ನಾವು ಇವತ್ತು ಇದುವರೆಗೂ ಕಂಡು ಕೇಳರಿಯದ ಲವ್ ಸ್ಟೋರಿಯೊಂದನ್ನ ಹೇಳಲಿದ್ದೇವೆ. ಇದು ಅಪರೂಪದಲ್ಲೇ ಅಪರೂಪದ ಲವ್ ಸ್ಟೋರಿ.. ಯಾಕಂದ್ರೆ ಇಲ್ಲಿ ಲವ್ ಆಗಿರೋದು ಯುವಕ ಯುವತಿಗೆ ಅಲ್ಲ.. ಬದಲಿಗೆ ಅಂಕಲ್ ಆಂಟಿಗೆ..
ಬೆಂಗಳೂರಿನ ಒಂದೇ ಬಿಲ್ಡಿಂಗ್‌ನಲ್ಲಿ ಎರಡು ಕುಟುಂಬಗಳ ಅಂಕಲ್, ಆಂಟಿ ನಡುವೆ ಅಲ್ಲಿ ಲವ್ ಆಗಿಬಿಟ್ಟಿತ್ತು. ಎಲ್ಲಾ ಪ್ರೇಮಿಗಳಂತೆ ಇಬ್ಬರೂ ಓಡಿ ಹೋಗಿದ್ದಾರೆ. ಆದರೆ ಅಂಕಲ್, ಆಂಟಿ ಎಸ್ಕೇಪ್ ಆದರೆ ಅವರ ಗಂಡ ಮತ್ತು ಹೆಂಡತಿ ಪೊಲೀಸ್ ಸ್ಟೇಷನ್‌ಗೆ ಹೋಗಿದ್ದಾರೆ. ಅಲ್ಲಿ ಓಡಿ ಹೋದ ಅಂಕಲ್, ಆಂಟಿಯ ಪತ್ತೆ ಇಲ್ಲದಿದ್ದರೆ ಇತ್ತ ಓಡಿ ಹೋದ ಅಂಕಲ್‌ನ ಹೆಂಡತಿ ಮತ್ತು ಓಡಿಹೋದ ಆಂಟಿಯ ಗಂಡ ಒಟ್ಟಿಗೇ ಪೊಲೀಸ್ ಸ್ಟೇಷನ್‌ಗೆ ಬಂದಿದ್ದಾರೆ. ಹೀಗೆ ಒಂದೇ ಕಟ್ಟಡದಲ್ಲಿ ವಾಸವಿದ್ದ ಅಂಕಲ್, ಆಂಟಿಯ ಪ್ರೇಮ್ ಕಹಾನಿ ಮತ್ತು ಆ ಕಹಾನಿಯ ರೋಚಕ ಮುಂದಿದೆ ನೋಡಿ..
ಪ್ರಿಯಕರನಿಗಾಗಿ ಹೆತ್ತವರನ್ನೇ ಮರೆತಳು: ಕೊನೆಗೆ 'ಕೀಚಕ'ನಿಗಾಗಿ ಹೆಣವಾದಳು
ಗಂಡ ಹೆಂಡತಿಗಾಗಿ ಪೊಲೀಸ್ ಠಾಣೆಗೆ ದೂರು: ಹೌದು... ದೂರು ನೀಡಲು ಬಂದವಳ ಗಂಡ ಮತ್ತು ದೂರು ನೀಡಲು ಬಂದಿದ್ದವನ ಹೆಂಡತಿ ಇಬ್ಬರೂ ಎಸ್ಕೇಪ್ ಆಗಿದ್ದರು. ಆದರೆ, ಅವರಿಬ್ಬರು ಎಸ್ಕೇಪ್ ಆಗೋವರೆಗೂ ಇವರುಗಳಿಗೆ ತಾವು ಮದುವೆಯಾದವರು ಇಂಥಹದೊಂದು ಆಟವಾಡುತ್ತಿದ್ದಾರೆ ಎನ್ನುವುದೇ ಗೊತ್ತಿರಲಿಲ್ಲ.. ಆದರೆ ಇವತ್ತು ತಮ್ಮ ಮರ್ಯಾದೆ ಬಿಟ್ಟು ಅವರು ಊರು ಬಿಟ್ಟಿದ್ದರೆ, ಮನೆಯಲ್ಲಿದ್ದವರು ಪೊಲೀಸ್ ಠಾಣೆ ಎದುರು ಬಂದು ನಿಂತಿದ್ದಾರೆ. 12 ವರ್ಷ ಸಂಸಾರ ಮಾಡಿದವನು ಇದ್ದಕ್ಕಿದ್ದಾಗೆ ಬದಲಾಗಿಬಿಟ್ಟಿದ್ದನು.
