ಥಾಯ್ಲೆಂಡ್ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಬಾತ್‌ಟಬ್‌ನಲ್ಲಿ ಉತ್ತರ ಪ್ರದೇಶದ ವೈದ್ಯನ ಪತ್ನಿ ಶವವಾಗಿದ್ದಾರೆ! ನಟಿ ಶ್ರೀದೇವಿ ನಿಗೂಢ ಸಾವನ್ನು ಈ ಘಟನೆ ನೆನಪಿಸುತ್ತಿದೆ ಎನ್ನಲಾಗುತ್ತಿದೆ. ಆಗಿದ್ದೇನು?
ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅಂತ್ಯ (sad end) ಕಂಡವರು. 80-90ರ ದಶಕದಲ್ಲಿ ಬಾಲಿವುಡ್ ಚಿತ್ರದಲ್ಲಿ ನಂ.1 ಪಟ್ಟವನ್ನು ಯಾರಿಗೂ ಬಿಟ್ಟುಕೊಡದಿದ್ದ ಚೆಲುವೆ ಶ್ರೀದೇವಿ (Shreedevi). ತಮ್ಮ ಮುಗ್ಧ ಮುಖ, ಮನೋಜ್ಞ ನಟನೆ, ಸರಳ ವ್ಯಕ್ತಿತ್ವದ ಮೂಲಕ ಇವರು ಎಲ್ಲರ ಮನಸ್ಸು ಕದ್ದವರು. 2018ರಲ್ಲಿ ಸಾವನ್ನಪ್ಪಿದ ಈಕೆ ನಿಧನರಾಗಿ ಆರು ವರ್ಷಗಳು ಕಳೆದಿವೆ. ಬಾತ್‌ಟಬ್‌ನಲ್ಲಿ ನಿಗೂಢವಾಗಿಯೇ ಈಕೆ ಅಂತ್ಯ ಕಂಡರು ಸೌದಿಗೆ ಪತಿಯ ಜೊತೆ ಹೋಗಿದ್ದ ಈಕೆ ಸಾಯುವ ಕೆಲವು ದಿನಗಳ ಘಟನೆಗಳು ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದು ಬಿಟ್ಟಿದೆ. ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ (Secret) ಕೊನೆಗೂ ರಿವೀಲ್ ಆಗಲೇ ಇಲ್ಲ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವುದು ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ.
ಇದೀಗ ಅಂಥದ್ದೇ ಘಟನೆ ಮತ್ತೊಮ್ಮೆ ಮರುಕಳಿಸಿದೆ. ಉತ್ತರ ಪ್ರದೇಶದ ಮಹಿಳೆಯೊಬ್ಬಳು ಪತಿಯ ಜೊತೆ ಥಾಯ್ಲೆಂಡ್ಗೆ ಹೋಗಿದ್ದು, ಅಲ್ಲಿಯ ಬಾತ್‌ಟಬ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 32 ವರ್ಷದ ಪ್ರಿಯಾಂಕಾ ಶರ್ಮಾ ಸಾವನ್ನಪ್ಪಿದವರು. ಈಕೆಯನ್ನು ಪತಿ ಡಾ. ಆಶಿಶ್ ಶ್ರೀವಾಸ್ತವ ಅವರೇ ಕೊಲೆ ಮಾಡಿದ್ದಾರೆ ಎನ್ನುವುದು ಕುಟುಂಬಸ್ಥರ ಆರೋಪ. ಈ ಕುರಿತು ಪ್ರಿಯಾಂಕಾ ತಂದೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯನಾಗಿರುವ ತಮ್ಮ ಅಳಿಯ ಮಗಳಿಗೆ ಇಂಜೆಕ್ಷನ್ ನೀಡಿ ಕೊಂದಿದ್ದಾನೆ, ಬಳಿಕ ಬಾತ್‌ಟಬ್‌ನಲ್ಲಿ ಹಾಕಿ, ಅಚಾನಕ್ ಸಾವು ಎಂದು ಬಿಂಬಿಸಲು ಹೊರಟಿದ್ದಾನೆ ಎಂದು ಅವರು ಆರೋಪಿಸಿದ್ದಾರೆ! ಪ್ರಿಯಾಂಕಾ ಶರ್ಮಾ ಅವರ ತಂದೆ ಪ್ರಕಾರ, ಆಶಿಶ್ ಮತ್ತು ಪ್ರಿಯಾಂಕಾ ಜನವರಿ 4 ರಂದು ತಮ್ಮ ಮಗ ಪ್ರಿಶು ಜೊತೆಗೆ ಥಾಯ್ಲೆಂಡ್ಗೆ ಹೋಗಿದ್ದರು. ಜನವರಿ 8 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪ್ರಿಯಾಂಕಾ ಸ್ನಾನದ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪತಿ ಕರೆ ಮಾಡಿ ತಿಳಿಸಿದ್ದಾರೆ. ಆದರೆ ಇದು ಕೊಲೆ ಎನ್ನುವುದು ನಮಗೆ ಗೊತ್ತಿದೆ ಎಂದು ಮೃತಳ ತಂದೆ ಸತ್ಯನಾರಾಯಣ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ.
