ಸಾಮಾನ್ಯವಾಗಿ ಕಳ್ಳತನ ಮಾಡೋರು ಕ್ರೈಂ ಮಾಡಿದ ಮೇಲೆ ಊರು ಬಿಡೋದೆ ಹೆಚ್ಚು. ಕೆಲವರು ಕೃತ್ಯ ನಡೆಸೋ ಮುಂಚೇಯೇ ಎಸ್ಕೇಪ್ ಹೇಗೆ ಆಗ್ಬೇಕು. ಎಲ್ಲಿಗೆ ಹೋಗಬೇಕು ಅನ್ನೋ ಪ್ಲಾನ್ ಮಾಡಿರ್ತಾರೆ. ಆದರೆ ಇಲ್ಲೊಬ್ಬ ಡಿಫರೆಂಟ್ ಕಳ್ಳನಿದ್ದಾನೆ. ಕದ್ದ ಬಳಿಕವೂ ಪೊಲೀಸ್ ಠಾಣೆ ಪಕ್ಕದಲ್ಲೇ ಇದ್ದ ಮನೆಯಲ್ಲಿ ವಾಸವಿದ್ದ.
ವರದಿ: ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜ.21): ಕಳ್ಳತನ ಮಾಡಿದ ಮೇಲೆ ಸಾಮಾನ್ಯವಾಗಿ ಜನ ಏನ್ ಮಾಡ್ತಾರೆ. ಮೊದಲು ಊರ್ ಬಿಡ್ತಾರೆ. ಆದ್ರೆ ಇಲ್ಲೊಬ್ಬ ಬಾಡಿ ಬಿಲ್ಡರ್ ಪೊಲೀಸ್ ಠಾಣೆ ಪಕ್ಕದಲ್ಲೇ ಮನೆ ಮಾಡಿದ್ದ. ಸ್ಟೇಷನ್ ಎದುರು ಚಹಾ ಸವಿಯುತ್ತಾ ಏನೇನ್ ನಡಿತಾ ಇದೆ ಅಂತಾ ಕಣ್ಣು ಹಾಯಿಸ್ತಿದ್ದ. ಸಾಮಾನ್ಯವಾಗಿ ಕಳ್ಳತನ ಮಾಡೋರು ಕ್ರೈಂ ಮಾಡಿದ ಮೇಲೆ ಊರು ಬಿಡೋದೆ ಹೆಚ್ಚು. ಕೆಲವರು ಕೃತ್ಯ ನಡೆಸೋ ಮುಂಚೇಯೇ ಎಸ್ಕೇಪ್ ಹೇಗೆ ಆಗ್ಬೇಕು. ಎಲ್ಲಿಗೆ ಹೋಗಬೇಕು ಅನ್ನೋ ಪ್ಲಾನ್ ಮಾಡಿರ್ತಾರೆ. ಆದರೆ ಇಲ್ಲೊಬ್ಬ ಡಿಫರೆಂಟ್ ಕಳ್ಳನಿದ್ದಾನೆ ಆತನೆ ಈ ಮಂಜು ಅಲಿಯಾಸ್ ಜಿಮ್ ಮಂಜು. ಕಳ್ಳತನ ಮಾಡಿ ಪೊಲೀಸ್ ಠಾಣೆ ಸುತ್ತಮುತ್ತಲೇ ರೌಂಡ್ಸ್ ಹಾಕ್ತಿದ್ದ.
ಈ ಜಿಮ್ ಟ್ರೈನರ್ ಆಗಿದ್ದ ಮಂಜು ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆ ಪಕ್ಕದಲ್ಲೇ ಮನೆ ಮಾಡಿಕೊಂಡು 6 ತಿಂಗಳಿಂದ ವಾಸವಿದ್ದ. ಅಲ್ಲಿ ಕೊಡೊ 8 ಸಾವಿರ ಸಂಬಳ ಯಾವುದಕ್ಕೂ ಸಾಕಾಗ್ತಿರ್ಲಿಲ್ಲ. ಹಾಗಾಗಿ ಹಣ ಮಾಡೋ ಹುಚ್ಚಿಗೆ ಬಿದ್ದಿದ್ದ ಅದಕ್ಕಾಗಿ ಚೈನ್ ಸ್ನ್ಯಾಚ್ ಮಾಡೋಕೆ ಇಳಿದಿದ್ದ. ಅದರಂತೆ ಡಿಸಂಬರ್ 5 ರಂದು ಪೂರ್ಣಪ್ರಜ್ಙ ಲೇಔಟ್ ನಲ್ಲಿ ಮಹಿಳೆಯ ಸರ ಕಿತ್ತು ಪರಾರಿಯಾಗಿದ್ದ. ಹೀಗೆ ಸರಗಳ್ಳತನವಾದ ಮಾಹಿತಿ ಸಿಕೆ ಅಚ್ಚುಕಟ್ಟು ಪೊಲೀಸರಿಗೆ ಸಿಕ್ಕ ಕೂಡಲೆ ಇನ್ಸ್ ಪೆಕ್ಟರ್ ಉದಯರವಿ ಹೊಯ್ಸಳ ಜೀಪ್ ನಲ್ಲಿ ಘಟನಾ ಸ್ಥಳಕ್ಕೆ ಹೋಗ್ತಿದ್ದರು. ಆಗಷ್ಟೇ ಸರ ಕದ್ದ ಆರೋಪಿ ಹೊಯ್ಸಳ ವಾಹನ ಪಕ್ಕದಲ್ಲೇ ಹೋಗ್ತಿದ್ದ. ಈ ಎಲ್ಲಾ ವಿಚಾರವನ್ನು ಪೊಲೀಸರ ಮುಂದೆ ಹೇಳಿದ್ದಾನೆ.
