ಅತ್ತಿಗೆ ತಾಯಿ ಸಮಾನ ಅಂತ ಗೊತ್ತಿದ್ರು ಅಣ್ಣನ ಹೆಂಡ್ತಿಯೊಂದಿಗೆ ಚಕ್ಕಂದ: ನಂತ್ರ ಆಗಿದ್ದು ದುರಂತ

Published : Jun 06, 2020, 04:50 PM IST
ಅತ್ತಿಗೆ ತಾಯಿ ಸಮಾನ ಅಂತ ಗೊತ್ತಿದ್ರು ಅಣ್ಣನ ಹೆಂಡ್ತಿಯೊಂದಿಗೆ ಚಕ್ಕಂದ: ನಂತ್ರ ಆಗಿದ್ದು ದುರಂತ

ಸಾರಾಂಶ

ದೊಡ್ಡಪ್ಪನ ಮಗನ ಪತ್ನಿ ಅತ್ತಿಗೆಯಾಗುತ್ತಾಳೆ. ಅತ್ತಿಗೆ ತಾಯಿ ಸಮಾನ ಎಂದು ತಿಳಿದರೂ ಆಕೆಯೊಂದಿಗೆ ಚಕ್ಕಂದವಾಡಿದ್ದಾನೆ. ಬಳಿಕ ಆಗಿದ್ದ ದೊಡ್ಡ ದುರಂತ.

ಭುವನೇಶ್ವರ, (ಜೂನ್. 06): ಅತ್ತಿಗೆ ತನ್ನ ತಾಯಿಯ ಸಮಾನ ಎಂದು ತಿಳಿದರೂ ಆಕೆಯ ಜತೆ ಚಕ್ಕಂದವಾಡಲು ಹೋಗಿ ಇದೀಗ ಮಸಣ ಸೇರಿದ್ದಾನೆ.

ಹೌದು...ಅಣ್ಣನೊಬ್ಬ ತನ್ನ ಪತ್ನಿಯನ್ನು ಪ್ರೀತಿಸುತ್ತಿದ್ದ ಸಹೋದರ (ಚಿಕ್ಕಪ್ಪನ ಮಗ) ನನ್ನು ಬಾಣದ ಮೂಲಕ ಕೊಲೆ ಮಾಡಿದ್ದಾನೆ. ಶಂಕರ್ ಮುಂಡಾ ಎನ್ನುವಾತ ಕೊಲೆ ಮಾಡಿದ ನಂತರ ನೇರವಾಗಿ ಪೊಲೀಸರಿಗೆ ಶರಣಾಗಿದ್ದಾನೆ.

ಸ್ನೇಹಿತರ ಬಳಿ ಹೆಂಡತಿ ಕರೆದೊಯ್ದ ಗಂಡ, ಮಗುವಿನ ಎದುರೇ ತಾಯಿ ಮೇಲೆ ಅತ್ಯಾಚಾರ

ಈ ಘಟನೆ ಒಡಿಶಾದ ಕಿಯೊಂಜ್ಹಾರ ಜಿಲ್ಲೆಯ ಟೆಲ್ಕೊಯಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಾರಾಯಣಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಮೃತನನ್ನು ಜಿತು ಮುಂಡಾ ಎಂದು ಗುರುತಿಸಲಾಗಿದೆ. 

ಘಟನೆ ಹಿನ್ನೆಲೆ
ಶಂಕರ್ ಮುಂಡಾ ಸಂಬಂಧದಲ್ಲಿ ಮೃತ ಜಿತುಗೆ ಸಹೋದರ ಆಗಬೇಕು. ಆದರೆ ಮೃತ ಜಿತು ತನ್ನ ಸಹೋದರ ಶಂಕರ್ ಪತ್ನಿ ಅಂದರೆ ಅತ್ತಿಗೆಯನ್ನು ಪ್ರೀತಿಸುತ್ತಿದ್ದನು. ಅಲ್ಲದೇ ಆಕೆಯ ಜೊತೆ ಅನೈತಿಕ ಸಂಬಂಧ ಕೂಡ ಇಟ್ಟುಕೊಂಡಿದ್ದನು. 

ವಿಷಯ ತಿಳಿಯುತ್ತಿದ್ದಂತೆಯೇ ಶಂಕರ್, ಈ ರೀತಿ ಮಾಡದಂತೆ ಜಿತುಗೆ ಎಚ್ಚರಿಕೆ ನೀಡಿದ್ದಾನೆ. ಆದರೂ ಕೇಳದ ಜಿತು ಅತ್ತಿಗೆಯೊಂದಿಗೆ ಸಂಬಂಧವನ್ನು ಮುಂದುವರಿಸಿದ್ದನು. 

ಇದರಿಂದ ಕೋಪಗೊಂಡ ಶಂಕರ್ ಶುಕ್ರವಾರ ಸಹೋದರ ಜಿತು ಎದೆಗೆ ಬಿಲ್ಲಿನ ಬಾಣವನ್ನ ಬಿಟ್ಟು ಕೊಲೆ ಮಾಡಿದ್ದಾನೆ. ಪರಿಣಾಮ ಜಿತು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ಶಂಕರ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