ಒಂದೇ ಕಟ್ಟಡದಲ್ಲಿ ಇಬ್ಬರು ನಾಪತ್ತೆ: ಒಂದೇ ಕಟ್ಟಡದಲ್ಲಿ ಇದ್ದು ಓಡಿ ಹೋದ ಅಂಕಲ್‌ನ ಹೆಸರು ನವೀದ್ ಹಾಗೂ ಆಂಟಿಯ ಹೆಸರಿ ಶಾಜಿಯಾ ಆಗಿದೆ. ಒಂದೇ ಕಟ್ಟಡದಲ್ಲಿ ಎರಡು ಮಿಸ್ಸಿಂಗ್ ಕೇಸ್ ದಾಖಲಾದಾಗ ಸ್ವತಹ ಪೊಲೀಸರೇ ಸ್ವಲ್ಪ ಬೆಚ್ಚಿ ಬಿದ್ದಿದ್ದರು. ಆದರೆ, ಎರಡೂ ಪ್ರಕರಣಗಳ ತನಿಖೆಗಿಳಿದಾಗ ಪೊಲೀಸರಿಗೆ ಅಸಲಿ ಕಹನಿ ಗೊತ್ತಾಗಿತ್ತು. ಮಗುವನ್ನ ಶಾಲೆಗೆ ಬಿಟ್ಟು ಬರ್ತೀನಿ ಎಂದು ಶಾಜಿಯಾ ಮತ್ತು ಕೆಲಸಕ್ಕೆ ಹೋಗುತ್ತೇನೆ ಎಂದು ನವೀದ್ ಇಬ್ಬರೂ ಹೋಗಿದ್ದಾರೆ. ಆದರೆ, ಮನೆಯಿಂದ ಪ್ಲಾನ್ ಮಾಡಿಕೊಂಡೇ ಹೊರಗರ ಹೋಗಿದ್ದು, ಕಳೆದ ಒಂದೂವರೆ ತಿಂಗಳಾದರೂ ಮನೆಗೆ ವಾಪಸ್ ಬಂದಿಲ್ಲ. ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಸೆಟ್ಟಲ್ಲೇ ಮೀಟ್ ಆಗಿ ಲವ್‌ನಲ್ಲಿ ಬಿದ್ದ ಖ್ಯಾತ ಜೋಡಿಗಳು: ಸೀ'ರಿಯಲ್' ಲವ್ ಸ್ಟೋರಿ
ಮಕ್ಕಳು, ಕುಟುಂಬಸ್ಥರ ಸ್ಥಿತಿ ಅತಂತ್ರ: ನಿಜಕ್ಕೂ ಇದೊಂದು ವಿಚಿತ್ರ ಕೇಸ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ, ಅವರ ಮಕ್ಕಳು ಈಗ ಅಪ್ಪ, ಅಮ್ಮನಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಾಜಿಯಾ ಮತ್ತು ನವೀದ್ ಎಲ್ಲೇ ಇದ್ದರೂ ಬೇಗ ಹೊರ ಬಂದು ತಮ್ಮ ತಮ್ಮವರನ್ನ ಕೂಡಿಕೊಳ್ಳಲಿ. ಇಲ್ಲ ತಮ್ಮವರ ಜೊತೆ ಅವರಿಗೆ ಬದುಕಲು ಇಷ್ಟವಿಲ್ಲ ಎಂದಾದರೆ ನಾಲ್ಕು ಗೋಡೆ ಮಧ್ಯೆ ಕೂತು ಮಾತುಕತೆಯಲ್ಲಿ ಅದು ಬಗೆಹರಿಸಿಕೊಳ್ಳಲಿ. ಆದರೆ, ಎರಡು ಸಂಸಾರಗಳು ಈ ರೀತಿ ಬೀದಿಗೆ ಬಂದಿದ್ದು ನಿಜಕ್ಕೂ ಬೇಸರದ ಸಂಗತಿ.