Crime News: ವಿಟ್ಲ ಜಾತ್ರೆಯಲ್ಲಿ ಮಳಿಗೆ ಹಾಕಿದ್ದ ವ್ಯಕ್ತಿಗೆ ಪುಂಡರಿಂದ ಹಲ್ಲೆ, ಪತ್ನಿಯ ಮಾನಭಂಗಕ್ಕೆ
ಇದಿಷ್ಟೇ ಅಲ್ಲ. ಆರೋಪಿ ಸ್ಟೇಷನ್ ಪಕ್ಕದಲ್ಲೇ ಮನೆ ಮಾಡಿಕೊಂಡಿದ್ದ. ಆಗಾಗ ಸ್ಟೇಷನ್ ಮುಂದೇ ಇರೊ ಇದೇ ಬೇಕರಿಯಲ್ಲಿ ಟೀ ಕುಡಿತಾ ಪೊಲೀಸರ ಚಲನವಲನ ಗಮನಿಸ್ತಿದ್ದ. ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಈ ಎಲ್ಲಾ ವಿಚಾರ ಖಾಕಿಗೆ ಗೊತ್ತಾಗಿದೆ. ಹಾಗೆ ಸರಗಳ್ಳತನ ಮಾಡುವ ವೇಳೆ ಹಾಕಿದ್ದ ಶರ್ಟ್ ಅನ್ನು ಮನೆಯಲ್ಲಿ ಸುಟ್ಟುಹಾಕಿದ್ದ. ಮೊದಲ ಬಾರಿಗೆ ಕೃತ್ಯ ಎಸಗಿದ್ದ ಆರೋಪಿ ಪೊಲೀಸರು ಹಿಡಿತಾರೆ ಎಂಬ ಭಯಕ್ಕೆ ಸೊರಗಿ ಹೋಗಿದ್ದ. ಜಿಮ್ ಬಾಡಿ ಇದ್ದವನು 20 ದಿನದಲ್ಲಿ ಆಗಿದ್ದು ಬರೋಬ್ಬರಿ 20 ಕೆಜಿ ಸಣ್ಣ. ಸದ್ಯ ಆರೋಪಿಯನ್ನು ಬಂಧಿಸಿರೊ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ಬಂಧಿತನಿಂದ 2 ಲಕ್ಷ 20 ಸಾವಿರ ಮೌಲ್ಯದ 44 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಕಿದ ಶ್ವಾನವನ್ನು 'ನಾಯಿ' ಎಂದಿದ್ದಕ್ಕೆ 62 ವರ್ಷದ ವ್ಯಕ್ತಿ ಕೊಲೆ..!
ಏನೇ ಹೇಳಿ ಕಟ್ಟಯಮಸ್ತಾದ ದೇಹವಿತ್ತು. ಪ್ರಾಮಾಣಿಕವಾಗಿ ದುಡಿದು ತಿಂದಿದ್ದರೆ ಒಂದೊಳ್ಳೆ ಬದುಕು ಕಟ್ಟಿಕೊಳ್ಳಬಹುದಿತ್ತು. ಆದರೆ ಅಡ್ಡದಾರಿ ಹಿಡಿದವನು ಜೈಲುಪಾಲಾಗಿದ್ದಾನೆ. ಪೊಲೀಸರ ಸುತ್ತಮುತ್ತನೇ ಓಡಾಡ್ಕೊಂಡು ಇದ್ದನ ಕೈಗೆ ಕೋಳ ತೊಡಿಸಲಾಗಿದೆ.