ಪಲ್ಯ ಮಾಡಲು ರಾತ್ರಿ ಗ್ಯಾಸ್ ಮೇಲೆ ಕಾಬುಲ್ ಕಡಲೆ ಇಟ್ಟ ಯುವಕರು ಬೆಳಿಗ್ಗೆ ಹೆಣವಾದರು! ಆಗಿದ್ದೇನು?
ಪ್ರಿಯಾಂಕಾ 2017 ರಲ್ಲಿ ಇವರ ಮದುವೆಯಾಗಿತ್ತು. 2022ರವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಮಗ ಹುಟ್ಟಿದ ಬಳಿಕ ದಂಪತಿಯ ನಡುವೆ ಸಂಬಂಧ ಚೆನ್ನಾಗಿ ಇರಲಿಲ್ಲ. ಗಲಾಟೆ ಮಾಡುತ್ತಿದ್ದರು. ಪ್ರಿಯಾಂಕಾ ತಮ್ಮ ಪತಿಗೆ ಇನ್ನೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿದೆ ಮತ್ತು ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದರು. ಇದೇ ಇಬ್ಬರ ನಡುವೆ ಗಲಾಟೆಗೆ ಕಾರಣವಾಗಿತ್ತು ಎನ್ನುವುದು ಕುಟುಂಬಸ್ಥರ ಆರೋಪ. ಇದಾಗಲೇ ಈ ವಿಷಯವಾಗಿ 2022 ರಲ್ಲಿ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ಆದರೆ ಎರಡೂ ಕುಟುಂಬಗಳ ಮಧ್ಯಸ್ಥಿಕೆಯಿಂದ ಈ ವಿಷಯವನ್ನು ಬಗೆಹರಿಸಲಾಗಿತ್ತು.
ಜನವರಿ 7 ರಂದು ಮಗಳು ಕರೆ ಮಾಡಿ ರಾತ್ರಿ ಯಾವುದೇ ಆಹಾರ ಸೇವಿಸಿರುವುದಾಗಿ ತಿಳಿಸಿದ್ದಳು. ಆದರೆ ರಾತ್ರಿಯಿಡೀ ವಾಂತಿ ಮಾಡಿಕೊಂಡಿರುವುದಾಗಿಯೂ ಫೋನ್ನಲ್ಲಿ ಹೇಳಿದ್ದಳು. ಮರುದಿನ ಜನವರಿ 8 ರಂದು ಆಕೆಯ ಸಾವಿನ ಸುದ್ದಿ ತಿಳಿದಿದೆ ಎಂದು ತಂದೆ ಸತ್ಯನಾರಾಯಣ್ ಶರ್ಮಾ ಪೊಲೀಸರಿಗೆ ತಿಳಿಸಿದ್ದಾರೆ. ತನಿಖೆ ನಡೆಸಲಾಗುತ್ತಿದೆ.
ಸಲ್ಮಾನ್ ರಾತ್ರಿ ಐಶ್ವರ್ಯ ಮನೆಗೆ ಹೋಗ್ತಿದ್ದ, ಆದ್ರೆ... ಬ್ರೇಕಪ್ ಕಾರಣ ಹೇಳಿದ ಲೇಖಕ ಹನೀಫ್ ಜಾವೇರಿ