1 ವರ್ಷದಲ್ಲೇ ಕೋಟ್ಯಾಧೀಶೆಯಾದ ಶಿಕ್ಷಕಿ, ಇದೀಗ ಪೊಲೀಸರ ಅತಿಥಿ

By Suvarna NewsFirst Published Jun 6, 2020, 10:31 PM IST
Highlights

ಆಡಳಿತ ಮಂಡಳಿ ಕಣ್ಣಿಗೆ ಮಣ್ಣೆರಚಿ 25 ಶಾಲೆಗಳಿಂದ ಒಂದೇ ವರ್ಷದಲ್ಲಿ ಒಂದು ಕೋಟಿ ರೂ. ವೇತನ ಪಡೆದ ಚಾಲಾಕಿ ಶಿಕ್ಷಕಿಯನ್ನು ಕೊನೆಗೂ ಪತ್ತೆ ಮಾಡಲಾಗಿದೆ.

ಲಕ್ನೋ, (ಜೂನ್.06): ದುರ್ಬಲ ವರ್ಗದ ಬಾಲಕಿಯರಿಗಾಗಿ ಉತ್ತರ ಪ್ರದೇಶ ಸರಕಾರ ಸ್ಥಾಪಿಸಿರುವ ಕಸ್ತೂರ್‌ಬಾ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಕೆಲಸ ಮಾಡುತ್ತಿದ್ದ ಶಿಕ್ಷಕಿ ಒಂದೇ ವರ್ಷದಲ್ಲಿ ಕೋಟ್ಯಧಿಪತಿಯಾಗಿ  ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಹೌದು... 25 ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಕೆಲಸ ಮಾಡಿ 13 ತಿಂಗಳ ಅವಧಿಯಲ್ಲಿ 1 ಕೋಟಿ ರೂ. ಸಂಬಳ ಸಂಗ್ರಹಿಸಿದ ಶಿಕ್ಷಕಿ ಅನಾಮಿಕಾ ಶುಕ್ಲಾ ಎನ್ನುವರನ್ನ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. 

1 ವರ್ಷದಲ್ಲಿ 1 ಕೋಟಿ ರೂ. ಸ್ಯಾಲರಿ: ಶಿಕ್ಷಕಿಯ ಕೆಲಸ ಕಂಡು ದಂಗಾದ ಅಧಿಕಾರಿ ...! 

ರಾಜ್ಯದಲ್ಲಿ ಶಿಕ್ಷಕರ ದತ್ತಾಂಶ ಸಂಗ್ರಹದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. 2020ರ ಫೆಬ್ರವರಿವರೆಗೆ 13 ತಿಂಗಳಿನಿಂದ ಅನಾಮಿಕಾ ಶುಕ್ಲಾ 25 ಕಡೆಗಳಲ್ಲಿ ಏಕಕಾಲಕ್ಕೆ ಕರ್ತವ್ಯ ನಿರ್ವಹಿಸಿದ ಅಂಶ ಬಹಿರಂಗವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಹಾಜರಾತಿಯ ರಿಯಲ್‌ ಟೈಮ್‌ ಮಾನಿಟರಿಂಗ್‌ ನಡೆಯುತ್ತಿದ್ದರೂ ಶುಕ್ಲಾ ಈ ರೀತಿ ವಂಚನೆ ಮಾಡಿರುವುದು ಅಚ್ಚರಿ ಮೂಡಿಸಿತ್ತು

ಮೈನ್‌ಪುರಿ ಮೂಲದ ಈಕೆ ದಾಖಲೆಗಳ ಪ್ರಕಾರ ಎಲ್ಲ ಶಾಲೆಗಳಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಹಲವು ವರ್ಷಗಳಿಂದ ಈ ಶಾಲೆಗಳ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಈಕೆಯ ಹೆಸರಿದೆ. 

ಶಿಕ್ಷಕಿಯ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಬಂದ ದೂರಿ ಮೇಲೆ ಬೆನ್ನತ್ತಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಶಿಕ್ಷಕಿ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದರು.

ಈ ವಿಷಯ ಬೆಳಕಿಗೆ ಬಂದ ನಂತರ ಯುಪಿ ಶಿಕ್ಷಣ ಸಚಿವ ಡಾ.ಸತೀಶ್ ದ್ವಿವೇದಿ ಅವರು ಅನಾಮಿಕಾ ಶುಕ್ಲಾ ವಿರುದ್ಧ ತನಿಖೆ ಮತ್ತು ಎಫ್‌ಐಆರ್‌ಗೆ ಆದೇಶಿಸಿದ್ದರು. 

click me!