
ಭಗ್ನಪ್ರೇಮಿಯೊಬ್ಬ ಗರ್ಲ್‌ಫ್ರೆಂಡ್ (Girl Friend) ತನ್ನನ್ನು ಒಪ್ಪಿಕೊಳ್ಳಲಿಲ್ಲ ಅಂತ ಆಕೆಯನ್ನು ಕಟ್ಟಡವೊಂದರ 3ನೇ ಮಹಡಿಯಿಂದ ಎಸೆದು ಆಕೆಯನ್ನು ಸಾಯಿಸಿದ್ದಾನೆ (Murder). ಅಷ್ಟೇ ಅಲ್ಲದೆ, ಆಕೆಯ ಮೃತದೇಹದೊಂದಿಗೆ (Dead Body) ಆತ ಎಸ್ಕೇಪ್ ಆಗಿದ್ದಾನೆ. ಆದರೂ, ಪೊಲೀಸರು ಇವನನ್ನು ಬಿಟ್ಟಿಲ್ಲ ನೋಡಿ. ಉತ್ತರ ಪ್ರದೇಶದಲ್ಲಿ (Uttar Pradesh) ಈ ಘಟನೆ ನಡೆದಿದ್ದು, ಆಂಬುಲೆನ್ಸ್‌ನಲ್ಲಿ 22 ವರ್ಷದ ಯುವತಿಯ ಮೃತದೇಹದೊಂದಿಗೆ ಮೀರತ್ ಬಳಿ ಹೋಗುತ್ತಿದ್ದ ಆರೋಪಿ ಗೌರವ್‌ನನ್ನು (Gaurav) ಯುಪಿಯ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಮೃತಪಟ್ಟ ಯುವತಿಯನ್ನು ಶೀತಲ್ (Shetal) ಎಂದು ಗುರುತಿಸಲಾಗಿದ್ದು, ಗೌರವ್ ಆಕೆಯನ್ನು ಕೆಲ ಸಮಯದಿಂದ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಈ ಸಂಬಂಧ ಯುವತಿಯ ಕುಟುಂಬ ಈ ಹಿಂದೆ ಪೊಲೀಸರಿಗೂ ದೂರು ನೀಡಿದ್ದರು ಎಂದು ಮೃತ ಯುವತಿಯ ಸಹೋದರ ಕುನಾಲ್ ಹೇಳಿದ್ದಾರೆ.
ಇದನ್ನು ಓದಿ: Sharon Murder Case: ಬ್ರೇಕಪ್‌ಗೆ ಹಿಂಜರಿದ ಕಾರಣಕ್ಕೆ ನಡೆದ ಕೊಲೆ, ಕೊಲೆಗಾತಿಯ ತಾಯಿ, ಅಂಕಲ್ ಕೂಡ ಅರೆಸ್ಟ್!
ನೋಯ್ಡಾ ಸೆಕ್ಟರ್ 71ರಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಗೌರವ್ ಕೆಲಸ ಮಾಡುತ್ತಿದ್ದ. ಬಿಜ್ನೋರ್ ಮೂಲದ ಆತನಿಗೆ ಕಲ ವರ್ಷಗಳಿಂದ ಶೀತಲ್ ಪರಿಚಯವಿತ್ತು. ಆದರೆ, ಆಕೆ ಆತನೊಂದಿಗೆ ಹೆಚ್ಚು ಕ್ಲೋಸ್ ಆಗಿರಲಿಲ್ಲ. ಆದರೆ, ಗೌರವ್ ಶೀತಲ್‌ಗೆ ಕಿರುಕುಳ ನೀಡುತ್ತಿದ್ದ ಕಾರಣ ಅವರ ಕುಟುಂಬ ಸೆಪ್ಟೆಂಬರ್ 29 ರಂದು ಪೊಲೀಸರ ಮೊರೆ ಹೋಗಿ ದೂರನ್ನೂ ನೀಡಿದ್ದರು.
ನಂತರ, ಆತನನ್ನು ಬಂಧಿಸಲಾಗಿದ್ದರೂ, ಆಕೆಗೆ ತೊಂದರೆ ಕೊಡಲ್ಲ ಎಂದು ಗೌರವ್ ಭರವಸೆ ನೀಡಿದ ನಂತರ ಅವನನ್ನು ಬಿಟ್ಟು ಕಳಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿಕೊಂಡಿದ್ದಾರೆ. ಆದರೆ, ಗೌರವ್ ಜತೆ ಒಪ್ಪಂದ ಮಾಡಿಕೊಳ್ಳುವಂತೆ ಪೊಲೀಸರು ಕುಟುಂಬಕ್ಕೆ ಹೇಳಿದ್ದರು ಎಂದು ಶೀತಲ್ ಸಹೋದರ ಕುನಾಲ್ ಆರೋಪಿಸಿದ್ದರು.
ಇದನ್ನೂ ಓದಿ: ಗೆಳತಿಯೊಂದಿಗೆ ಮಾತಾಡಿದ್ದಕ್ಕೆ 19 ವರ್ಷದ ಸ್ನೇಹಿತನನ್ನು ಕೊಂದ ಯುವಕ
ಇನ್ನು, ಮಂಗಳವಾರ ಮತ್ತೆ ಗೌರವ್ ಉತ್ತರ ಪ್ರದೇಶದ ಹೋಶಿಯಾರ್‌ಪುರದ ಶರ್ಮಾ ಮಾರುಕಟ್ಟೆಯಲ್ಲಿ ಇನ್ಶೂರೆನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶೀತಲ್‌ಳನ್ನು ಭೇಟಿ ಮಾಡಿದ್ದ. ಆಕೆ, ಮತ್ತೆ ರಿಜೆಕ್ಟ್ ಮಾಡಿದಾಗ, ಆತ ಆ ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ಕೆಳಗೆ ಓಡಿದ ಗೌರವ್, ತಾನು ಆಕೆಯ ಸಹೋದರ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಶೀತಲ್ ಮೃತದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿದ್ದಾನೆ.
ಆಕೆಯ ಮೃತದೇಹವನ್ನು ಬಿಜ್ನೋರ್‌ಗೆ ತೆಗೆದುಕೊಂಡು ಹೋಗುತ್ತಿದ್ದು, ಅಲ್ಲಿ ಆಕೆಯ ಮೃತದೇಹದ ಅಂತ್ಯ ಸಂಸ್ಕಾರ ಮಾಡಲು ಪ್ಲ್ಯಾನ್ ಮಾಡಿದ್ದೆ ಎಂದು ಗೌರವ್ ಪೊಲೀಸರ ಎದುರು ಹೇಳಿಕೊಡಿದ್ದಾನೆ. ಅಲ್ಲದೆ, ಶೀತಲ್ ತನ್ನನ್ನು ಮದುವೆಯಾಗಿದ್ದಳು. ಆದರೂ, ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಳು ಎಂದೂ ಆರೋಪಿ ಗೌರವ್ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: ಕರ್ವಾ ಚೌತ್‌ಗಾಗಿ ಗರ್ಲ್‌ಫ್ರೆಂಡ್ ಜೊತೆ ಶಾಪಿಂಗ್, ನಡುರಸ್ತೆಯಲ್ಲೇ ಗಂಡನಿಗೆ ಗ್ರಹಚಾರ ಬಿಡಿಸಿದ ಹೆಂಡ್ತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